ಹಾಸನ:ಜೆಡಿಎಸ್ ಭದ್ರಕೋಟೆ ಹಾಸನದ ಹೊಳೆನರಸೀಪುರಕ್ಕೆ ಶನಿವಾರ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ್ಯ ಬಿ.ವೈ.ವಿಜಯೇಂದ್ರ, ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದ್ದಲ್ಲೆ ಬೇಸರ ಇಲ್ಲ ಎನ್ನುತ್ತಲೇ ಮುಂಬರುವ ವಿಧಾನಸಭಾ ಚುನಾವನೆಯಲ್ಲಿ ಸ್ಪರ್ಧಿಸಲು ಸಿದ್ಧವಿದ್ದೇನೆ. ಪಕ್ಷದ ನಾಯಕರು ತೀರ್ಮಾನಿಸಬೇಕು, ಒಂದು ವೇಳೆ ಟಿಕೆಟ್ ನೀಡದಿದ್ದರೂ ಪಕ್ಷಕ್ಕಾಗಿ ದುಡಿಯುವೆ. ಕಾಡಿನಲ್ಲಿ ಬೇಟೆಯಾಡುವ ಹುಲಿಯನ್ನ ಹಿಡಿದು ಝೂನಲ್ಲಿ ಬೋನಿಗೆ ಹಾಕಿದ್ರೆ ಅದು ಹುಲ್ಲು ತಿನ್ನಲ್ಲ. ಜತೆಗೆ ಬೇಟೆ ಆಡೋದನ್ನೂ ಮರೆಯಲ್ಲ ಎಂದರು.
ಹೊಳೆನರಸೀಪುರದಲ್ಲಿ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ವಿಜಯೇಂದ್ರ, ಒಕ್ಕಲಿಗರ ಪ್ರಾಬಲ್ಯವಿರುವ ಹಾಸನ ನೆಲದಲ್ಲಿ ತಮ್ಮ‌ ಸಮಾಜದ ಶಕ್ತಿಯ‌ ಬಗ್ಗೆ‌ ಗುಣಗಾನ ಮಾಡಿದರು. ಯಾರೂ ಭಯ ಪಡಬೇಕಿಲ್ಲ. ಹುಲಿಯನ್ನ ಹಿಡಿದು ಝೂನಲ್ಲಿ ಬೋನಿಗೆ ಹಾಕಿದ್ರೆ ಅದು ಹುಲ್ಲು ತಿನ್ನಲ್ಲ. ಬೇಟೆ ಆಡೋದನ್ನೂ ಮರೆಯಲ್ಲ… ಕಾಡಿನಲ್ಲಿರುವ ಹುಲಿ ಏನು ತಿನ್ನುತ್ತೋ, ಬೋನಿನಲ್ಲಿರುವ ಹುಲಿಯೂ ಅದನ್ನೇ ತಿನ್ನುತ್ತೆ. ಬೋನಿಗೆ ಹಾಕಿದ ತಕ್ಷಣ ಭೇಟೆಯಾಡುವುದನ್ನು ಹುಲಿ ಮರೆಯಲ್ಲ. ಅದೇ ರೀತಿ ನಮ್ಮ ಸಮಾಜ ಕೂಡ. ವೀರಶೈವ ಲಿಂಗಾಯತ ಸಮಾಜ ರಾಜ್ಯದಲ್ಲಿ ಹೆಚ್ಚು ಪ್ರಬಲವಾಗಿದೆ. ಈ ಭಾಗದಲ್ಲೂ ನಾವು ಹೆಚ್ಚಿದ್ದೇವೆ.
ಕೆಜಿಎಫ್​ ಬಾಬು ಮನೆ ಮೇಲೆ IT ದಾಳಿ: ನಾಮಪತ್ರದಲ್ಲಿನ ಮಾಹಿತಿ ನೋಡಿ ಐಟಿ ಕಣ್ಣು ಬಿತ್ತಾ? ಬಾಬು ಮುಂದೆ ಡಿಕೆಶಿ, ಎಂಟಿಬಿ ಆಸ್ತಿಯೂ ಕಮ್ಮಿ

ಮದ್ವೆಗೆ ಹೋಗಿದ್ದೆ, ಮಲಗಲು ಕೋಣೆಗೆ ಹೋಗುವಾಗ ದಾರೀಲಿ ಚಿನ್ನದ ಸರ ಸಿಕ್ತು.. ದಯವಿಟ್ಟು ವಾರಸುದಾರರಿಗೆ ತಲುಪಿಸಿ ಸರ್​…

Sign in to your account
Please enter an answer in digits:3 + sixteen =
Remember me
