ಚಾಮರಾಜನಗರ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ‘ಭಾರತ್​ ಜೋಡೋ ಯಾತ್ರೆ’ ಇಂದು(ಶುಕ್ರವಾರ) ಬೆಳಗ್ಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದೆ. ಯಾತ್ರೆ ಹಿನ್ನೆಲೆ ಇಂದು ಮತ್ತು ನಾಳೆ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.
ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಲೆಹೊಳೆ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು ಗುಂಡ್ಲುಪೇಟೆ ಕಗ್ಗಳದಹುಂಡಿ ಗ್ರಾಮದ ಕ್ರಾಸ್ ಬಳಿಯಿಂದ ಚೆನ್ನಮಲ್ಲಿಪುರ-ಹೊಂಗಹಳ್ಳಿ-ಮೂಕಹಳ್ಳಿ-ಮುಂಟಿಪುರ-ಬರಗಿ-ದೇಶಿಪುರ-ಆಲತ್ತೂರು ಮಾರ್ಗವಾಗಿ ಮೈಸೂರಿಗೆ ತೆರಳಬೇಕು.
ಕೇರಳದ ಸುಲ್ತಾನ್ ಬತ್ತೇರಿಯಿಂದ ಮೂಳೆಹೊಳೆ ಮಾರ್ಗವಾಗಿ ಊಟಿಗೆ ತೆರಳುವ ವಾಹನಗಳು ಗುಂಡ್ಲುಪೇಟೆಯ ಕಗ್ಗಳದಹುಂಡಿ ಕ್ರಾಸ್ ಬಳಿಯಿಂದ ಬೇರಂಬಾಡಿ-ಬೀಚನಹಳ್ಳಿ-ಲಕ್ಕಿಪುರ-ದೇವರಹಳ್ಳಿ-ಹಂಗಳ ಮಾರ್ಗವಾಗಿ ಊಟಿಗೆ ತೆರಳಬೇಕು.
ಊಟಿ ಕಡೆಯಿಂದ ಮೈಸೂರಿಗೆ ಬರುವ ವಾಹನಗಳು ಹಂಗಳ-ಹಂಗಳಪುರ-ಶಿವಪುರ-ಕೋಡಹಳ್ಳಿ-ಅಣ್ಣೂರು ಕೇರಿ ಮೂಲಕ ಗುಂಡ್ಲುಪೇಟೆ ಕೋಡಹಳ್ಳಿ ಸರ್ಕಲ್ ಬಳಿ ಚಾಮರಾಜನಗರ ರಸ್ತೆ ಮೂಲಕ ಮೈಸೂರಿಗೆ ತೆರಳಬೇಕು.
ಇಂದಿನಿಂದ ರಾಜ್ಯದಲ್ಲಿ ಭಾರತ್​ ಜೋಡೋ: ಇಮೇಜ್​ ಬದಲಿಸುವ ತವಕದಲ್ಲಿ ರಾಹುಲ್, 3 ಆಯಾಮದಲ್ಲಿ ಲಾಭದ ನಿರೀಕ್ಷೆ

ಗುಂಡ್ಲುಪೇಟೆಯಲ್ಲಿ ಒಂದೆಡೆ ಭಾರತ್ ಜೋಡೋ‌ ಯಾತ್ರೆ, ಮತ್ತೊಂದೆಡೆ ಲೋಕಾಯುಕ್ತ ದಾಳಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + one =
Remember me
