ಬೆಂಗಳೂರು:ನಾನು ಮತ್ತು ಅನಂತರಾಜು ಇಬ್ಬರೂ 6 ವರ್ಷದಿಂದ ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದೆ. ನಾನು ತಪ್ಪು ಮಾಡಿದೆ. ಆದರೆ ಅನಂತರಾಜುಗೆ ನಾನು ಹನಿಟ್ಯ್ರಾಪ್ ಮಾಡಿಲ್ಲ. ಅವರ ಸಾವಿಗೆ ನಾನು ಕಾರಣ ಅಲ್ಲ. ನಾನು ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ. ಸುಮಾ ಕೊಟ್ಟ ಟಾರ್ಚರ್​ಗೆ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ ನ್ಯಾಯ ಬೇಕು. ನನ್ನಲ್ಲಿರುವ ಎಲ್ಲ ಆಡಿಯೋವನ್ನೂ ಪೊಲೀಸರಿಗೆ ಕೊಟ್ಟಿದ್ದೇನೆ. ನನಗೆ ಮತ್ತು ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ… ಪ್ಲೀಸ್​ ನನಗೆ ನ್ಯಾಯ ಕೊಡಿಸಿ… ಎಂದು ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು ಅವರ ಪ್ರೇಯಸಿ ರೇಖಾ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತರಾಜು​, ಮೇ 12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಸಂಬಂಧ ಆರೋಪಿ ಸ್ಥಾನದಲ್ಲಿರುವ ಪ್ರೇಯಸಿ ರೇಖಾ, ಬುಧವಾರ ಬೆಳಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂಭಾಗ ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟರು.
ಅನಂತರಾಜು ಆತ್ಮಹತ್ಯೆ ಮಾಡಿಕೊಂಡದ್ದು ತುಂಬಾ ನೋವು ತಂದಿದೆ. ನಾನು ಹನಿಟ್ರ್ಯಾಪ್ ಮಾಡಿಲ್ಲ, ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರೋದು. ಅನಂತರಾಜು ಈ ಹಿಂದೆ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ರು. ಆ ವೇಳೆ ಅವರಿಂದ ಸುಮಾ ಬಲವಂತವಾಗಿ ಡೆತ್​ನೋಟ್ ಬರೆಸಿಕೊಂಡಿದ್ದಾರೆ. ನಾನು ಸಾಮಾನ್ಯ ಮಹಿಳೆ. ನನನಗೆ ದಿನೇದಿನೆ ಕಿರುಕುಳ ಹೆಚ್ಚಾಗ್ತಿದೆ. ನಾನು ತಪ್ಪು ಮಾಡಿಲ್ಲ, ಯಾವುದೇ ತನಿಖೆಗೂ ನಾನು ಸಿದ್ಧ. ಸುಮಾ ವಿರುದ್ದ ದೂರು ನೀಡುತ್ತೇನೆ. ಸಿಎಂ ಮತ್ತು ಗೃಹ ಸಚಿವರು ನನಗೆ ನ್ಯಾಯ ಕೊಡಿಸಬೇಕು. ನನ್ನಲ್ಲಿರುವ ಎಲ್ಲ ಆಡಿಯೋಗಳನ್ನು ಪೊಲೀಸರಿಗೆ ಕೊಟ್ಟಿದ್ದೇನೆ ಎಂದರು.
ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ತಂದೆಗೆ 107 ವರ್ಷ ಜೈಲು ಶಿಕ್ಷೆ! ಕೇರಳ ಇತಿಹಾಸದಲ್ಲೇ ಗರಿಷ್ಠ ಸೆರೆಮನೆವಾಸ

ಇಬ್ಬರ ಪ್ರಾಣ ತೆಗೆದ ವಿಷದ ತಂಬಿಗೆ! ಚಿಕ್ಕಮ್ಮ ವಿಷ ಕುಡಿದ ತಂಬಿಗೆಯಲ್ಲಿ ನೀರು ಕುಡಿದ ಪುಟ್ಟ ಕಂದನೂ ಬದುಕಲಿಲ್ಲ…

ರಜೆ ಬೇಕಂದ್ರೆ ಲಾಡ್ಜ್​ಗೆ ಬಂದು ಬಟ್ಟೆ‌ ಬಿಚ್ಚಬೇಕಂತೆ… ಕೊಪ್ಪಳದ ಸರ್ಕಾರಿ ಕಚೇರಿ ಮಹಿಳಾ ಸಿಬ್ಬಂದಿಯ ಕಣ್ಣೀರ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 8 =
Remember me
