ಬೆಂಗಳೂರು:ಆಂಟಿ ಎಂದು ಕರೆದಿರುವುದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬಳು ಎಟಿಎಂ ಭದ್ರತಾ ಸಿಬ್ಬಂದಿ​​ಯಾಗಿರುವ ವೃದ್ಧನ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಡೆದಿದ್ದೇನು?:ಕಳೆದ ಸೆಪ್ಟೆಂಬರ್ 19 ರಂದು ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ಘಟಕಕ್ಕೆ  ಹಣ ತುಂಬಲು ಅಧಿಕಾರಿಗಳು ಬಂದಿದ್ದರು. ಈ ವೇಳೆ ಅಡ್ಡ ನಿಂತಿದ್ದ ಮಹಿಳೆಗೆ ” ಆಂಟಿ ಸೈಡಿಗೆ ಬನ್ನಿ” ಎಂದು 64 ವರ್ಷದ ಸೆಕ್ಯುರಿಟಿ ಗಾರ್ಡ್ ಕೃಷ್ಣಯ್ಯ ಹೇಳಿದ್ದಾರೆ. ಆಂಟಿ ಎಂದಿದ್ದಕ್ಕೆ ಸಿಟ್ಟಾದ ಮಹಿಳೆ ನನ್ನೆ ಆಂಟಿ ಅಂತೀಯಾ ಎಂದು ಸೆಕ್ಯುರಿಟಿ ಗಾರ್ಡ್​​​​​ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು ದಾಂಧಲೆ ಎಬ್ಬಿಸಿದ್ದಾಳೆ. ಒಂದು ವಾರದ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
” ಆಂಟಿ ಸೈಡಿಗೆ ಬನ್ನಿ” ಎಂದಿದ್ದಕ್ಕೆ ಅಶ್ವಿನಿ ಎಂಬ ಮಹಿಳೆಯೊಬ್ಬಳು, ನನ್ನೆ ಆಂಟಿ ಅಂತೀಯಾ ಎಂದು ಸದ್ಯ ಹಲ್ಲೆಗೊಳಗಾದ ಎಟಿಎಂ ಭದ್ರತಾ ಸಿಬ್ಬಂದಿ​​ ಆಗಿರುವ ನನ್ನ  ಕಪಾಳಕ್ಕೆ ಚಪ್ಪಲಿಯಿಂದ ಹೊಡೆದಿದ್ದಾಳೆ ಎಂದು ಕೃಷ್ಣಯ್ಯ ಬೆಂಗಳೂರಿನ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಅಶ್ವಿನಿ ಎಂಬ ಮಹಿಳೆ ವಿರುದ್ದ IPC 506.504.324.355 ರ ಅಡಿ ಕೇಸ್ ದಾಖಲಾಗಿದೆ.
ಆ ಸಮಯದಲ್ಲಿ ನಾನು ಪ್ರಾಣ ಕಳೆದುಕೊಳ್ಳುವ ಬಗ್ಗೆ ಯೋಚಿಸಿದ್ದೇನು; ಕಮಲ್​ ಹಾಸನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + four =
Remember me
