ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸಿಎಂ ಬದಲಾವಣೆ ವಿಚಾರಕ್ಕೆ ಒಂದೆರಡು ದಿನಗಳಲ್ಲಿ ತಾರ್ಕಿಕ ಅಂತ್ಯ ಬೀಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಬೆಂಗಳೂರಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ದೆಹಲಿಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ಆಗಮಿಸಿದ ಅರುಣ್ ಸಿಂಗ್ ಅವರನ್ನು ದೆಹಲಿ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಸ್ವಾಗತಿಸಿದರು. ಕೆಐಎಎಲ್‌ನಿಂದ ಕುಮಾರಕೃಪದತ್ತ ಹೊರಡುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ಕೊಡದೆ ಪಕ್ಷದ ಕಾರ್ಯಕರ್ತರು-ಮುಖಂಡರ ಮುಂದಿನ ಕಾರ್ಯಕ್ರಮದ ಬಗ್ಗೆ ಮಾತ್ರವೇ ಪ್ರಸ್ತಾಪಿಸಿದರು.

ಸಂಜೆ 5 ಗಂಟೆಗೆ ಅರುಣ್ ಸಿಂಗ್ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು ಕತೂಹಲ ಮೂಡಿಸಿದೆ. ಇಂದಿನ ಸಭೆ ಕಾಫಿ-ತಿಂಡಿಗಷ್ಟೇ ಸಿಮೀತವಾಗುತ್ತಾ? ಕೆಲವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರಾ? ಇಲ್ಲವೇ ಸಿಎಂ ಮುಂದೆಯೇ ಧೈರ್ಯವಾಗಿ ಸಮಸ್ಯೆ ಬಗ್ಗೆ ಉಸ್ತುವಾರಿಗೆ ಹೇಳುತ್ತಾರಾ? ಎಲ್ಲ ಸಚಿವರೂ ಸಭೆಗೆ ಹಾಜರಿರಬೇಕೆಂದು ಅರುಣ್ ಸಿಂಗ್ ಸೂಚಿಸಿದ್ದು, ಸಿ.ಪಿ. ಯೋಗೇಶ್ವರ್ ಸಭೆಗೆ ಬರುತ್ತಾರಾ? ಇಲ್ಲವೇ ಎಂಬುದನ್ನೂ ಕಾದು ನೋಡಬೇಕಿದೆ.
ಜತೆಗೆ ಸರ್ಕಾರದ ವಿರುದ್ಧ ಹೇಳಿಕೆ ಕೊಡುತ್ತಿರುವ ಸಚಿವರ ಸಮಸ್ಯೆಯನ್ನ ಅರುಣ್ ಸಿಂಗ್ ಆಲಿಸಲಿದ್ದಾರೆ. ಸರ್ಕಾರದ ಮಟ್ಟದಲ್ಲಿ ಸಚಿವರ ನಡುವಿನ ಗೊಂದಲಕ್ಕೆ ಇಂದಿನ ಸಭೆಯಲ್ಲಿ ಪರಿಹಾರ ಸಿಗದಿದ್ದರೆ ನಾಳೆ(ಗುರುವಾರ) ಸಚಿವರು ಸಿಎಂ ಅನುಪಸ್ಥಿತಿಯಲ್ಲಿ ಪ್ರತ್ಯೇಕವಾಗಿ ಅರುಣ್​ ಸಿಂಗ್​ ಅವರನ್ನ ಭೇಟಿ ಮಾಡಿ ಚರ್ಚಿಸಬಹುದು.
ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

ಕಾಸ್ಟಿಂಗ್​ ಕೌಚ್​ ಬಗ್ಗೆ ನಟಿ ರಾಗಿಣಿ ಸ್ಫೋಟಕ ಹೇಳಿಕೆ!

5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

ತವರಿಂದ ಗಂಡನ ಮನೆಗೆ ಹೊರಟಿದ್ದ ಮಹಿಳೆ ಮಗನ ಕಣ್ಣೆದುರಲ್ಲೇ ದುರಂತ ಅಂತ್ಯ! ಬೆಚ್ಚಿಬೀಳಿಸುತ್ತೆ ಈ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
