ಹೊಸನಗರ:ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಯುವತಿ, ಒಂದು ವರ್ಷ ತುಂಬುವ ಮುನ್ನವೇ ದುರಂತ ಅಂತ್ಯ ಕಂಡಿದ್ದಾಳೆ.
ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾಡಿಗ್ಗೇರಿ ಉಮೇಶ್ ಪತ್ನಿ ಸೌಂದರ್ಯಾ(21) ಮೃತ ದುರ್ದೈವಿ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬೆಳಗೋಡು ಸಮೀಪದ ಗೋಳಗೊಂಡೆ ಗ್ರಾಮದ ಸೌಂದರ್ಯಾ ಮತ್ತು ಕಾಡಿಗ್ಗೇರಿ ಉಮೇಶ್ ನಡುವೆ ಫೇಸ್​ಬುಕ್​ನಿಂದ ಗೆಳೆತನ ಶುರುವಾಗಿ ಕ್ರಮೇಣ ಪ್ರೇಮಾಂಕುರವಾಗಿತ್ತು.
ಇವರಿಬ್ಬರ ಜಾತಿ ಬೇರೆ ಎಂಬ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇರಲಿಲ್ಲ. ವಿರೋಧದ ನಡುವೆಯೂ ಇವರಿಬ್ಬರೂ 2020ರ ನವೆಂಬರ್​ನಲ್ಲಿ ವಿವಾಹವಾಗಿದ್ದರು. ಎಲ್ಲಾದರೂ ಇರು, ಚೆನ್ನಾಗಿರು ಎಂದು ಹೇಳಿ ಆಕೆಯ ಪೋಷಕರೂ ಸುಮ್ಮನಾಗಿದ್ದರಂತೆ. 15 ದಿನದ ಹಿಂದೆ ಸೌಂದರ್ಯಳ ತಂಗಿ ಐಶ್ವರ್ಯಾ ಮೃತಪಟ್ಟಾಗ ಶವಸಂಸ್ಕಾರದ ವೇಳೆ ಉಮೇಶ್​ನೊಂದಿಗೆ ಹೋಗಿದ್ದಳು. ಜೂ.25ರಂದು ಸೌಂದರ್ಯ ಮೃತದೇಹ ಇವಳ ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅನುಮಾಸ್ಪದವಾಗಿ ಪತ್ತೆಯಾಗಿದೆ.
ಮಗಳ ಸಾವಿನಿಂದ ಆಕ್ರೋಶಗೊಂಡ ಆಕೆಯ ಪಾಲಕರು ಉಮೇಶನ ಮನೆಯ ಹತ್ತಿರವೇ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಅಲ್ಲದೆ ಸೂಕ್ತ ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ತೀರ್ಥಹಳ್ಳಿ ಡಿಎಸ್ಪಿ ಇ. ಶಾಂತವೀರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಸಿಪಿಐ ಜಿ.ಕೆ.ಮಧುಸೂದನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಸಹೋದರಿ ರೂಪಾ ಕಾರಣ. ಬೇರೆ ಜಾತಿ ಎಂಬ ಕಾರಣಕ್ಕೆ ನನ್ನ ಮಗಳಿಗೆ ಹಿಂಸೆ ನೀಡಿದ್ದಾರೆ. ಅಲ್ಲದೆ ಉಮೇಶನಿಗೆ ಬೇರೊಂದು ಮದುವೆ ಮಾಡಲು ಯೋಜನೆ ಮಾಡಿದ್ದರು ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಡಂದಿರ ಕಿರುಕುಳ: ತಂಗಿ ಸತ್ತ 17 ದಿನಕ್ಕೆ ಅಕ್ಕನೂ ಸಾವು! ಇವರಿಬ್ಬರ ದುರಂತ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

ವರದಕ್ಷಿಣೆ ಕಿರುಕುಳ: ಮದ್ವೆಯಾದ ಒಂದೇ ವರ್ಷಕ್ಕೆ ದುರಂತ ಅಂತ್ಯ ಕಂಡ 19 ವರ್ಷದ ಯುವತಿ!

ಕಡೂರಿನಲ್ಲಿ ಅಪ್ರಾಪ್ತ ಬಾಲಕನನ್ನು ಮದ್ವೆಯಾದ ಬೆಂಗಳೂರು ಯುವತಿ! ಮುಂದಾಗಿದ್ದೆಲ್ಲವೂ ಅವಾಂತರ

ವರದಕ್ಷಿಣೆ ದಾಹಕ್ಕೆ ಸಿವಿಲ್ ಇಂಜಿನಿಯರ್ ಪತ್ನಿ ಬಲಿ! ಮದ್ವೆ ಆದ ದಿನದಿಂದ ಗಂಡ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ

ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
