ಬೆಂಗಳೂರು:ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ 2 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್​, ನನಗೆ ರಾಜಕೀಯ ಶತ್ರುಗಳಿದ್ದಾರೆ ಎಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ 10 ಸಾವಿರ ರೂ. ದಂಡ ಹಾಗೂ 2 ತಿಂಗಳು ಜೈಲು ಶಿಕ್ಷೆ ‌ವಿಧಿಸಿ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಇಂದು (ಗುರುವಾರ) ತೀರ್ಪು ಪ್ರಕಟಿಸಿದೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕರು, ಚುನಾವಣೆ ಸಮಯದಲ್ಲಿ ಅಫಿಡವಿಟ್ ಹಾಕಿದಾಗ ವಕೀಲರು ಹೇಳಿದ್ದ ಹಾಗೆ ಕೇಳಿದ್ದಾನೆ. ಶ್ರೀಮತಿ ಅಕೌಂಟ್​ನಲ್ಲಿ ಎಷ್ಟು ಹಣ ಇತ್ತೋ ಅಷ್ಟನ್ನೇ ಹೇಳಿದ್ದೇನೆ. ಜಮೀನು ವಿಚಾರವಾಗಿ ಕೆಲ ಕೇಸ್​ಗಳಿವೆ. ಬಿಜಿನೆಸ್​ ಮೆನ್ ಆದ ಕಾರಣ ಕೇಸ್​ ದಾಖಲಿಸಿದ್ದಾರೆ. ಈಗ ತೀರ್ಪು ಬಂದಿದೆ. ಎರಡು ತಿಂಗಳು ಜೈಲು ಅಂತಾ ಹೇಳಿದೆ. ಒಂದು ತಿಂಗಳು ಕಾಲಾವಕಾಶ ಇದೆ. ಮೇಲ್ಮನವಿ ಸಲ್ಲಿಸುತ್ತೇನೆ. ರಾಜಕೀಯವಾಗಿ ನನಗೆ ಶತ್ರುಗಳಿದ್ದಾರೆ ಎಂದರು.
2 ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ ವಿರುದ್ಧ ಸೋದರ ಸಂಬಂಧಿ ಎಚ್.ಜಿ.ಪ್ರಶಾಂತ್ ಎಂಬುವರು 2019ರ ಅಕ್ಟೋಬರ್​ನಲ್ಲಿ ಜೆಪಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜನಪ್ರತಿನಿಧಿಗಳ ಕಾಯ್ದೆ ಸೆ.125 ಎ ಅಡಿ ಆರೋಪ ಸಾಬೀತಾಗಿದ್ದು, ಶಾಸಕರಿಗೆ ಶಿಕ್ಷೆ ವಿಧಿಸಲಾಗಿದೆ.
ಬೆಳಗಾವಿಯಲ್ಲಿ ಯುವತಿ ಅನುಮಾನಾಸ್ಪದ ಸಾವು: ಆಕೆಯನ್ನ ಆಸ್ಪತ್ರೆಗೆ ಕರೆತಂದ ಯುವಕ ಪರಾರಿ…

ಮಂಗಳೂರಲ್ಲಿ ಡೆತ್​ನೋಟ್​ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಹಿಳಾ ಪಿಎಸ್​ಐ! ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
