‘ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ್ಕ… ಕೂಸು ಕಂದಮ್ಮ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ…’ ಎನ್ನುತ್ತಾರೆ ಜನಪದರು. ಮಕ್ಕಳ ಬಾಲ್ಯ ಮನೆಮಂದಿಗೆಲ್ಲ ಸಂತಸದ ಕಾರಂಜಿ. ಆದರೆ ಮಕ್ಕಳ ತೊದಲು, ತುಂಟತನ ಬೆಳೆದಂತೆಲ್ಲ ಬದಲಾಗುತ್ತದೆ, ಬದಲಾಗಬೇಕು. ಒಂದು ವೇಳೆ ಬದಲಾಗದಿದ್ದರೆ ಆ ಮಕ್ಕಳನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ. ಮನೆಯೊಳಗೂ, ಮನೆಯ ಹೊರಗೂ ಜನರ ಸ್ವೀಕಾರ, ಬೆಂಬಲ, ಸೇರ್ಪಡೆ ಮತ್ತು ಅವರ ಹಕ್ಕುಗಳ ಪ್ರತಿಪಾದನೆಗಾಗಿ ಪ್ರತಿವರ್ಷ ಆಚರಿಸುವ ಆರೋಗ್ಯ ಕಾರ್ಯಕ್ರಮವೇ ‘ಆಟಿಸಂ ಜಾಗೃತಿ ದಿನ’. ಈ ವರ್ಷ ‘ನೀಲಿಬಣ್ಣ’ (ಲೈಟ್ ಇಟ್ ಅಫ್ ಬ್ಲೂ) ಘೋಷವಾಕ್ಯದೊಂದಿಗೆ ನೀಲಿದೀಪಗಳನ್ನು ಬೆಳಗಿಸುವ ಹಾಗೂ ಬೆಂಬಲದ ಸಂಕೇತವಾಗಿ ನೀಲಿಬಣ್ಣದ ಬಟ್ಟೆಗಳನ್ನು ಧರಿಸುವ ಮೂಲಕ ಅಭಿಯಾನ ಆರಂಭಿಸಲಾಗುತ್ತಿದೆ.
ಪಂಕಜ ಕೆ.ಎಂ. ಬೆಂಗಳೂರುಪ್ರತಿ ನೂರು ಮಕ್ಕಳಲ್ಲಿ ಒಬ್ಬರು ಆಟಿಸಂ ಸ್ಪೆಕ್ಟ್ರಮ್ೆ ಒಳಗಾಗಿರುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2022ರ ಇಂಡಿಯನ್ ಜರ್ನಲ್ ಆಫ್ ಪೀಡಿಯಾಟ್ರಿಕ್ಸ್ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇಕಡ 0.18 ರಿಂದ ಶೇ.1 ಮಕ್ಕಳು ಆಟಿಸಂ ಸಮಸ್ಯೆ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಹೊಂದಿರುವುದರಿಂದ ಸಮಸ್ಯೆ ಗುರುತಿಸಲು ಸಾಧ್ಯವಾಗುತ್ತಿಲ್ಲ.ಆಟಿಸಂ (ಸ್ವಲೀನತೆ) ಜೀವಿತಾವಧಿ ಕಾಡುವ ಸಮಸ್ಯೆಯಾದರೂ, ಇದು ಕಾಯಿಲೆ ಅಥವಾ ಮಾನಸಿಕ ಅಸ್ವಸ್ಥತೆಯಲ್ಲ. ಬದಲಿಗೆ ನರದ ಬೆಳವಣಿಗೆಯಲ್ಲಿನ ಸಮಸ್ಯೆ ಅಥವಾ ಅನುವಂಶಿಕ ಕಾರಣದಿಂದ ಬರುವ ತೊಂದರೆ. ಇಂತಹ ಮಕ್ಕಳ ವರ್ತನೆಯಲ್ಲಿ ಕಂಡುಬರುವ ಸಾಮಾನ್ಯ ಬದಲಾವಣೆಗಳನ್ನು ಗುರುತಿಸಿ, ಆರಂಭದಲ್ಲೇ ಚಿಕಿತ್ಸೆ ಕೊಡಿಸಿದಲ್ಲಿ ಅವರು ಸಾಮಾನ್ಯರಂತೆ ಜೀವನ ನಡೆಸಬಲ್ಲರು. ಎಳೆಯ ವಯಸ್ಸಿನಲ್ಲಿಯೇ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆ ಇದಾಗಿದ್ದು, ಸಾಮಾನ್ಯವಾಗಿ 3ನೇ ವರ್ಷದಲ್ಲಿ ಗುರುತಿಸಲ್ಪಡುತ್ತದೆ. ಅಲ್ಲಿಯವರೆಗೂ ಇದರ ಲಕ್ಷಣಗಳು ಗೋಚರಿಸುವುದಿಲ್ಲ. ಆದರೆ, ಇದು ಪಾಲಕರ ನಿರ್ಲಕ್ಷ್ಯ, ಪರಿಸರದಿಂದ ಉಂಟಾಗುವ ಸಮಸ್ಯೆಯಲ್ಲ. ಬದಲಿಗೆ ಅನುವಂಶಿಕ ಕಾರಣ ಹಾಗೂ ನರದ ಬೆಳವಣಿಗೆಯಲ್ಲಿನ ಸಮಸ್ಯೆಯಾಗಿದೆ ಎನ್ನುತ್ತಾರೆ ತಜ್ಞರು.
