ದೊಡ್ಡಬಳ್ಳಾಪುರ:ಬೈಕ್ ಮೇಲೆ ಕ್ಯಾಂಟರ್ ಹರಿದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 207ರ ಚುಂಚೇಗೌಡನ ಹೊಸಹಳ್ಳಿ ಗೇಟ್ ಬಳಿ ಸಂಭವಿಸಿದೆ. ತನ್ನ ಕಣ್ಣೆದುರೇ ವಿಲವಿಲ ಒದ್ದಾಡಿ ಮಗ ಪ್ರಾಣಬಿಟ್ಟಿದ್ದ ನೋಡಿದ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ.
ಅಂಬಲಗೆರೆಯ ನಿವಾಸಿ ಸಿದ್ದಲಿಂಗಪ್ಪ ಅವರ ಮಗ ವರುಣ್(18) ಮೃತ ದುರ್ದೈವಿ. ದೊಡ್ಡಬಳ್ಳಾಪುರ ನಗರದ ಶ್ರೀವಾಣಿ ಕಾಲೇಜಿನಲ್ಲಿ ವರುಣ್​ ಪಿಯುಸಿ ಓದುತ್ತಿದ್ದ. ಕಾಲೇಜಿಗೆ ಬಿಡಲೆಂದು ಸೋಮವಾರ ಬೆಳಗ್ಗೆ ಬೈಕ್​ನಲ್ಲಿ ಮಗನನ್ನು ಕೂರಿಸಿಕೊಂಡು ತಂದೆ ಹೋಗುತ್ತಿದ್ದರು. ಮಾರ್ಗಮಧ್ಯೆ ಯಮರೂಪಿಯಾಗಿ ಬಂದ ಕ್ಯಾಂಟರ್​, ಬೈಕ್​ ಮೇಲೆ ಹರಿದಿದೆ. ತೀವ್ರ ಗಾಯಗೊಂಡ ಮಗ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದು, ಅತ್ತ ಗಾಯಗೊಂಡ ಅಪ್ಪ, ಮಗನ ರಕ್ಷಣೆಗಾಗಿ ಹಾತೊರೆದರೂ ಫಲಿಸಲಿಲ್ಲ.
ಅಪಘಾತ ನಂತರ ಪರಾರಿಯಾಗುತ್ತಿದ್ದ ಕ್ಯಾಂಟರ್​ ಚಾಲಕನನ್ನು ಹಿಡಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ ಹೋಟೆಲ್​ನಲ್ಲಿ ಎಚ್​ಡಿಕೆ ರಾಸಲೀಲೆ ಆಡಿಕೊಂಡಿದ್ರು… ವಿವಾದದ ಕಿಡಿ ಹೊತ್ತಿಸಿದ ಯೋಗೇಶ್ವರ್​

ಬೆಂಗ್ಳೂರಲ್ಲಿ ರಸ್ತೆ ಗುಂಡಿಗೆ ಯುವಕ ಬಲಿ: ಇದ್ದೊಬ್ಬ ಮಗನನ್ನು ಕಳೆದುಕೊಂಡ ಅಮ್ಮನ ಗೋಳಾಟ ನೋಡಲಾಗ್ತಿಲ್ಲ…

ವಿಚ್ಛೇದನ ಕೇಳಿದ್ದ ಅಪ್ಪ-ಅಮ್ಮನನ್ನು ಜಡ್ಜ್​ ಎದುರೇ ಒಂದುಗೂಡಿಸಿದ ಮಗ! ಶಿವಮೊಗ್ಗದಲ್ಲಿ ಮನಮಿಡಿಯುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 13 =
Remember me
