ಬೆಂಗಳೂರು:ಆಕೆ ನೋಡೋಕೆ ಸುಂದರವಾಗಿದ್ದಳು. ಆಟೋ ಟ್ರೈವರ್​ ಜತೆ ಮದ್ವೆಯಾಗಿದ್ದ ಈಕೆ ಇಬ್ಬರು ಮಕ್ಕಳಿದ್ದರು. ಇವರಿಬ್ಬರ ದಾಂಪತ್ಯಕ್ಕೆ 16 ವರ್ಷ ಆಗಿತ್ತು. ಎಲ್ಲವೂ ಚೆನ್ನಾಗಿಯೇ ಇದೆ ಅನ್ನುವಷ್ಟರಲ್ಲಿ ಪತ್ನಿಯ ಪಾಲಿಗೆ ಆಕೆಯ ಸೌಂದರ್ಯವೇ ಮುಳುವಾಗಿ, ಗಂಡನ ಕೈಯಿಂದಲೇ ಆ್ಯಸಿಡ್​ ದಾಳಿಗೆ ಬಲಿಯಾದಳು.
ಇದು 2017ರ ಜುಲೈ 14ರಂದು ಕೆಂಪೇಗೌಡನಗರದಲ್ಲಿ ನಡೆದ ಘಟನೆ. ಪತ್ನಿ ಮೇಲೆ ಆ್ಯಸಿಡ್ ಎರಚಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 46ನೇ ಸಿಸಿಎಚ್ ನ್ಯಾಯಾಲಯ ತೀರ್ಪು ನೀಡಿದೆ. ಕೆಂಪೇಗೌಡನಗರ ಸನ್ಯಾಸಿ ಕ್ವಾರ್ಟಸ್ ನಿವಾಸಿ ಚನ್ನೇಗೌಡ ಶಿಕ್ಷೆಗೆ ಒಳಗಾದವ. 21 ವರ್ಷದ ಹಿಂದೆ ಮಂಜುಳಾ ಎಂಬಾಕೆಯನ್ನು ಚನ್ನೇಗೌಡ ಮದುವೆ ಆಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಇದರ ನಡುವೆ ಪತ್ನಿ ಸುಂದರವಾಗಿ ಇರುವ ಕಾರಣಕ್ಕೆ ಆಕೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ ಚನ್ನೇಗೌಡ ಪ್ರತಿದಿನ ಮನೆಯಲ್ಲಿ ಜಗಳ ಮಾಡುತ್ತಿದ್ದ. ಸೌಂದರ್ಯದಿಂದಲೇ ಬೇರೆಯವರನ್ನ ತನ್ನತ್ತ ಸೆಳೆಯುತ್ತಿದ್ದಾಳೆ ಅಂದು ಅನುಮಾನಿಸಿ ಕಿರುಕುಳ ನೀಡುತ್ತಿದ್ದ. ಕೊನೆಗೆ 2017ರ ಜುಲೈ 14ರಂದು ಪತ್ನಿ ಮೇಲೆ ಆ್ಯಸಿಡ್ ಎರಚಿದ್ದ. ಮುಖ, ಹೊಟ್ಟೆ, ಕೈ-ಕಾಲಲ್ಲಿ ಸುಟ್ಟ ಗಾಯಗಳಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮಂಜುಳಾ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಅಂದಿನ ಇನ್‌ಸ್ಪೆಕ್ಟರ್ ಎ.ಎಸ್. ವಿಶ್ವಾಸ್, ಆರೋಪಿ ಚನ್ನೇಗೌಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 46ನೇ ಸಿಸಿಎಚ್ ನ್ಯಾಯಾಲಯ ವಿಚಾರಣೆ ಕೈಗೊಂಡಾಗ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ಲತಾ, ದೂರುದಾರರ ಪರವಾಗಿ ವಾದಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ. ಮಂಜುನಾಥ್, ಅಪರಾಧಿ ಚನ್ನೇಗೌಡಗೆ ಆ್ಯಸಿಡ್ ಎರಚಿದ್ದಕ್ಕಾಗಿ 10 ವರ್ಷ ಜೈಲು ಮತ್ತು ಆ್ಯಸಿಡ್ ಎರಚಿ ಕೊಲೆ ಮಾಡಿದಕ್ಕೆ ಜೀವಾವಧಿ ಶಿಕ್ಷೆ ವಿಧಿಸಿ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ

ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − six =
Remember me
