ಚಿಕ್ಕಬಳ್ಳಾಪುರ:ಗೌರಿಬಿದನೂರು ನಗರ ಹೊರವಲಯದ ನರ್ಸಿಂಗ್ ಕಾಲೇಜು ಎದುರು ಕೊಲೆಯಾಗಿದ್ದ ಸರ್ಕಾರಿ ಶಾಲೆ ಶಿಕ್ಷಕನ ಪ್ರಕರಣ ಸಂಬಂಧ ನಾಲ್ವರು ಸಂಲಿಗಕಾಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜು.4ರ ರಾತ್ರಿ ಗೌರಿಬಿದನೂರು ನಗರದ ಸದಾಶಿವ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಒಳಗಡೆ ನಿಲ್ಲಿಸುವುದಾಗಿ ಹೊರ ಹೋಗಿದ್ದ ಭೂಮನಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ವಿಶ್ವನಾಥ್(42) ಅಂದು ಕಾಣೆಯಾಗಿದ್ದರು. ಹುಡುಕಿಕೊಂಡ ಹೊರಟ ಕುಟುಂಬಸ್ಥರಿಗೆ ಬೆತ್ತಲೆ ಸ್ಥಿತಿಯಲ್ಲಿ ಬರ್ಬರ ಹತ್ಯೆವಾಗಿ ಹತ್ಯೆಯಾಗಿದ್ದ ವಿಶ್ವನಾಥ್ ಮೃತದೇಹ ನರ್ಸಿಂಗ್ ಕಾಲೇಜು ಎದುರಿನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಂತಕರ ಪತ್ತೆಗೆ ಬಲೆ ಬೀಸಿದ್ದರು. ಸಲಿಂಗಕಾಮಿಗಳು ಶಿಕ್ಷಕ ವಿಶ್ವನಾಥ್​ರನ್ನು ಕೊಂದಿರುವ ಆಘಾತಕಾರಿ ಅಂಶ ತನಿಖೆಯಲ್ಲಿ ಬಯಲಾಗಿದ್ದು, ನಾಲ್ವರು ಸಲಿಂಗಕಾಮಿಗಳನ್ನು ಬಂಧಿಸಲಾಗಿದೆ. ಶಿಕ್ಷಕನನ್ನು ಸಲಿಂಗಕಾಮಕ್ಕೆ ಕರೆದಿದ್ದು, ಇದಕ್ಕೆ ಅವರು ಒಪ್ಪಿಲ್ಲ. ಕಾಮತೃಷೆ ತೀರಿಸದ ಹಿನ್ನೆಲೆ ಕಿಡಿಗೇಡಿಗಳು ಶಿಕ್ಷಕನನ್ನು ನಿರ್ಜನ‌ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳಾದ ಆಕಾಶ್, ಮನು, ಮಂಜುನಾಥ, ಶ್ರೀಕಾಂತ್ ಎಂಬುವರನ್ನು ಬಂಧಿಸಲಾಗಿದೆ.
‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

ಆಂಟಿಗೆ ನವವಿವಾಹಿತ ಯುವಕನ ಮೇಲೆ ಮೋಹ! ಮುಂದಾಗಿದ್ದು ಘನಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
