ರಾಮನಗರ:ಅವರವರ ಕರ್ಮಕ್ಕೆ ತಕ್ಕ ಪ್ರತಿಫಲವನ್ನ ಅವರೇ ಅನುಭವಿಸಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು, ಇನ್ನು ಕೆಲವರಿಗೆ ತಕ್ಷಣವೇ ಕರ್ಮಫಲ ದೊರೆಯುತ್ತದೆ ಎಂಬ ಮಾತು ಅಕ್ಷರಶಃ ಈ ಪ್ರಕರಣಕ್ಕೆ ಸಾಕ್ಷಿ. ಮಹಿಳೆಯೊಬ್ಬರನ್ನ ಕೊಲೆ ಮಾಡಿ ಶವವನ್ನು ತಡರಾತ್ರಿ ಬೈಕ್​ನಲ್ಲಿ ಶವ ಸಾಗಿಸುತ್ತಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿ ಎದುರೇ ಆ ಬೈಕ್​ ಅಪಘಾತಕ್ಕೀಡಾಗಿದ್ದು, ಕೊಲೆ ರಹಸ್ಯ ಬಯಲಾಗಿದೆ!
ಇಂತಹ ಭಯಾನಕ ಘಟನೆ ರಾಮನಗರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಶ್ವೇತಾ ಕೊಲೆಯಾದಾಕೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಶ್ವೇತಾಳ ಶವವನ್ನ ಬೈಕ್​ನಲ್ಲಿ ಇಟ್ಟುಕೊಂಡು ಪುರುಷರಿಬ್ಬರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಾ ಬೇರೆಡೆಗೆ ಸಾಗಿಸುತ್ತಿದ್ದರು. ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೈಕ್​ ಸ್ಕಿಡ್​ ಆಗಿದ್ದು, ಅಪಘಾತ ಸಂಭವಿಸಿದೆ.
ಅಪಘಾತ ಸ್ಥಳಕ್ಕೆ ಬಂದ ನಗರ ಪೊಲೀಸರು ಬಂದಾಗ ಮಹಿಳೆ ಮೃತಪಟ್ಟಿರುವುದು ಗೊತ್ತಾಗಿದೆ. ಮೇಲ್ನೋಟಕ್ಕೆ ಅಪಘಾತದಕ್ಕೆ ಆಕೆ ಮೃತಪಟ್ಟಂತೆ ಕಂಡಿದೆ. ಮಹಿಳೆಯ ಶವವನ್ನ ತಪಾಸಣೆ ಮಾಡಿದ ಜಿಲ್ಲಾ ಆಸ್ಪತ್ರೆ ವೈದ್ಯರು, ಮಹಿಳೆ ಮೃತಪಟ್ಟು ಹಲವು ಗಂಟೆ ಕಳೆದಿದೆ ಎಂದಿದ್ದಾರೆ. ಅನುಮಾನಗೊಂಡ ಪೊಲೀಸರು, ಬೈಕ್​ ಸವಾರರಾದ ನಾಗರಾಜು ಮತ್ತು ವಿನೋದ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಗೆಳತಿ ಮನೆಯಲ್ಲೇ ಶ್ವೇತಾ ಸಾವು:ಶ್ವೇತಾ ಮತ್ತು ದುರ್ಗಾ ಇಬ್ಬರೂ ಸ್ನೇಹಿತರು. ಇವರಿಬ್ಬರಿಗೂ ಮದುವೆ ಆಗಿದೆ. ಗಂಡನಿಂದ ದೂರವಾಗಿ ನೊಂದಿದ್ದ ಶ್ವೇತಾಗೆ ದುರ್ಗಾ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್ದಳು. ಇತ್ತೀಚಿಗೆ ದುರ್ಗಾಳ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಆಗಿತ್ತಂತೆ. ಆಭರಣವನ್ನು ಶ್ವೇತಾಳೇ ಕದ್ದಿದ್ದಾಳೆ ಎಂದು ಆರೋಪಿಸಿದ್ದ ದುರ್ಗಾ ಜಗಳ ಮಾಡಿದ್ದಳು. ಇದೇ ವಿಚಾರವಾಗಿ ಸೋಮವಾರ ಮನೆಯಲ್ಲಿ ಗಲಾಟೆ ನಡೆದಿದ್ದು, ವಿಕೋಪಕ್ಕೆ ತಿರುಗಿದೆ. ಮನಸೋ ಇಚ್ಛೆ ಥಳಿಸಿದ ದುರ್ಗಾ, ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹಿಂಸಿಸಿದ್ದಳು. ಅಸ್ವಸ್ಥಗೊಂಡ ಶ್ವೇತಾ ಅಂದು ರಾತ್ರಿಯೇ ಮೃತಪಟ್ಟಿದ್ದಳು. ಶ್ವೇತಾಳ ಸಾವಿನ ಪ್ರಕರಣ ಮಚ್ಚಿ ಹಾಕಲು ದುರ್ಗಾ ಮತ್ತು ಈಕೆಯ ಗಂಡ ರಘು ಸಂಚು ರೂಪಿಸಿದ್ದರು. ಇದಕ್ಕೆ ದುರ್ಗಾಳ ಹೋದರ ನಾಗರಾಜು ಸಾಥ್​ ಕೊಟ್ಟಿದ್ದ. ಅದರಂತೆ ಅಭಿ ಮತ್ತು ವಿನೋದ್​ ಎಂಬುವವರ ಸಹಾಯವನ್ನೂ ಪಡೆದಿದ್ದರು. ಮಂಗಳವಾರ ರಾತ್ರಿ ಬೈಕ್​ನಲ್ಲಿ ಯಾರಿಗೂ ಅನುಮಾನ ಬಾರದಂತೆ ಶವವನ್ನು ಬೈಕ್​ನಲ್ಲಿ ಇಟ್ಟುಕೊಂಡು ನಾಗರಾಜ್​ ಮತ್ತು ವಿನೋದ್​ ರಾಜರಾಜೇಶ್ವರಿ ನಗರದಿಂದ ಹೊರಟಿದ್ದರು. ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೈಕ್​ ಅಪಘಾತಕ್ಕೀಡಾಗಿ ಕೊಲೆ ರಹಸ್ಯ ಬಯಲಾಗಿದೆ.(ದಿಗ್ವಿಜಯ ನ್ಯೂಸ್​, ರಾಮನಗರ)
https://www.vijayavani.net/a-car-and-lorry-accident-in-tumkur-teacher-couple-life-is-end/
ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ತಾಯಿ ಕಣ್ಣೆದುರೇ ಪ್ರಿಯಕರನೊಂದಿಗೆ ಪರಾರಿ​! ಕೊಳ್ಳೇಗಾಲದಲ್ಲಿ ಘಟನೆ

PSI ಹುದ್ದೆಗೆ ಆಯ್ಕೆಯಾಗಿದ್ದ ತಮ್ಮನ ಬಂಧನ ಬೆನ್ನಲ್ಲೇ ಅಣ್ಣ ಆತ್ಮಹತ್ಯೆ! ಸಾವಿನ ಸುತ್ತ ಅನುಮಾನದ ಹುತ್ತ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × three =
Remember me
