ಕೋಲಾರ:ನಗರದ ಕೋಲಾರಮ್ಮ ಬಡಾವಣೆಯಲ್ಲಿ 23 ವರ್ಷದ ಯುವತಿಯೊಬ್ಬಳು ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅದೇ ಮನೆಯಲ್ಲಿ 2 ವರ್ಷದ ಹಿಂದೆ ಅಪ್ಪ ಮತ್ತು ಅಕ್ಕನೂ ಪ್ರಾಣಬಿಟ್ಟಿದ್ದರು…
ಕಾವ್ಯಾಂಜಲಿ ಮೃತಳು. ಕೋಲಾರ ತಾಲೂಕು ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಆಗಿದ್ದ ಕಾವ್ಯಾ, ತಾಯಿ ಜತೆ ವಾಸವಿದ್ದಳು. ಸೋಮವಾರ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಕಾವ್ಯಾ, ತಿನ್ನಲು ಹೊರಗಡೆ ಏನಾದರೂ ತಿಂಡಿ ತರುವಂತೆ ತಾಯಿಗೆ ಹೇಳಿದ್ದಳು. ತಾಯಿ ಪುಷ್ಟಲತಾ, ಇಷ್ಟೊತ್ತಿಗೆ ಏನೂ ಸಿಗಲ್ಲ. ಅಂಗಡಿಗಳು ಬಾಗಿಲು ಹಾಕಿರುತ್ತೆ ಎಂದರೂ ಬಲವಂತ ಮಾಡಿ ರಾತ್ರಿ ಕಳುಹಿಸಿದ್ದಳು. ಬಜ್ಜಿ-ಬೊಂಡ ಸಿಗಬಹುದೆಂದು ಹೊರ ಹೋದ ತಾಯಿ ವಾಪಸ್​ ಬಂದು ಬಾಗಿಲು ಬಡಿದರೂ ಮಗಳು ತೆಗೆದಿಲ್ಲ. ಮತ್ತೊಂದು ಕೀ ಬಳಸಿ ಬಾಗಿಲು ತೆರೆಯುತ್ತಿದ್ದಂತೆ ಮಗಳು ಶವವಾಗಿ ನೇತಾಡುತ್ತಿದ್ದಳು.ಇದನ್ನು ಓದಿರಿಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…
ಕಾವ್ಯಾಳ ಕುಟುಂಬದಲ್ಲಿ ಇದೇ ಮೊದಲ ಆತ್ಮಹತ್ಯೆಯಲ್ಲ. 2 ವರ್ಷದ ಹಿಂದೆ ಕಾವ್ಯಾಳ ತಂದೆ ನಾರಾಯಣಸ್ವಾಮಿ ಆತ್ಮಹತ್ಯೆಗೆ ಶರಣಾಗಿದ್ದರು. ತಂದೆ ಪಿಡಿಒ ಆಗಿದ್ದರಿಂದ ಅನುಕಂಪದ ಆಧಾರದಲ್ಲಿ ಕಾವ್ಯಾಗೆ ಕೆಲಸ ಸಿಕ್ಕಿತ್ತು. ಇದಾದ ಕೆಲವೇ ದಿನದಲ್ಲಿ ಕಾವ್ಯಾಳ ಅಕ್ಕನೂ ಆತ್ಮಹತ್ಯೆ ಮಾಡಿಕೊಂಡಿದ್ದಳು.  ಅಮ್ಮ ಮತ್ತು ಮಗಳು ಕಾವ್ಯಾ ಇಬ್ಬರೇ ಇದ್ದರು. ಗಂಡ ಮತ್ತು ಹಿರಿಯ ಮಗಳನ್ನು ಕಳೆದುಕೊಂಡ ಪುಷ್ಪಲತಾಗೆ ಕಿರಿಮಗಳು ಕಾವ್ಯಾಂಜಲಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇದೀಗ ಆ ಮಗಳೂ ಸಾವಿನ ಮನೆಯ ಕದತಟ್ಟಿದ್ದು, ಅಯ್ಯೋ ಮಗಳೇ ಎಂಥ ಕೆಲಸ ಮಾಡಿಬಿಟ್ಟವ್ವಾ… ಇನ್ನು ನನಗ್ಯಾರೆ.. ನನ್ನ ಬಿಟ್ಟು ಯಾಕವ್ವ ಹೋದೆ… ಎಂದು ಹೆತ್ತಮ್ಮ ಆಕ್ರಂದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ನೋಡೋಕೆ ಸುಂದರವಾಗಿದ್ದು, ಒಳ್ಳೆಯ ಕೆಲಸವೂ ಗಿಟ್ಟಿಸಿಕೊಂಡಿದ್ದ ಯುವತಿ ದುರಂತ ಅಂತ್ಯ ಕಾಣಲು ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರ ತನಿಖೆ ಬಳಿಕ ಬಯಲಾಗಬೇಕಿದೆ.
ಮಗಳ ಸಾವಿನಿಂದ ತಾಯಿ ಆಘಾತಕ್ಕೆ ಒಳಗಾಗಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ ಎಂದಿದ್ದಾರೆ. ಗ್ರಾಪಂ ಪಿಡಿಒ ಮಧುಮತಿ ಸಹ ಸಹದ್ಯೋಗಿ ಸಾವಿಗೆ ದಿಗ್ಭ$ಮೆ ವ್ಯಕ್ತಪಡಿಸಿ, ಕೆಲಸದಲ್ಲಿ ಯಾವುದೇ ಒತ್ತಡ ಇರಲಿಲ್ಲ, ಕಷ್ಟಗಳ ಬಗ್ಗೆ ಏನೂ ಹೇಳಿಕೊಂಡಿಲ್ಲ ಎಂದಿದ್ದಾರೆ. ಗ್ರಾಪಂ ಅಧ್ಯಕ್ಷ ಸಹ ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.
ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ

ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

ಗಂಡನಿದ್ದರೂ ಪರಪುರುಷನ ಜತೆ ಮಹಿಳೆಯ ಕಾಮದಾಟ! ಬೇಡ ಬೇಡ ಎಂದವನ ಉಸಿರನ್ನೇ ನಿಲ್ಲಿಸಿದ್ಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 10 =
Remember me
