ಮಂಡ್ಯ:ಹೆಲ್ಮೆಟ್​ ಹಾಕದೆ ಬೈಕ್​ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ ಸಬ್​ಇನ್​ಸ್ಪೆಕ್ಟರ್​ಗೆ ನಡು ರಸ್ತೆಯಲ್ಲೇ ನಿಂತು ಎಸಿ ಮತ್ತು ತಹಸೀಲ್ದಾರ್ ಅವಾಜ್​ ಹಾಕಿರುವ ವಿಡಿಯೋ ವೈರಲ್​ ಆಗಿದೆ.
ಇನ್ನುಂದೆ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ಪೊಲೀಸರಿಗೆ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಕುಂಞ ಅಹಮದ್ ವಾರ್ನಿಗ್​ ಮಾಡಿರುವ ಘಟನೆ ನಾಗಮಂಗಲದಲ್ಲಿ ಸಂಭವಿಸಿದೆ.ಇದನ್ನೂ ಓದಿರಿಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!
ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್ಐ ರವಿಶಂಕರ್ ನೇತೃತ್ವದ ತಂಡ ವಾಹನ ತಪಾಸಣೆ ಮಾಡುತ್ತಿದ್ದರು, ವೇಳೆ ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರು ಹೆಲ್ಮೆಟ್ ಹಾಕದೆ ಬೈಕ್​ನಲ್ಲಿ ಬಂದಿದ್ದು, ಬೈಕ್​ ಅನ್ನು ಅಡ್ಡಗಟ್ಟಿದ ಪೊಲೀಸರು ದಂಡ ಹಾಕಿದರು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸಿ ಮತ್ತು ತಹಸೀಲ್ದಾರ್ ಇಬ್ಬರೂ ಎಸ್ಐಗೆ ತರಾಟೆ ತೆಗೆದುಕೊಂಡರು.
‘ನಾನು ಮ್ಯಾಜಿಸ್ಟ್ರೆಟ್ ಹೇಳ್ತಿದ್ದೀನಿ. ಇನ್ಮುಂದೆ ದಂಡ ಹಾಕಬೇಡಿ’ ಎಂದು ಎಸ್​ಐಗೆ ತಹಸೀಲ್ದಾರ್ ವಾರ್ನಿಂಗ್​ ಮಾಡಿದರು, ‘ಇದೇ ಫಸ್ಟ್ ಆ್ಯಂಡ್ ಲಾಸ್ಟ್. ಕಂದಾಯ ಇಲಾಖೆ ಸಿಬ್ಬಂದಿಯನ್ನ ಪರಿಶೀಲನೆ ಮಾಡ್ಬೇಡಿ’ ಎಂದು ಎಸಿ ಎಚ್ಚರಿಸಿದರು.

ಕಾನೂನು ಪಾಲನೆ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳಿಂದಲೇ ತಪ್ಪು ಮಾಡಿದವನ ಪರ ವಕಾಲತ್ತು ವಹಿಸಿಕೊಳ್ಳಲಾಗಿದೆ. ಎಸ್ಐಗೆ ತರಾಟೆ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯ ಜನರಿಗೊಂದು ಕಾನೂನು, ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತೊಂದು ಕಾನೂನು ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ದಂಡ ಹಾಕಿದ ಎಸ್​ಐಗೆ ನಡುರಸ್ತೆಯಲ್ಲೇ ಎಸಿ, ತಹಸೀಲ್ದಾರ್ ತರಾಟೆ!
ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಹೆಲ್ಮೆಟ್​ ಹಾಕದೆ ಬೈಕ್​ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ ಎಸ್ಐ ರವಿಶಂಕರ್​ಗೆ ನಡುರಸ್ತೆಯಲ್ಲೇ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಕುಂಞ ಅಹಮದ್ ತರಾಟೆಗೆ ತೆಗೆದುಕೊಂಡಿದ್ದಾರೆ.#Helmet#SI#Tahasildar#ACpic.twitter.com/ssWVydEMvg
— Vijayavani (@VVani4U)May 12, 2021

ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಅಪ್ಪ-ಅಮ್ಮ ಕೋವಿಡ್​ಗೆ ಬಲಿ! ತಾತ-ಅಜ್ಜಿಗೂ ಸೋಂಕು, ಅನಾಥೆಯಾದ 4 ವರ್ಷದ ಕಂದಮ್ಮ

ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
