ಭದ್ರಾವತಿ:ಅವರಿಬ್ಬರೂ ಸರ್ಕಾರಿ ನೌಕರರು. ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ದಾಂಪತ್ಯ ಬದುಕಿನ ಮುದ್ರೆ ಹಾಕಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರೂ ಪ್ರೇಯಸಿ ಜತೆಗೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅರೆ, ಇದ್ಹೇನಿದು? ಮದುವೆಗೆ ಹಿರಿಯರ ಸಮ್ಮತಿ ಸಿಗಲಿಲ್ಲ ಅಂತ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸೋದನ್ನು ನೋಡಿದ್ದೇವೆ, ಇಲ್ಲಿ ಒಪ್ಪಿಗೆ ಕೊಟ್ಟರೂ ಯಾಕೆ ಸಾಯಲು ನಿರ್ಧರಿಸಿದ್ರು ಅಂತ ಯೋಚಿಸ್ತೀದ್ದೀರಾ? ಹೌದು, ಇಂತಹ ವಿಚಿತ್ರ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದೆ. ಇದಕ್ಕೆಲ್ಲಾ ಕಾರಣ ಜ್ಯೋತಿಷಿ!
ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿರುವ ಯುವತಿ ಹಾಗೂ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್‌ಕುಮಾರ್ ಮೊಕಾಶಿ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ದಾಂಪತ್ಯ ಬದುಕು ಕಟ್ಟಿಕೊಳ್ಳಲು ಯಾವುದೇ ಅಡ್ಡಿ ಇರಲಿಲ್ಲ. ಎರಡೂ ಕಡೆಯ ಪಾಲಕರಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತ್ತು. ಮಗನ ದಾಂಪತ್ಯ ಬದುಕಿಗೆ ಯಾವುದೇ ವಿಘ್ನಗಳು ಬಾರದಿರಲಿ, ಏನಾದರೂ ವಿಘ್ನಗಳಿದ್ದರೆ ನಿವಾರಣೆ ಮಾಡಿಕೊಳ್ಳೋಣ ಎಂದು ಪ್ರವೀಣ್ ಅವರ ತಾಯಿ ಭಾವಿ ಸೊಸೆಯ ಜಾತಕ ತೆಗೆದುಕೊಂಡು ಜ್ಯೋತಿಷಿ ಬಳಿ ಹೋಗಿದ್ದಾರೆ. ಬಳಿಕ ಆಗಿದ್ದೆಲ್ಲವೂ ಮಹಾ ಯಡವಟ್ಟು.
ಜಾತಕ ನೋಡಿದ ಜ್ಯೋತಿಷಿ, ಹುಡುಗಿಗೆ ಕುಜ ದೋಷ ಇದೆ. ಈ ದೋಷ ಇದ್ದ ಹುಡುಗಿಯನ್ನು ಮದುವೆಯಾದರೆ ಮಗನಿಗೆ ಆಯಸ್ಸು ಕಡಿಮೆ ಆಗಲಿದೆ ಎಂದಿದ್ದಾನೆ. ಇದರಿಂದ ಆತಂಕಗೊಂಡ ಯುವಕನ ತಾಯಿ, ಮಗ ಮತ್ತು ಭಾವಿ ಸೊಸೆಗೆ ಈ ವಿಷಯ ತಿಳಿಸಿ ಮದುವೆ ಸಾಧ್ಯವಿಲ್ಲ ಎಂದಿದ್ದಾರೆ.
ಮದ್ವೆ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದ ಯುವತಿ, ಈ ವಿಷಯ ಕೇಳಿ ಗಾಬರಿಯಾಗಿದ್ದಾಳೆ. ಪ್ರಿಯಕರ ಪ್ರವೀಣ್‌ಕುಮಾರ್ ಮೊಕಾಶಿ ಕೆಲಸ ಮಾಡುತ್ತಿದ್ದ ಭದ್ರಾವತಿ ತಾಲೂಕಿನ ಉಬ್ರಾಣಿಗೆ ತೆರಳಿದ್ದಾಳೆ. ಆಗ ಒಂದಾಗಿ ಬದುಕಲು ಸಾಧ್ಯವಿಲ್ಲ ಎಂದಾದ ಮೇಲೆ ಒಂದಾಗಿ ಸಾಯೋಣ ಎನ್ನುವ ಮಾತುಗಳನ್ನು ಆಡಿದ್ದಾರೆ.
ಆಗ ಪ್ರವೀಣ್‌ಕುಮಾರ್ ಬೈಕ್​ನಲ್ಲಿ ಪ್ರಿಯತಮೆಯನ್ನ ಕೂರಿಸಿಕೊಂಡು ಅಡ್ಡಾದಿಡ್ಡಿ ಬೈಕ್ ಚಲಾಯಿಸಿಕೊಂಡು ಭದ್ರಾವತಿ ಎಪಿಎಂಸಿ ಯಾರ್ಡ್‌ಗೆ ಕರೆತಂದು, ವಿಷ ಕುಡಿಯೋಣ ಎಂದು ಹೇಳಿ ಮೊದಲು ಪ್ರಿಯತಮೆಗೆ ಕುಡಿಸಿದ್ದಾನೆ. ನಂತರ ಆತನೂ ಕುಡಿದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಯುವತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಪ್ರಿಯಕರ ಪ್ರವೀಣ್ ವಿಷ ಕುಡಿದದ್ದು ನನಗೆ ಕಾಣಲಿಲ್ಲ ಎಂದು ದೂರು ನೀಡಿದ್ದಾಳೆ.
ಈ ಘಟನೆ ನಡೆದಿದ್ದು ಮೇ 31ರಂದು. ಇದೀಗ ಮದುವೆಯಾಗಲು ನಿರಾಕರಣೆ ಹಾಗೂ ವಿಷ ಕುಡಿಯಲು ಕಾರಣ ಎನ್ನಲಾದ ಪ್ರವೀಣ್ ಹಾಗೂ ಆತನ ತಾಯಿ ಲಕ್ಷ್ಮೀ ವಿರುದ್ಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಗೊರವನಹಳ್ಳಿ ಸಮೀಪ ಘೋರ ಕೃತ್ಯ: 3 ವರ್ಷದ ಬಳಿಕ ಸಿಕ್ಕಿಬಿದ್ದವ ಬಾಯ್ಬಿಟ್ಟ ರಹಸ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
