ಚಿಕ್ಕಮಗಳೂರು:‘ಹೆಣ್ಣು ಮಕ್ಕಳು ಸೀರೆ ಉಡಬಹುದು. ಬಿಕಿನಿ, ಜೀನ್ಸ್​ ಸೇರಿದಂತೆ ಇಷ್ಟ ಬಂದ ಡ್ರೆಸ್​ ಹಾಕಬಹುದು ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅವರು ಹೇಳಿದ್ದು ಸರಿ. ಆದರೆ ಬಿಕಿನಿ ಹಾಕಿಕೊಂಡು ಸ್ವಿಮ್ಮಿಂಗ್​ಪೂಲ್​, ಬೀಚ್​ಗೆ ಹೋಗಬಹುದೇ ಹೊರತು ಶಾಲೆಗೆ ಬರಲು ಸಾಧ್ಯವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ‘ಮನೆಯಲ್ಲಿ ಗಂಡನ ಎದುರು ಹೆಂಡತಿ ಹೇಗೆ ಬೇಕಾದರೂ ಇರಬಹುದು. ಆದರೆ ನನ್ನಿಷ್ಟ ಎಂದು ಬೀದಿಗೆ ಬರಲು ಸಾಧ್ಯವಾ? ಆಗ ಜನ ಬೇರೆಯದೇ ಮಾತನಾಡುತ್ತಾರೆ. ಶಾಲಾ ಕಾಲೇಜುಗಳಿಗೆ ಒಂದು ವಸ್ತ್ರಸಂಹಿತೆ ಇದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಇರಬೇಕು’ ಎಂದರು.
‘ಮತಗಳ ಹಿಂದೆ ಓಡುತ್ತ ಮತಾಂಧತೆಯನ್ನು ಬೆಂಬಲಿಸುವ ಹೀನ ಕೆಲಸಕ್ಕೆ ಕೈಹಾಕಿ ದೇಶವನ್ನು ಸರ್ವನಾಶ ಮಾಡಬೇಡಿ. ಯೂನಿಫಾರ್ಮ್​ ಅರ್ಥವನ್ನು ಹೇಳಿ. ಒಂದು ಕಾಲದಲ್ಲಿ ಸಿರಿಯಾ, ಪರ್ಷಿಯನ್​, ಗಾಂಧಾರದಲ್ಲಿದ್ದಂತಹ ನಾಗರಿಕತೆ ಇಂದಿಲ್ಲ. ಅದಾಗಬಾರದು ಎಂದಿದ್ದರೆ ಶಾಲೆ, ಸಮಾಜ, ವ್ಯವಸ್ಥೆಯಿಂದಲೂ ಮತೀಯವಾದವನ್ನು ಹೊರಗಿಡಬೇಕು. ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯ. ಹೊರಗಡೆ ಅವರವರ ಇಚ್ಛೆ’ ಎಂದು ಸಿ.ಟಿ. ರವಿ ಹೇಳಿದರು.
‘ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಬೇಕು. ಹಿಜಾಬ್​ ಜಾಬ್​ ಕೊಡಿಸುವುದಿಲ್ಲ. ಶಿಕ್ಷಣ, ಜ್ಞಾನ ಮಾತ್ರವೇ ಜಾಬ್​ ಕೊಡಿಸುತ್ತದೆ’ ಎಂದರು.
ಪೊಲೀಸರಿಂದಲೇ ಆಟೋ ತಳ್ಳಿಸಿದ ಭೂಪ! ಆಟೋ ಸ್ಟಾರ್ಟ್​ ಮಾಡಲ್ಲ… ಎಂದು ರೋಡಲ್ಲೇ ಚಾಲಕ ಕಿರಿಕ್​

ಮುಂದೊಂದು ದಿನ ಹಿಜಾಬ್​ ಧರಿಸಿದ ಹುಡುಗಿಯೇ ಭಾರತದ ಪ್ರಧಾನಿ ಆಗ್ತಾಳೆ: ಓವೈಸಿ

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೀನಿ ಅಂದಿದ್ದು ಚುನಾವಣೆಗೆ ನಿಲ್ಲೋಕಲ್ಲ: ಕುಮಾರಸ್ವಾಮಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen + 9 =
Remember me
