ಬೆಳಗಾವಿ:ಮಹಾರಾಷ್ಟ್ರದ ಮಾಜಿ ಸಿಎಂ, ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​ ಸಮ್ಮುಖದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿ, ಕನ್ನಡಿಗರನ್ನು ಮತ್ತೆ ಕೆಣಕಿದ್ದಾರೆ.
ನಗರದ ಜ್ಯೋತಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮರಾಠ ಕೋ-ಆಪರೇಟಿವ್​ ಬ್ಯಾಂಕ್​ನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಶರದ್​ ಪವಾರ್​ ಭಾಷಣ ಮಾಡುತ್ತಿದ್ದ ವೇಳೆ, ಎಂಇಎಸ್​ ಪುಂಡರು ನಾಡವಿರೋಧಿ ಘೋಷಣೆ ಕೂಗಿ ಮತ್ತೆ ಗಡಿವಿವಾದಕ್ಕೆ ತುಪ್ಪ ಸುರಿದಿದ್ದಾರೆ. ಭಾಷಣ ಆರಂಭಿಸುತ್ತಿದ್ದಂತೆಯೇ ಕಾರ್ಯಕರ್ತರು, ಬೆಳಗಾಂವ್​, ಕಾರವಾರ, ನಿಪ್ಪಾಣಿ, ಬೀದರ್​, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ರಲಾಚ್​ ಪಾಯಜೇ (ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್​, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು) ಎಂದು ಮರಾಠಿಯಲ್ಲಿ ಘೊಷಣೆ ಕೂಗಿದ್ದಾರೆ.
ಎಂಇಎಸ್​ ಪುಂಡರ ಘೋಷಣೆಗೆ ಕ್ಷಣಕಾಲ ದಂಗಾದ ಕಾರ್ಯಕ್ರಮ ಆಯೋಜಕರು, ಎಂಇಎಸ್​ ಕಾರ್ಯಕರ್ತರನ್ನು ಸಮಾರಂಭದಿಂದ ಹೊರಹಾಕುವ ಪ್ರಯತ್ನ ನಡೆಸಿದರಾದರೂ, ಸಾಧ್ಯವಾಗಲಿಲ್ಲ. ಘೋಷಣೆ ವೇಳೆ ಸುಮ್ಮನೆ ನಿಂತಿದ್ದ ಶರದ್​ ಪವಾರ್​ “ನಾನು ಭಾಷಣ ಆರಂಭಿಸಬಹುದಾ? ನಿಮ್ಮ ಅನುಮತಿ ಪಡೆದು ಭಾಷಣ ಶುರುಮಾಡುತ್ತೇನೆ” ಎನ್ನುತ್ತ ಮಾತು ಮುಂದುವರಿಸಿದರು. ಎಂಇಎಸ್​ ಮುಖಂಡ ದೀಪಕ ದಳವಿ, ಕೃಷ್ಣ ಮಾನಸೆ, ದೀಪಕ ಪವಾರ್​ ಇತರರು ಇದ್ದರು.
ತಡರಾತ್ರಿ ಬೈಕ್​ನಲ್ಲಿ ಮಹಿಳೆ ಶವ ಸಾಗಿಸುವಾಗ ರಾಮನಗರ ಡಿಸಿ ಕಚೇರಿ ಎದುರೇ ಅಪಘಾತ! ಬಯಲಾಯ್ತು ಗಂಡ-ಹೆಂಡ್ತಿ ರಹಸ್ಯ

https://www.vijayavani.net/a-car-and-lorry-accident-in-tumkur-teacher-couple-life-is-end/
PSI ಹುದ್ದೆಗೆ ಆಯ್ಕೆಯಾಗಿದ್ದ ತಮ್ಮನ ಬಂಧನ ಬೆನ್ನಲ್ಲೇ ಅಣ್ಣ ಆತ್ಮಹತ್ಯೆ! ಸಾವಿನ ಸುತ್ತ ಅನುಮಾನದ ಹುತ್ತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
