ಬೆಂಗಳೂರು:ಮಹಾಮಾರಿ ಕರೊನಾ ಬಂದ ನಂತರ ಪ್ರತಿಷ್ಠಿತ ಸ್ಟಾಫ್ಟ್​ವೇರ್​ ಕಂಪನಿಗಳು ಸೇರಿ ಹಲವು ಕಾರ್ಪೋರೇಟ್​​ ಸಂಸ್ಥೆಗಳಲ್ಲಿ “ವರ್ಕ್​ ಫ್ರಂ ಹೋಮ್​” ಪದ್ಧತಿ ಜಾಸ್ತಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು, “ಮನೆಯಿಂದಲೇ ಕೆಲಸ ಮಾಡಿ ಕೈ ತುಂಬಾ ಸಂಪಾದನೆ ಮಾಡಿ…” ಎಂದು ಜಾಹೀರಾತು ಕೊಟ್ಟು ಹೆಸರು ನೋಂದಣಿ ನೆಪದಲ್ಲಿ ಅಮಾಯಕರಿಂದ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೆರಡಲ್ಲ ಹತ್ತಾರು ವಂಚಕ ಸಂಸ್ಥೆಗಳು ಸೃಷ್ಟಿಯಾಗಿದ್ದು, ಎಲ್ಲವೂ ಒಂದೇ ಮಾದರಿಯಲ್ಲಿ ಮೋಸ ಮಾಡುತ್ತಿರುವುದು ವಿಶೇಷ.
ಫಾರ್ಮ್​ ತುಂಬುವ ಕೆಲಸದ ಹೆಸರಲ್ಲಿ ಮೋಸ ಮಾಡುತ್ತಿರುವ ಜಾಲಗಳ ಬಗ್ಗೆವಿಜಯವಾಣಿಕಚೇರಿಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ವಂಚಕ ಜಾಲಗಳು ಬಯಲಾಗಿವೆ. ಸಾರ್ವಜನಿಕರಿಗೆ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿರುವ ಮಾಹಿತಿ ಅನ್ವಯ ಶ್ರೀ ವಿನಾಯಕ ಮ್ಯಾನೇಜ್ಮೆಂಟ್​, ಶ್ರೀ ಸಾಯಿ ಮ್ಯಾನೇಜ್ಮೆಂಟ್​, ಶ್ರೀ ಓಂ ಸಾಯಿ ಮ್ಯಾನೇಜ್ಮೆಂಟ್​… ಹೀಗೆ ಬೇರೆಬೇರೆ ಸಂಸ್ಥೆಗಳ ಹೆಸರುಗಳಲ್ಲಿ ವಂಚಿಸಲಾಗುತ್ತಿದೆ. ಎಲ್ಲವೂ ಒಂದೇ ರೀತಿಯ ಫಾರ್ಮ್​ ತುಂಬುವ ಕೆಲಸ ಎಂಬ ಸಂದೇಶವನ್ನು ಕಳುಹಿಸಿ, ಮೋಸ ಮಾಡಿವೆ. ಕಚೇರಿ ಹೊಂದಿರುವುದಾಗಿ ಕೆಲವು ಸಂಸ್ಥೆಗಳು ಕೊಟ್ಟಿರುವ ವಿಳಾಸದಲ್ಲಿ ಕಚೇರಿಯೇ ಇಲ್ಲ.
ಆದರೆ, ವರ್ಕ್​ ಫ್ರಂ ಹೋಮ್​ ಕೆಲಸದ ಆಕಾಂಕ್ಷಿಗಳಿಗೆ ಮಾತ್ರ ನಾಲ್ಕೈದು ಕಚೇರಿಗಳನ್ನು ಹೊಂದಿರುವುದಾಗಿ ಯಾವುದೋ ಒಂದು ವಿಳಾಸ ಕೊಟ್ಟು ಯಾಮಾರಿಸುತ್ತಿದ್ದಾರೆ. ಯಾವುದೇ ನೇಮಕಾತಿ ಆದೇಶ ಪ್ರತಿಯಾಗಲಿ, ಎಷ್ಟು ಸಂಬಳ ಕೊಡಲಾಗುತ್ತದೆ ಎಂದಾಗಲಿ, ಕಚೇರಿ ಎಲ್ಲಿದೆ? ಮಾಲೀಕರು ಯಾರು? ಯಾವುದನ್ನೂ ಲಿಖಿತವಾಗಿ ಕೊಡುವುದಿಲ್ಲ. ಬರೀ ಮಾತಿನ ಮುಖೇನ ನಂಬಿಸಿ, ಅವರಿಂದಲೇ ಹಣ ಪಡೆದು ಮೋಸ ಮಾಡಲಾಗುತ್ತಿದೆ. ವಂಚನೆಗೆ ಸಂಬಂಧಪಟ್ಟಂತೆ ಆಡಿಯೋ ರೆಕಾರ್ಡ್​ಗಳು, ವಾಟ್ಸ್​ ಆ್ಯಪ್​ ಚಾಟ್ಸ್​, ಫೋನ್​ ಪೇ ಹಾಗೂ ಜೀ ಪೇ ಮೂಲಕ ವಂಚಕರು ಉದ್ಯೋಗಾಕಾಂಕ್ಷಿಗಳಿಂದ ಹಣ ವರ್ಗಾವಣೆ ಮಾಡಿಸಿಕೊಂಡಿರುವುದಕ್ಕೆ ದಾಖಲಾತಿಗಳುವಿಜಯವಾಣಿಬಳಿ ಇವೆ.
