ಬೆಂಗಳೂರು:ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಷಯದಲ್ಲಿ ಅಮಿತ್ ಷಾ ನೀಡಲಿರುವ ಸಂದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಾಯುತ್ತಿರುವಂತಿದೆ.
ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಸಚಿವ ಸಂಪುಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ದೆಹಲಿಗೆ ಹೋದ ನಂತರ ಮಾತಾಡ್ತೀನಿ ಎಂದಿದ್ದಾರೆ ಎಂದು ಚುಟುಕಾಗಿ ಹೇಳಿದರು.
ಶೇ.80 ಆದೇಶ:ಈಗಾಗಲೇ ತಿಳಿಸಿರುವಂತೆ ಬಜೆಟ್​ನಲ್ಲಿ ಘೋಷಿಸಿದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಸ್ತಾವನೆಗಳ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೇ.80 ಆದೇಶ ಹೊರಡಿಸಲಾಗಿದೆ. ಕಾನೂನು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ಶೇ.20ಕ್ಕೂ ಆದೇಶ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ‌ ಹೇಳಿದರು.
ಅನುಷ್ಠಾನಕ್ಕೆ ಕಾಲಮಿತಿ:ಆದೇಶದ ಮುಂದಿನ ಹಂತವಾಗಿ ಅನುಷ್ಠಾನಕ್ಕೆ ಕಾಲಮಿತಿ ವಿಧಿಸಲೆಂದು ಪೂರ್ವ ನಿಗದಿಯಂತೆ ಇಲಾಖಾವಾರು‌ ಸಭೆಗಳನ್ನು ಬುಧವಾರದಿಂದ ಆರಂಭಿಸಿದ್ದು, ಪ್ರತಿಯೊಂದು ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮದ ಅನುಸಾರ ಕಾಲಮಿತಿ ಗೊತ್ತುಪಡಿಸಲಿದ್ದು, ಇದೆಲ್ಲ ಆಡಳಿತಾತ್ಮಕ ಪ್ರಕ್ರಿಯೆ ಭಾಗವಾಗಿದೆ ಎಂದರು.
ಜಿಲ್ಲಾ ಆಡಳಿತಕ್ಕೆ ಚುರುಕು:ಮುಂದಿನ ವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಜತೆ ಚರ್ಚೆಗೆ ತಲಾ ಒಂದು ದಿನ ನಿಗದಿಪಡಿಸಿದ್ದು, ಜಿಲ್ಲಾ ಆಡಳಿತಕ್ಕೂ ಚುರುಕು ನೀಡಿ ಅಭಿವೃದ್ಧಿ ಕೆಲಸಗಳು ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ವೇಗ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಕರ್ತವ್ಯನಿರತ ಏಜೆಂಟ್​ನ ಬರ್ಬರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + fourteen =
Remember me
