ಬೆಂಗಳೂರು:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆ ಅವರ ಸರಳತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅದು ಆಗಾಗ ಹಲವರಿಗೆ ಹಲವು ರೀತಿಯಲ್ಲಿ ಅನುಭವಕ್ಕೆ ಬರುವ ಜತೆಗೆ ಉಳಿದವರ ಅರಿವಿಗೂ ಬರುತ್ತಿರುತ್ತದೆ. ಅಂಥದ್ದೇ ಒಂದು ಅನುಭವಕ್ಕೆ ಬೈಕರ್ ಒಬ್ಬರು ಪಾತ್ರರಾಗಿದ್ದು, ಆ ಖುಷಿಯನ್ನು ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.
ಖಾಸಗಿ ಸಂಸ್ಥೆಯ ಉದ್ಯೋಗಿ, ಬೈಕ್ ಬಗ್ಗೆ ಪ್ಯಾಷನ್ ಇರುವ ಕಾರ್ತಿಕ್ ಗಣಪತಿ ಎಂಬವರು ತಮ್ಮ ಅತ್ಯಾಧುನಿಕ ಬೆನೆಲ್ಲಿ ಟಿಆರ್​ಕೆ ಬೈಕ್​ನಲ್ಲಿ ಸಾಗುತ್ತಿದ್ದಾಗ ಮಾರ್ಗಮಧ್ಯೆ ಕಾರು ನಿಲ್ಲಿಸಿಕೊಂಡಿದ್ದ ಶ್ರೀವೀರೇಂದ್ರ ಹೆಗ್ಗಡೆ ಅವರು ಕಾಣಿಸಿದ್ದಾರೆ. ಅವರನ್ನು ಕಂಡು ಖುಷಿಯಾಗಿ ತಕ್ಷಣ ಬೈಕ್​ ನಿಲ್ಲಿಸಿ ಅವರನ್ನು ಮಾತನಾಡಿಸಿದ ಕಾರ್ತಿಕ್ ಗಣಪತಿ, ಹೆಗ್ಗಡೆಯವರೊಂದಿಗೆ ಕಳೆದ ಅತ್ಯಪರೂಪದ ಕ್ಷಣಗಳನ್ನು ಸೆಲ್ಫೀ ವಿಡಿಯೋ ಮಾಡಿಕೊಂಡಿದ್ದಾರೆ.
ಹೆಗ್ಗಡೆಯವರು ಸಿಕ್ಕಿದ ಖುಷಿಯನ್ನು ಹಂಚಿಕೊಂಡ ಕಾರ್ತಿಕ್, ಧರ್ಮಾಧಿಕಾರಿಯವರ ಸರಳತೆಯನ್ನು ಕೊಂಡಾಡಿದ್ದಾರೆ. ಬೈಕ್​-ಕಾರುಗಳ ಕುರಿತು ಹೆಗ್ಗಡೆಯವರಿಗೆ ಇರುವ ಆಸಕ್ತಿ-ತಿಳುವಳಿಕೆಯನ್ನೂ ಹೇಳಿಕೊಂಡು ಖುಷಿಪಟ್ಟಿದ್ದಾರೆ. ಕಾರ್ತಿಕ್​ ಅವರಿಗೆ ಹೆಗ್ಗಡೆ ಅವರು ತಮ್ಮ ಬಳಿ ಇದ್ದ ತಿನಿಸನ್ನೂ ನೀಡಿದ್ದಲ್ಲದೆ, ಅವರ ಹೊಚ್ಚ ಹೊಸ ಬೈಕ್​ನ ಆ್ಯಕ್ಸಿಲರೇಟರ್ ತಿರುವಿ ಅದರ ಬಗ್ಗೆಯೂ ಕುತೂಹಲ ವ್ಯಕ್ತಪಡಿಸಿದ್ದಾರೆ. ವೀರೇಂದ್ರ ಹೆಗ್ಗಡೆಯವರು ವಿಜಯವಾಣಿಯ ಅಂಕಣಕಾರರೂ ಹೌದು. ವಿಜಯವಾಣಿಯಲ್ಲಿ ಧರ್ಮದರ್ಶನ ಎಂಬ ಅಂಕಣದ ಮೂಲಕ ಅವರು ನಿಯಮಿತವಾಗಿ ನಾನಾ ವಿಷಯಗಳ ಬಗ್ಗೆ ತಮ್ಮ ಅನುಭವ-ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಂಯಮ ಸಾಧನೆಗೆ ಶಿವರಾತ್ರಿ ಸ್ಫೂರ್ತಿ

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮದರ್ಶನ ಅಂಕಣ: ಭಗವದ್ ಸಾಮೀಪ್ಯವೇ ಶ್ರೇಷ್ಠ

ಜಲಸಂಕಟದಿಂದ ಪಾರಾಗೋಣ; ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅಂಕಣ…

ದೇವಾಲಯದ ಪಾವಿತ್ರ್ಯವನ್ನು ರಕ್ಷಿಸೋಣ; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + sixteen =
Remember me