ವಂಚನೆ ಹೇಗೆ?:ವಿದ್ಯಾರ್ಥಿಗಳು, ಗೃಹಿಣಿಯರು, ವಯಸ್ಕರು ಮನೆಯಲ್ಲೇ ಕುಳಿತು ನಾವು ಕೊಡುವ ಫಾರ್ಮ್​ನಲ್ಲಿ ಅಂಕಿಗಳು ಮತ್ತು ಅಕ್ಷರಗಳನ್ನು ತುಂಬುವ ಹಾಗೂ ಬುಕ್​ ಬರೆಯುವ ಮೂಲಕ ತಿಂಗಳಿಗೆ 15 ರಿಂದ 20 ಸಾವಿರ ರೂ. ಗಳಿಸಿ ಎಂದು ಮೊಬೈಲ್​ ನಂಬರ್​ಗಳ ಸಮೇತ ಪತ್ರಿಕೆಗಳಲ್ಲಿ ಕ್ಲಾಸಿಫೈಡ್ಸ್​ ಜಾಹೀರಾತು ಪ್ರಕಟಿಸುತ್ತಾರೆ. ಅದನ್ನು ನೋಡಿ ಕರೆ ಮಾಡುವ ಸಾರ್ವಜನಿಕರಿಗೆ ಯಾವುದೋ ಒಂದು ಕಂಪನಿಯ ಹೆಸರೇಳಿ, ಬೆಂಗಳೂರಿನಲ್ಲಿ ಐದಾರು ಕಡೆ ಕಚೇರಿಗಳಿವೆ ಎಂದು ಯಾವುದೋ ವಿಳಾಸಗಳನ್ನು ಕೊಟ್ಟು ನಂಬಿಸಿ ವಂಚಿಸುತ್ತಾರೆ.
ಅಮಾಯಕರಿಗೆ ಮಾತಲ್ಲೇ ಗಾಳ!:ಒಂದು ಪುಸ್ತಕದಲ್ಲಿ ಎ4 ಅಳತೆಯ 60 ಫಾಮ್​ರ್ಗಳಿರುವ ಪ್ರಾಜೆಕ್ಟ್​ ವರ್ಕ್​ ಇದು. ಫಾರ್ಮ್​ ತುಂಬಲು ನೀವು ಒಪ್ಪಿದರೆ ಒಟ್ಟು ಫಾರ್ಮ್​ನ ಹಿಂದೆ ಮುಂದೆ ಸೇರಿ 120 ಪುಟಗಳನ್ನು ತುಂಬಬೇಕು. ಪ್ರಾಜೆಕ್ಟ್​ ಪೂರ್ಣಗೊಳಿಸಲು 7 ದಿನಗಳ ಕಾಲಾವಕಾಶ ಇರುತ್ತದೆ. ಸರಿಯಾದ ಸಮಯಕ್ಕೆ ಮುಗಿಸಿದರೆ 1 ಫಾಮ್​ರ್ಗೆ 25 ರೂ.ನಂತೆ 60 ಫಾರ್ಮ್​ಗೆ 3 ಸಾವಿರ ರೂ. ಕೊಡಲಾಗುತ್ತದೆ. ಪ್ರತಿವಾರ ಸಂಬಳ ಇರುತ್ತದೆ. 4 ರಿಂದ 5 ಪುಸ್ತಕ ಪೂರ್ಣಗೊಳಿಸಿದರೆ ತಿಂಗಳಲ್ಲಿ 10 ರಿಂದ 15 ಸಾವಿರ ರೂ. ಸಂಪಾದನೆ ಮಾಡಬಹುದು. ಬೇಕಾದ ಪುಸ್ತಕಗಳನ್ನೆಲ್ಲ ನಾವೇ ಕೊಡುತ್ತೇವೆ ಎಂದು ಆರಂಭದಲ್ಲಿ ನಂಬಿಸುತ್ತಾರೆ.
