ಬೆಳಗಾವಿ:ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8ಕ್ಕೆ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಆರಂಭವಾಗಿದೆ. ಶೇ.56.02 ಮತದಾನವಾಗಿದೆ. ಆರಂಭಿಕವಾಗಿ ಕಾಂಗ್ರೆಸ್​ ಮುನ್ನಡೆ ಸಾಧಿಸಿತ್ತಾದಾರೂ 21ನೇ ಸುತ್ತಿಗೆ ಬರುವಷ್ಟರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಬೆಳಗಾವಿಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನೇರ ಪೈಪೋಟಿ ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ಎರಡೂ ಪಕ್ಷಗಳು ಪ್ರತಿಷ್ಠೆಯನ್ನ ಪಣಕ್ಕಿಟ್ಟು ಹೋರಾಟ ನಡೆಸಿದ್ದು, ಗೆಲುವಿನ ಅಂತರ ಬಹಳ ಇರಲಾರದು ಎಂಬುದಕ್ಕೆ 21ನೇ ಸುತ್ತಿನ ಮತ ಎಣಿಕೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳೇ ಸಾಕ್ಷಿ.
ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್​ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರನ್ನು ಬಿಜೆಪಿ ಕಣಕ್ಕಿಳಿಸಿ, ಅನುಕಂಪದ ಮತಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಎದುರಾಳಿಯಾಗಿದ್ದಾರೆ. ಮರಾಠ ಸಮುದಾಯದ ಮತಗಳನ್ನು ಸೆಳೆಯಲೆಂದು ಎಂಇಎಸ್​ ಕೂಡ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿತ್ತು.
1ನೇ ಸುತ್ತುಬಿಜೆಪಿ- 6445ಕಾಂಗ್ರೆಸ್- 9613ಕಾಂಗ್ರೆಸ್​ಗೆ 3168 ಮತಗಳ ಮುನ್ನಡೆ
6ನೇ ಸುತ್ತುಕಾಂಗ್ರೆಸ್- 18004ಬಿಜೆಪಿ- 14418ಕಾಂಗ್ರೆಸ್​ಗೆ 3586 ಮತಗಳ ಮುನ್ನಡೆ
7ನೇ ಸುತ್ತುಕಾಂಗ್ರೆಸ್‌- 25432ಬಿಜೆಪಿ- 22780ಕಾಂಗ್ರೆಸ್​ಗೆ 2652 ಮತಗಳ ಮುನ್ನಡೆ
9ನೇ ಸುತ್ತುಕಾಂಗ್ರೆಸ್- 33841ಬಿಜೆಪಿ- 32272ಕಾಂಗ್ರೆಸ್​ಗೆ 1569 ಮತಗಳ ಮುನ್ನಡೆ
10ನೇ ಸುತ್ತುಬಿಜೆಪಿ-39631ಕಾಂಗ್ರೆಸ್-38170ಬಿಜೆಪಿಗೆ 1461 ಮತಗಳ ಮುನ್ನಡೆ
21ನೇ ಸುತ್ತುಬಿಜೆಪಿ-65854ಕಾಂಗ್ರೆಸ್-62828ಬಿಜೆಪಿಗೆ 3026 ಮತಗಳ ಮುನ್ನಡೆ
28ನೇ ಸುತ್ತುಬಿಜೆಪಿ- 1,13,912ಕಾಂಗ್ರೆಸ್- 1,04,133ಬಿಜೆಪಿಗೆ 9779 ಮತಗಳ ಮುನ್ನಡೆ
ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ ಉಸಿರಾಟದ ಅನುಭವ, ರಾತ್ರೋರಾತ್ರಿ ಸ್ಥಳಕ್ಕೆ ದೌಡಾಯಿಸಿದ ಜನ

ಮಸ್ಕಿ ಕ್ಷೇತ್ರದ ಉಪ ಚುನಾವಣೆ: 5ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್​

ಕರೊನಾ ಭೀತಿ ನಡುವೆ ವಕ್ಕರಿಸಿದ ಮತ್ತೊಂದು ಕಾಯಿಲೆ! ಬೆಚ್ಚಿಬಿದ್ದ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
