ವಿಜಯಪುರ:ನಾಗಠಾಣ ಕ್ಷೇತ್ರದ ಅಚ್ಚರಿಯ ಅಭ್ಯರ್ಥಿ, ಪಕ್ಷದ ಸಾಮಾನ್ಯ ಕಾರ್ಯಕರ್ತ ಸಂಜೀವ ಐಹೊಳಿ ಆಟೋದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.
ಗುರುವಾರ ನಾಮಪತ್ರ ಸಲ್ಲಿಕೆಯ ಅಂತಿಮ ದಿನದಂದು ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಜೀವ ಐಹೊಳ್ಳಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಲು ವಾಹನಕ್ಕಾಗಿ ತಡಕಾಡಿದರು. ತೀರ ಸಾಮಾನ್ಯ ಕಾರ್ಯಕರ್ತನಾದ ಸಂಜೀವನ ಹೆಸರಿನಲ್ಲಿ ಸ್ವಂತ ಕಾರು, ಬೈಕ್ ಸಹ ಇಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಬರಲು ಆಟೋಕ್ಕಾಗಿ ಕಾಯ್ದು ನಿಂತರು. ಬಹಳ ಹೊತ್ತಿನ ಬಳಿಕ ಬಂದ ಆಟೋ ಹತ್ತಿ ಜಿಲ್ಲಾ ಪಂಚಾಯಿತಿ ಆವರಣದ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಆಗಮಿಸಿದ್ದು ಕಾರ್ಯಕರ್ತ ರನ್ನು ಸಹ ಅಚ್ಚರಿಗೀಡು ಮಾಡಿತು.
ಇದನ್ನೂ ಓದಿ:VIDEO| ಗ್ಯಾಂಗ್​​ಸ್ಟರ್​​ ಸಮಾಧಿ ಮೇಲೆ ರಾಷ್ಟ್ರಧ್ವಜ: ಕಾಂಗ್ರೆಸ್ ನಾಯಕ ಅರೆಸ್ಟ್
ಅಭ್ಯರ್ಥಿ ಆಟೋದಲ್ಲಿ ಬಂದಿಳಿಯುವ ನಿರೀಕ್ಷೆ ಇರದ ಕಾರ್ಯಕರ್ತರು ಸಾದಾ ಪ್ಯಾಂಟ್, ಬಿಳಿ ಶರ್ಟ್, ಕಾಲಲ್ಲಿ ಹವಾಯಿ ಚಪ್ಪಲಿ ಧರಿಸಿ ಎದುರುಗಡೆಯೇ ನಿಂತಿದ್ದ ಅಭ್ಯರ್ಥಿಯನ್ನು ಗುರುತಿಸಲು ಕ್ಷಣಕಾಲ ತಡಕಾಡಿದರು. ಬಳಿಕ ಅಭ್ಯರ್ಥಿಯನ್ನು ಗುರುತಿಸಿ ನಗು ನಗುತ್ತಾ ನಾಮ ಪತ್ರ ಸ್ವೀಕಾರ ಕೇಂದ್ರಕ್ಕೆ ಕರೆದೊಯ್ದರು‌.
VIDEO| ಮದುವೆ ಮಂಟಪದಲ್ಲಿ ಜುಟ್ಟು ಹಿಟ್ಕೊಂಡು ಕಿತ್ತಾಡಿದ ವಧು-ವರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