ತಲಾ ಒಬ್ಬರಿಂದ 1500 ರೂ. ವಸೂಲಿ!:ಫಾರ್ಮ್​ ತುಂಬುವ ಕೆಲಸ ಪಡೆಯಲು ಮೊದಲಿಗೆ 1500 ರೂ. ಠೇವಣಿ ಇಡಬೇಕು. ಇದರಲ್ಲಿ ಶಾಶ್ವತ ನೋಂದಣಿ ಶುಲ್ಕವಾಗಿ 500 ರೂ. ಇರುತ್ತದೆ. ಇದನ್ನು ಸಂಸ್ಥೆ ನಿಬಂಧನೆಗಳಿಗೆ ಅನುಗುಣವಾಗಿ ಯಾವಾಗ ಬೇಕಾದರೂ ಹಿಂಪಡೆಯಬಹುದು. ಇನ್ನುಳಿದ ಹಣ ಪ್ರಾಜೆಕ್ಟ್​ ವರ್ಕ್​ಗೆ ಅನುಮತಿ ನೀಡಿದ ಉದ್ಯೋಗ ಮಾಹಿತಿ ಕೇಂದ್ರದವರು ಜಾಹೀರಾತು ನೀಡಲು ಬಳಸಲಾಗುತ್ತದೆ ಎಂದೇಳಿ ಪುಸಲಾಯಿಸುತ್ತಾರೆ. ಫೋನ್​ ಪೇ ಹಾಗೂ ಜೀ ಪೇ ಮೂಲಕ 1500 ರೂ. ಹಾಕಿಸಿಕೊಂಡು, ನಂತರ ಸಂಪರ್ಕಕ್ಕೆ ಸಿಗದೆ ಮಾಯವಾಗುತ್ತಾರೆ.
ಶಿಕ್ಷಕಿಗೆ ಬುಕ್​ ಕಳಿಸಿ ಕೈಕೊಟ್ಟರು…:ಶ್ರೀ ವಿನಾಯಕ ಮ್ಯಾನೇಜ್ಮೆಂಟ್​ ಜಾಹೀರಾತು ನೋಡಿ ಶಿಕ್ಷಕಿಯೊಬ್ಬರು ಕರೆ ಮಾಡಿದ್ದರು. ಆಕೆಯಿಂದ ದಿವ್ಯಾ ಎನ್ನುವಾಕೆ ಜೀ ಪೇ ಮೂಲಕ 1500 ರೂ. ನೋಂದಣಿ ಶುಲ್ಕ ಹಾಕಿಸಿಕೊಂಡಿದ್ದರು. ನಂತರ ಕೊರಿಯರ್​ನಲ್ಲಿ ಪುಸ್ತಕ ಕಳುಹಿಸಿದ್ದರು. ಟೆಲಿಕಾಲರ್​ ಯುವತಿ ಹೇಳಿದಂತೆ ಫಾರ್ಮ್​ ತುಂಬಿ ವಾಪಸ್​ ಕಳುಹಿಸಿದ್ದರು. ಆದರೆ, ತಿಂಗಳುಗಳಾದರೂ ಸಂಬಳ ಹಾಕಿಲ್ಲ. ಜತೆಗೆ ವಾಟ್ಸ್​ಆ್ಯಪ್​ನಲ್ಲಿ ಸಂಪರ್ಕದಲ್ಲಿದ್ದ ಯುವತಿಯೂ ಪ್ರತಿಕ್ರಿಯೆ ನಿಲ್ಲಿಸಿ, ಸ್ವಿಚ್ಡ್​ ಆಫ್​ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ.
ಒಬ್ಬೊಬ್ಬರು ಒಂದೊಂದು ಹೇಳಿಕೆ:ಟೆಲಿಕಾಲರ್​ ಯುವತಿಗೆ ಕೆಲಸದ ಆಕಾಂಕ್ಷಿ ನೆಪದಲ್ಲಿವಿಜಯವಾಣಿಕಡೆಯಿಂದ ಕರೆ ಮಾಡಲಾಯಿತು. ಆಕೆ ನೋಂದಣಿ ಶುಲ್ಕವಾಗಿ 1500 ರೂ. ಪಾವತಿಸಿದರೆ ವರ್ಕ್​ ಕೊಡುವುದಾಗಿ ಹೇಳಿದಳು. ಇದೇ ಸಂಸ್ಥೆಯ ಮ್ಯಾನೇಜರ್​ಗೆವಿಜಯವಾಣಿಹೆಸರಲ್ಲೇ ಕರೆ ಮಾಡಿ ವಿಚಾರಿಸಿದಾಗ ಆತ ಬೇರೆಯದೇ ಕತೆ ಹೇಳಿದ. ಬೇರೆಬೇರೆ ಸಂಸ್ಥೆಗಳು ಮೋಸ ಮಾಡುತ್ತಿವೆ. ನಾವು ಮಾಡುತ್ತಿಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾನೆ.
ಮಂಡ್ಯದ ಕೆರೆ ಕಾಮೇಗೌಡ ಇನ್ನಿಲ್ಲ

ಅಂಗವಿಕಲೆ ಮೇಲೆ ಪೈಶಾಚಿಕ ಕೃತ್ಯವೆಸಗಿದ ಮೈದುನ: ತಂಗಿಯ ರಕ್ಷಣೆಗೆ ಹೋದ ಅಣ್ಣನಿಗೂ ಚಾಕು ಇರಿತ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
