ಬೆಂಗಳೂರು:ಬಿಗ್​ಬಾಸ್​ ಸೀಸನ್​- 8ಕ್ಕೆ ವರ್ಣರಂಜಿತ ತೆರೆಬಿದ್ದಿದ್ದು, ಮಜಾಭಾರತದ ಲ್ಯಾಗ್​ ಮಂಜು ಖ್ಯಾತಿಯ ಮಂಜು ಪಾವಗಡ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಅರವಿಂದ್​ ಕೆಪಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬಿಗ್​ಬಾಸ್​ನ ವಿನ್ನರ್​ ಪಟ್ಟದ ಜತೆಗೆ 53 ಲಕ್ಷ ರೂಪಾಯಿ ಮಂಜು ಅವರಿಗೆ ಸಿಕ್ಕಿದೆ. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದ ಮಂಜು ಅವರು ಜೀವನದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಲ್ಲರನ್ನೂ ನಗಿಸುತ್ತಲೇ ರಾಜ್ಯಾದ್ಯಂತ ಮನೆ ಮಾತಾದ ಮಂಜು ಅವರು ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಇದೇ ವೇಳೆ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ ವಿನ್ನರ್​ ಮಂಜು, ‘ನನ್ನ ತಾಯಾಣೆ ನಾನು ಅಷ್ಟೊಂದು ಹಣವನ್ನು ಎಂದಿಗೂ ನೋಡೇ ಇಲ್ಲ, ಕೇಳಿರೋದಷ್ಟೆ. ಏನು ಮಾಡಬೇಕು ಅಂತ ನನಗೆ ಗೊತ್ತಿಲ್ಲ. ಅಪ್ಪ-ಅಮ್ಮ ಅವರನ್ನು ನಾನು ಚೆನ್ನಾಗಿ ನೋಡಿಕೊಳ್ಳಬೇಕು. ಇದೇ ನನ್ನ ದೊಡ್ಡ ಆಸೆ’ ಎಂದು ಹೇಳಿದರು. ‘ದಿವ್ಯಾ ಸುರೇಶ್​ ನನ್ನ ಬೆಸ್ಟ್​ ಫ್ರೆಂಡ್​. ಒಳ್ಳೆಯ ಸ್ಪರ್ಧಿ ಕೂಡ’ ಎಂದು ಮಂಜು ಹೇಳಿದರು.
ಮಹಾಮಾರಿ ಕರೊನಾ ಲಾಕ್​ಡೌನ್​ನಿಂದ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸದಲ್ಲೇ ದಾಖಲೆ ಬರೆದ ಬಿಗ್​ಬಾಸ್​ 8ನೇ ಆವೃತ್ತಿಗೆ ಭಾನುವಾರ(ಆ.8) ವರ್ಣರಂಜಿತ ತೆರೆಬಿದ್ದಿದೆ.
‘ವಿಜಯಾನಂದ’ ಚಿತ್ರಕ್ಕೆ ಕಲಾವಿದರ ಹುಡುಕಾಟ: 7ರಿಂದ 70 ವರ್ಷದೊಳಗಿನವರಿಗೆ ಅವಕಾಶ…

ಕನ್ನಡ ಬಿಗ್​ ಬಾಸ್​ನಲ್ಲಿ ಇದುವರೆಗೂ ಯಾರೂ ಮಾಡಿರದ ದಾಖಲೆ ಬರೆದ ಮಂಜು ಪಾವಗಡ!

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು…

ಮೈಸೂರು ವಿವಿ ಪ್ರಾಧ್ಯಾಪಕ ಕಾಮಪುರಾಣ ಕೇಸ್​ಗೆ ಸ್ಫೋಟಕ ತಿರುವು! ಮರುದಿನವೇ ಉಲ್ಟಾ ಹೊಡೆದ ಸಂತ್ರಸ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + one =
Remember me
