ತುಮಕೂರು:ವಿಧಿಯನ್ನೊಮ್ಮೆ ಶಪಿಸಬೇಕು ಅನ್ನಿಸುತ್ತೆ ಈ ಘಟನೆ ನೋಡಿದ್ರೆ. ಅವರಿಬ್ಬರು ಸ್ನೇಹಿತರು. ಒಟ್ಟಿಗೆ ಕುಳಿತು ನಮಾಜ್​ ಮುಗಿಸಿ ಊಟವನ್ನೂ ಮಾಡಿದ್ರು. ಇದಾದ ಕೆಲವೇ ಕ್ಷಣದಲ್ಲಿ ನಡುರಸ್ತೆಯಲ್ಲಿ ಇಬ್ಬರೂ ದುರಂತ ಅಂತ್ಯಕಂಡಿದ್ದಾರೆ.
ಲುಕ್ಸಾನ್(20) ಹಾಗೂ ಅಪ್ರೋಜ್ (18) ಮೃತ ದುರ್ದೈವಿಗಳು. ಲುಕ್ಸಾನ್ ತುಮಕೂರಿನ ಸದಾಶಿವನಗರದ ನಿವಾಸಿ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತ ಹೆಗ್ಗೆರೆಯ ನಿವಾಸಿ ಅಪ್ರೋಜ್ ಮನೆಗೆ ಪ್ರತಿ ದಿನ ಬಂದು ಬೆಳಗಿನಜಾವ ನಮಾಜ್ ಮಾಡಿ ನಂತರ ಊಟ ಮಾಡಿ ಲುಕ್ಸಾನ್ ವಾಪಸ್ ಆಗುತ್ತಿದ್ದ.ಇದನ್ನೂ ಓದಿರಿಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು
ಅದೆ ರೀತಿ ಇಂದು(ಬುಧವಾರ) ಕೂಡ ಬಂದಿದ್ದ. ಬೆಳಗ್ಗೆ 5 ಗಂಟೆಯಲ್ಲಿ ನಮಾಜ್ ಮುಗಿಸಿ, ಊಟ ಮಾಡಿದ ಬಳಿಕ ತನ್ನ ಸ್ನೇಹಿತನನ್ನು ತುಮಕೂರಿಗೆ ಬಿಟ್ಟು ಬರಲೆಂದು ಲುಕ್ಸಾನ್ ಜತೆ ಅಪ್ರೋಜ್ ಬೈಕ್​ನಲ್ಲಿ ಹೋಗುತ್ತಿದ್ದ. ಈ ವೇಳೆ ತುಮಕೂರು-ಗುಬ್ಬಿ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಸಿದ್ಧಾರ್ಥ ಡೆಂಟಲ್ ಕಾಲೇಜು ಮುಂಭಾಗ ತುಮಕೂರು ಕಡೆಯಿಂದ ಬಂದ ಅಪರಿಚಿತ ವಾಹನ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬೈಕ್​ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್​ಐ ಶಿವಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು

ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಸಂಬಂಧಿಕರ ಅಂತ್ಯಕ್ರಿಯೆಗೆ ಹೊರಟಿದ್ದವರ ಮೇಲೆ ಜವರಾಯನ ಅಟ್ಟಹಾಸ! ಸ್ಥಳದಲ್ಲೇ ಮೂವರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 4 =
Remember me
