ಕಳಸ:ಬೆಂಗಳೂರು ಕೆಂಗೇರಿಯ ಆಯುರ್ವೆದ ವೈದ್ಯರೊಬ್ಬರು ಕಳಸದ ಭದ್ರಾ ನದಿಯ ವಸಿಷ್ಠ ತೀರ್ಥದಲ್ಲಿ ಜಾರಿಬಿದ್ದು ನೀರು ಪಾಲಾಗಿದ್ದಾರೆ.
ಬೆಂಗಳೂರಿನ ಶ್ರೀ ಆಯುರ್ವೇದ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ರುದ್ರೇಶ್ ಮೃತರು. ಡಾ.ರುದ್ರೇಶ್ ಸೇರಿ 8 ಜನರು ಕಳಸಕ್ಕೆ ಶನಿವಾರ ಆಗಮಿಸಿ ಹೋಮ್ ಸ್ಟೇಯಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ 9 ಗಂಟೆ ಹೊತ್ತಿಗೆ ವಸಿಷ್ಠಾಶ್ರಮದ ಬಳಿ ಬಂದು ತೂಗುಸೇತುವೆ ಮತ್ತು ಸುಂದರ ಪರಿಸರ ವೀಕ್ಷಿಸಿದ್ದಾರೆ. ಡಾ.ರುದ್ರೇಶ್ ಮೆಟ್ಟಿಲಿಳಿದು ನದಿಯತ್ತ ಹೋಗಿದ್ದಾರೆ. ಮಳೆಗಾಲವಾದ್ದರಿಂದ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾರೆ.
ಸ್ಥಳಕ್ಕೆ ಎಸ್​ಡಿಆರ್​ಎಫ್ ತಂಡ, ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು, ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ. ವಸಿಷ್ಠ ತೀರ್ಥ ಅಪಾಯಕಾರಿ ಆಗಿರುವುದರಿಂದ ನೀರಿನಲ್ಲಿ ಮುಳುಗಿ ಹುಡುಕುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ.

ಡಾ. ರುದ್ರೇಶ್ ಅವರ ಪತ್ನಿ ಕೂಡ ವೈದ್ಯೆ. ಈ ದಂಪತಿ ನಾಲ್ಕು ವರ್ಷದ ಮಗಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಕಳಸ ಪೊಲೀಸರು, ಕಳಸ ಗ್ರಾಪಂ ಅಧ್ಯಕ್ಷೆ ಸುಜಯಾ ಸದಾನಂದ, ಪಿಡಿಒ ಕವೀಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಯನಾಡಿನಲ್ಲಿ ಮತ್ತೆ ನಕ್ಸಲ್ ಹೆಜ್ಜೆ: ಕರಪತ್ರ ಹಂಚಿ ಸಿಎಂಗೆ ಸವಾಲು ಹಾಕಿದ ನಕ್ಸಲ್​ ಪಡೆ

2022ರ ಮಾರ್ಚ್​ನಲ್ಲಿ ಕರ್ನಾಟಕದ ಸಿಎಂ ಆಗ್ತಾರೆ ಗಡ್ಡಧಾರಿ ವ್ಯಕ್ತಿ! ಭಾರೀ ಕುತೂಹಲ ಮೂಡಿಸಿದೆ ಈ ಭವಿಷ್ಯವಾಣಿ

ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
