ಚಿಕ್ಕಬಳ್ಳಾಪುರ:ಗೌರಿಬಿದನೂರು ನಗರ ಹೊರವಲಯದ ನರ್ಸಿಂಗ್ ಕಾಲೇಜು ಎದುರು ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಬರ್ಬವಾಗಿ ಹತ್ಯೆ ಮಾಡಿದ್ದಾರೆ.
ವಿಶ್ವನಾಥ್(42) ಮೃತರು. ಭೂಮನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ವಿಶ್ವನಾಥ್, ಡಿ.ಪಾಳ್ಯ ಹೋಬಳಿಯ ಬಿ.ಬೊಮ್ಮಸಂದ್ರ ಗ್ರಾಮದವರು. ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಗೌರಿಬಿದನೂರು ನಗರದ ಸದಾಶಿವ ಬಡಾವಣೆಯಲ್ಲಿ ವಾಸವಿದ್ದರು. ಜು.4ರ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಒಳಗಡೆ ನಿಲ್ಲಿಸುವುದಾಗಿ ಹೊರ ಹೋದ ವಿಶ್ವನಾಥ್​ ವಾಪಸ್​ ಮನೆ ಒಳಗೆ ಬಾರಲೇ ಇಲ್ಲ.
ವಿಶ್ವನಾಥ್​ಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದರು. ಮರುದಿನ ಬೆಳಗ್ಗೆ ನರ್ಸಿಂಗ್ ಕಾಲೇಜು ಎದುರಿನ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿತ್ತು. ಯಾರೋ ಕಿಡಿಗೇಡಿಗಳು ವಿಶ್ವನಾಥ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳು ಸಿಕ್ಕ ಬಳಿಕ ಹತ್ಯೆಗೆ ಕಾರಣ ಏನೆಂದು ತಿಳಿಯಲಿದೆ.

ದಪ್ಪಗಿದ್ದವರಿಗೆ ಸಣ್ಣಗಾಗೋಕೆ, ಸಣ್ಣಗಿದ್ದವರಿಗೆ ದಪ್ಪಗಾಗೋಕೆ ಅಂತ ನ್ಯೂಟ್ರಿಷಿನ್ ಕ್ಲಬ್ ಅನ್ನೂ ವಿಶ್ವನಾಥ್​ ನಡೆಸುತ್ತಿದ್ದರು.(ದಿಗ್ವಿಜಯ ನ್ಯೂಸ್ ಚಿಕ್ಕಬಳ್ಳಾಪುರ)
ಹಸುಗೂಸನ್ನು ಆಸ್ಪತ್ರೆ ಟಾಯ್ಲೆಟ್​ನ ಕಿಟಕಿಗೆ ನೇತು ಹಾಕಿ ಕೊಂದ ತಾಯಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಭೀಕರ ಅಪಘಾತ: ಎಸ್ಸೆಸ್ಸೆಲ್ಸಿ ಎಕ್ಸಾಂ ಹಾಲ್​ಟಿಕೆಟ್​ ತರಲು ಶಾಲೆಗೆ ಹೊರಟಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಸಾವು!

ಕೈದಿಗಳ ಜತೆ ಜೈಲಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಹಿಳಾ ಪೊಲೀಸ್​ ಅಧಿಕಾರಿ! ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
