ಬೆಂಗಳೂರು:ಕರೊನಾ ಲಾಕ್​ಡೌನ್​ನಿಂದ ಸಂಚಾರಿ ಪೊಲೀಸರ ದಂಡ ಪ್ರಯೋಗದಿಂದ ಕೊಂಚ ನಿರಾಳರಾಗಿದ್ದ ವಾಹನ ಸವಾರರಿಗೆ ಲಾಕ್​ಡೌನ್​ ತೆರವುಗೊಂಡ ಬೆನ್ನಲ್ಲೇ ಪೊಲೀಸರ ಕೈನಿಂದ ತಪ್ಪಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ನಗರದಲ್ಲಿ ಭಾರಿ ಸಂಚಾರ ಉಲ್ಲಂಘನೆಯಾಗಿದ್ದು, ದಂಡ ವಸೂಲಿಗೆ ಇಳಿದಿರುವ ಸಂಚಾರಿ ಪೊಲೀಸರು ದಿನನಿತ್ಯ ಅನೇಕ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಸಂಚಾರಿ ನಿಯಮ ಉಲ್ಲಂಘನೆಯನ್ನೇ ಕಾಯಕ ಮಾಡಿಕೊಂಡಿದ್ದಾರೆ. ಏಕೆಂದರೆ ಅನೇಕ ಸವಾರರ ಟ್ರಾಫಿಕ್ಸ್​ ರೂಲ್ಸ್​ ಬ್ರೇಕ್​ ಚಲನ್​ ನೋಡಿದ ಪೊಲೀಸರಿಗೇನೆ ಶಾಕ್​ ಆಗಿದೆ.
ಹೌದು, ಇಂಥದ್ದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಅರುಣ್ ಕುಮಾರ್ ಹೆಸರಿನ ಬೈಕ್​ ಸವಾರನೊಬ್ಬ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದು, ಬರೋಬ್ಬರಿ 77 ಬಾರಿ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಇದನ್ನೂ ಓದಿ:ಮೊಮ್ಮಗ ಬಂದಿದ್ದು ಸಮುದ್ರಮಂಥನ ಆಗಿ ಕ್ಷೀರಸಾಗರದಿಂದ ಅಮೃತ ಸಿಕ್ಕಂತಾಗಿದೆ: ಸುಂದರ್​ ರಾಜ್​
ಮಡಿವಾಳ ಸಂಚಾರಿ ಪೋಲೀಸ್ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್‌ಐ ಶಿವರಾಜ್ ಕುಮಾರ್ ಕಾರ್ಯಾಚರಣೆ ವೇಳೆ ಬೈಕ್​ ಸವಾರ ಅರುಣ್​ ಸಿಕ್ಕಿ ಬಿದ್ದಿದ್ದಾರೆ. ಸವಾರನಿಗೆ ಬರೋಬ್ಬರಿ 42500 ರೂ. ದಂಡ ವಿಧಿಸಿದ್ದಾರೆ.
ಬೈಕ್ ಸವಾರನಿಗೆ ನೋಟಿಸ್ ನೀಡಿ ಬೈಕ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಡ ಕಟ್ಟಿ ಬೈಕ್​ ಬಿಡಿಸಿಕೊಂಡು ಹೋಗಲು ಮಡಿವಾಳ ಪೊಲೀಸರು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ರೌಡಿ ಶೀಟರ್ ಜತೆ ಮಗಳ ಅನೈತಿಕ ಸಂಬಂಧ: ಬುದ್ಧಿ ಹೇಳಿದ ವೃದ್ಧನ ದುರಂತ ಅಂತ್ಯ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 + seventeen =
Remember me