ಮಗುವನ್ನು ಗಮನಿಸಿ…:ಮಗು ಮಾತನಾಡುವಲ್ಲಿ ವಿಳಂಬ, ಭಾಷೆಯನ್ನು ಗ್ರಹಿಸಲು ಮತ್ತು ಸಂವಹನ ಮಾಡಲು ತೊಂದರೆ, ಸಾಮಾಜಿಕವಾಗಿ ಸಂವಹನ ನಡೆಸಲು ಅಸಮರ್ಥತೆ, ಕಣ್ಣಿನ ನೇರ ಸಂಪರ್ಕ ಮಾಡುವಲ್ಲಿ ವಿಫಲ, ಸಾಮಾಜಿಕ ಸೂಚನೆಗಳಿಗೆ ಪ್ರತಿಕ್ರಿಯೆ ನೀಡದಿರುವುದು, ಇತರ ಮಕ್ಕಳೊಂದಿಗೆ ಬೆರೆಯುವಲ್ಲಿ ಸಮಸ್ಯೆ, ಪುನರಾವರ್ತಿಕ ನಡವಳಿಕೆ (ಮಾಡಿದ್ದನ್ನೇ ಮಾಡುವುದು), ತನ್ನಷ್ಟಕ್ಕೆ ತಾನು ಮಗ್ನವಾಗುವುದು, ಯಾವುದರ ಬಗ್ಗೆಯೂ ಗಮನ ಹರಿಸದೆ ಇರುವುದು, ಅತಿಯಾದ ತುಂಟತನ, ಅಸಾಮಾನ್ಯ ಭಂಗಿಗಳು ಅಥವಾ ಚಲನೆಗಳು ಆಟಿಸಂನ ಲಕ್ಷಣಗಳು.
ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್:ನರಗಳ ಬೆಳವಣಿಗೆಯ ಅಸ್ವಸ್ಥತೆಯಾಗಿರುವ ಆಟಿಸಂ ಅನ್ನು ‘ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್’ (ಎಎಸ್​ಡಿ) ಎಂದು ಕರೆಯಲಾಗುತ್ತದೆ. ಇದರ ಲಕ್ಷಣಗಳೊಂದಿಗೆ ಸಾಮಾನ್ಯ, ಮಧ್ಯಮ ಮತ್ತು ತೀವ್ರ ಎಂಬ 3 ಹಂತಗಳಲ್ಲಿ ಗುರುತಿಸಲಾಗುತ್ತದೆ. ಆಟಿಸಂ ಹೊಂದಿರುವವರು ತಮ್ಮದೇ ಆದ ವಿಶಿಷ್ಟ ಸಾಮರ್ಥ್ಯ ಮತ್ತು ಸವಾಲುಗಳನ್ನು ಹೊಂದಿರುತ್ತಾರೆ. ಇದರ ಲಕ್ಷಣಗಳು ಒಬ್ಬರಿಂದ ಒಬ್ಬರಲ್ಲಿ ಭಿನ್ನವಾಗಿರುತ್ತವೆ.
ಬುದ್ಧಿಮಾಂದ್ಯರಲ್ಲ:ಆಟಿಸಂ ಒಂದು ರೀತಿಯ ನರ ಸಂಬಂಧಿತ ಕಾಯಿಲೆ. ಇತರ ಮಕ್ಕಳಂತೆಯೇ ಇರುವ ಇವರಲ್ಲಿ ಕೆಲ ನಡವಳಿಕೆಗಳಲ್ಲಿ ಬದಲಾವಣೆಗಳು ಕಂಡುಬರುತ್ತದೆ. ಆದರೆ, ಇವರಲ್ಲಿ ವಿಶೇಷ ಗ್ರಹಣ ಶಕ್ತಿ ಇರುತ್ತದೆ. ಉದಾಹರಣೆಗೆ: ಯಾವುದೇ ರಾಸಾಯನಿಕ ಸೂತ್ರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವಷ್ಟು ಸಮರ್ಥರಾಗಿರುತ್ತಾರೆ. ಒಬ್ಬೊಬ್ಬರೂ ಒಂದು ವಿಷಯದಲ್ಲಿ ಇಂತಹ ವಿಶೇಷ ಸಾಮರ್ಥ್ಯ ಹೊಂದಿರುತ್ತಾರೆ. ಹಿಂದೆಲ್ಲ ಇಂತಹ ಮಕ್ಕಳನ್ನು ಬುದ್ಧಿಮಾಂದ್ಯರಿಗೆ ಹೋಲಿಸುತ್ತಿದ್ದರು. ಆದರೆ, ಈಗ ಈ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದ್ದು, ಇದರಿಂದಾಗಿ ಅವರಿಗೆ ವಿಶೇಷ ಶಿಕ್ಷಣ, ಆರೈಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯುತ್ತಿದೆ. ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವೂ ಇದೆ.
