ಚಾಮರಾಜನಗರ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸಿದೆ. ತಮಿಳುನಾಡಿನ ಮೂಲಕ ಕರ್ನಾಟಕದ ಗುಂಡ್ಲುಪೇಟೆಗೆ ಶುಕ್ರವಾರ ಬೆಳಗ್ಗೆ ಆಗಮಿಸಿರುವ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೆಕ್ಕನಳ್ಳ ಕಾಡಿನ ದಾರಿಯಲ್ಲೇ ನಿಂತು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದರು.
ಕಾಫಿ-ತಿಂಡಿ ಮಾಡಲೆಂದು ಮಾರ್ಗಮಧ್ಯೆ ಗುಂಡ್ಲುಪೇಟೆಯ ಹಂಗಳ ಗ್ರಾಮದ ಖಾಸಗಿ ರೆಸಾರ್ಟ್​ಗೆ ರಾಹುಲ್​ ಗಾಂಧಿ ಅವರನ್ನು ಕಾಂಗ್ರೆಸ್​ ನಾಯಕರು ಕರೆದೊಯ್ದರು. ಬಳಿಕ ಗುಂಡ್ಲುಪೇಟೆಯತ್ತ ಹೊರಟರು. ಗುಂಡ್ಲುಪೇಟೆ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ಭಾವಚಿತ್ರದ ಬ್ಯಾನರ್, ಫ್ಲೆಕ್ಸ್​ಗಳೇ ರಾರಾಜಿಸುತ್ತಿವೆ.

ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದೆ. ಎರಡು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಲಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.
ಇಂದಿನಿಂದ ರಾಜ್ಯದಲ್ಲಿ ಭಾರತ್​ ಜೋಡೋ: ಇಮೇಜ್​ ಬದಲಿಸುವ ತವಕದಲ್ಲಿ ರಾಹುಲ್, 3 ಆಯಾಮದಲ್ಲಿ ಲಾಭದ ನಿರೀಕ್ಷೆ

ಪತ್ನಿಗೆ ಜೀವನಾಂಶ ನೀಡದೆ ಸತಾಯಿಸುತ್ತಿದ್ದ ಪತಿಗೆ ಜೈಲುಶಿಕ್ಷೆ! 22 ಲಕ್ಷ ರೂ. ಪಾವತಿಸಿದರಷ್ಟೇ ಶಿಕ್ಷೆಯಿಂದ ಪಾರು

ರೋಗಿ ಹೊಟ್ಟೆಯಲ್ಲಿತ್ತು 62 ಸ್ಪೂನ್! ತಪಾಸಣೆ ಮಾಡಿದ ವೈದ್ಯರೇ ಶಾಕ್​, ಆತನ ಮಾತು ಕೇಳಿದ್ರೆ ನೀವೂ ಶಾಕ್ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − sixteen =
Remember me
