ಬೀದರ್​:ಬ್ರಿಮ್ಸ್​ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಾರಾಮಾರಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರಾವಗಿದದ್ದು, ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇಂತಹ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಫೆರೋಜ್ ಖಾನ್ ಮತ್ತು ಇವರ ಮಕ್ಕಳು ಗಾಯಗೊಂಡಿದ್ದಾರೆ. ಫೆರೋಜ್​ ಪುತ್ರ ಮತ್ತು ರೌಫ್ ಎಂಬಾತನ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಸಂಬಂಧ ನಗರದ ಮನಿಯಾರ ತಾಲಿಮ್​ನಲ್ಲಿ ಅಬ್ದುಲ್ ರೌಫ್ ಹಾಗೂ ಫೆರೋಜ್​ ಪುತ್ರರ ನಡುವೆ ಮಾರಾಮಾರಿ ನಡೆದಿತ್ತು.
ಗಾಯಗೊಂಡ ಫೆರೋಜ್​ ಪುತ್ರರನ್ನು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ತುರ್ತು ಚಿಕಿತ್ಸಾ ಘಟಕಕ್ಕೆ ಬಂದ ಯುವಕರ ಗುಂಪು ಫೆರೋಜ್ ಮತ್ತು ಇವರ ಮಕ್ಕಳ ಮೇಲೆ ಖಾರದಪುಡಿ ಎರಚಿ ಆಸ್ಪತ್ರೆಯಲ್ಲಿದ್ದ ಪರಿಕರಗಳಿಂದಲೇ ಹಲ್ಲೆ ಮಾಡಿದೆ. ಈ ವೇಳೆ ಪರಸ್ಪರ ಮಾರಾಮಾರಿ ನಡೆದಿದ್ದು. ಘಟನೆಯಲ್ಲಿ ಗಂಭೀರವಾಗಿ ಅಬ್ದುಲ್ ರೌಫ್ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಫಿರೋಜ್ ಖಾನ್, ಅಫಸರ್ ಖಾನ್, ಅರಬಾಜ್ ಖಾನ್ ಸೇರಿ ಮತ್ತಿತರರು ಗಾಯಗೊಂಡಿದ್ದಾರೆ. ಆಸ್ಪತ್ರೆ ಬಳಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.
ಶಾಲೆಯಲ್ಲಿ ಅವಮಾನ: ಬೆಂಗಳೂರಲ್ಲಿ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ದೊಡ್ಡಪ್ಪನಿಂದಲೇ ಅತ್ಯಾಚಾರ, ತೀವ್ರ ರಕ್ತಸ್ರಾವವಾಗಿ 2 ವರ್ಷದ ಕಂದಮ್ಮ ಸಾವು: ಆನೇಕಲ್​ನಲ್ಲಿ ಅಮಾನುಷ ಘಟನೆ

ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eight =
Remember me