ವಿಶೇಷ ಶಾಲೆ ಅಗತ್ಯವಿಲ್ಲ:ಈ ಮಕ್ಕಳನ್ನು ಈ ಮೊದಲು ವಿಶೇಷ ಮಕ್ಕಳ ಶಾಲೆಗೆ ಸೇರಿಸಲಾಗುತ್ತಿತ್ತು. ಆದರೆ, ಈಗ ಅಂತಹ ಅಗತ್ಯವಿಲ್ಲ. ಮಕ್ಕಳು ಯಾವ ಹಂತದಲ್ಲಿ ಸಮಸ್ಯೆ ಹೊಂದಿದ್ದಾರೆ ಎಂಬುದನ್ನು ಆಧರಿಸಿ ಇವರನ್ನು ಸಾಮಾನ್ಯ ಮಕ್ಕಳೊಂದಿಗೆ ಶಿಕ್ಷಣ ನೀಡಬಹುದಾಗಿದೆ. ಅವರ ಆಸಕ್ತಿಯ ವಿಷಯದಲ್ಲಿ ಪರಿಣತಿ ಸಹ ಹೊಂದಬಹುದಾಗಿದೆ.
ಕಾರಣಗಳು:ಸಂಶೋಧನೆಗಳ ಪ್ರಕಾರ ಅನುವಂಶೀಯತೆ, ರಕ್ತಸಂಬಂಧದಲ್ಲಿ ವಿವಾಹ, ಹೆಣ್ಣುಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ, ಬೇಗ ಗರ್ಭ ಧರಿಸುವುದು, ಹೆರಿಗೆ ಸಮಯದಲ್ಲಿ ತೊಂದರೆ, ಜನಿಸಿದಾಗ ತೂಕ ಕಡಿಮೆ ಇರುವುದು, ಅವಳಿ ಹಾಗೂ ತ್ರಿವಳಿ ಮಕ್ಕಳು ಜನಿಸುವುದು ಇಂತಹ ಸಂದರ್ಭದಲ್ಲಿ ಆಟಿಸಂ ತೊಂದರೆ ಕಾಣಿಸಿಕೊಳ್ಳಬಹುದು. ಅಲ್ಪ ಪ್ರಮಾಣದ ಆಟಿಸಂನಲ್ಲಿ ಸ್ಪಷ್ಟ ಮಾತಿನ ಕೌಶಲದ ಕೊರತೆ ಇರುತ್ತದೆ. ಮಾತು ಮತ್ತು ವರ್ತನೆಗಳಲ್ಲಿ ಪರಸ್ಪರ ಪ್ರತಿಕ್ರಿಯೆಯ ತೊಂದರೆಗಳನ್ನು ಕಾಣಬಹುದು. ಅಂದರೆ ಕೇಳಿದ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡದಿರುವುದು, ಜೋರಾದ ಶಬ್ದ, ಅತಿ ಬೆಳಕಿನ ಕಿರಣಗಳಿಗೆ ಹೊಂದಿಕೊಳ್ಳದಿರುವುದು ಸಮಸ್ಯೆಯಾಗಿ ಪರಿವರ್ತನೆಯಾಗಬಹುದು.
ಪಾಲಕರಿಗೆ ಸಲಹೆಗಳು…:ಮಗುವಿನಲ್ಲಿ ಆಟಿಸಂ ಚಿಹ್ನೆಗಳನ್ನು ಆರಂಭದಲ್ಲೇ ಗುರುತಿಸಿದರೆ ಪರಿಸ್ಥಿತಿಯ ಉತ್ತಮ ನಿರ್ವಹಣೆಗೆ ಸಹಾಯವಾಗುತ್ತದೆ. ಇಂತಹ ಮಕ್ಕಳ ಸಮಸ್ಯೆಯ ಲಕ್ಷಣಗಳನ್ನು ನಿರ್ವಹಿಸಲು ಭಾಷಾ ಶಿಕ್ಷಣ ಸೇರಿ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ಕೊಡಿಸಿದಲ್ಲಿ ಮಗುವಿನ ಬೆಳವಣಿಗೆಯಲ್ಲಿ ಸಹಕಾರಿಯಾಗಲಿದೆ. ಇದಕ್ಕಾಗಿ ಪಾಲಕರು ಕೆಲ ಅಂಶಗಳನ್ನು ಪಾಲಿಸುವ ಅಗತ್ಯವಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
