| ಗೋವಿಂದರಾಜು ಚಿನ್ನಕುರ್ಚಿಬೆಂಗಳೂರುಜಗತ್ತು ವೈರ್​ಲೆಸ್​ ಯುಗವಾಗಿ ಪರಿವರ್ತನೆ ಆಗುತ್ತಿದೆ. ಲ್ಯಾಪ್​ಟಾಪ್​, ಮೊಬೈಲ್​, ಸ್ಮಾರ್ಟ್​ ಟಿವಿ, ಸ್ಮಾರ್ಟ್​ ವಾಚ್​, ಟ್ಯಾಬ್​ ಹೀಗೆ ಒಂದರಿಂದ ಮತ್ತೊಂದು ಎಲೆಕ್ಟ್ರಾನಿಕ್​ ಉಪಕರಣಕ್ಕೆ ಕನೆಕ್ಟ್​ಗೆ ವೈಯರ್​ ಬದಲು ಬ್ಲೂಟೂತ್​ ಹೆಚ್ಚಾಗಿ ಬಳಸಲಾಗುತ್ತಿದೆ.
ಈ ಬ್ಲೂಟೂತ್​ ಮೂಲಕ ಸೈಬರ್​ ಕಳ್ಳರು ನಡೆಸುವ ದಾಳಿಗೆ ಬ್ಲೂಜಾಕಿಂಗ್​ ಮತ್ತು ಬ್ಲೂಸ್ನಾರ್ಫಿಂಗ್​ ಎನ್ನುತ್ತಾರೆ. ಅದಕ್ಕಾಗಿ ಸದಾಕಾಲ ಹ್ಯಾಕರ್ಸ್​ ಸಕ್ರಿಯವಾಗಿರುತ್ತಾರೆ. ಸ್ವಲ್ಪ ಯಾಮಾರಿದರೂ ನಮ್ಮ ಮೊಬೈಲ್​ ಅಥವಾ ಲ್ಯಾಪ್​ಟಾಪ್​ನಲ್ಲಿ ಇರುವ ಡೇಟಾ, ಫೋಟೋ, ಇಮೇಲ್​ಗಳು ಕಳವಾಗಿ ಬ್ಯಾಂಕ್​ ಖಾತೆಗೆ ಅಥವಾ ಅನಾಹುತುಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಇಲ್ಲವೇ ನಮ್ಮ ಹೆಸರಿನಲ್ಲಿ ಬೇರೆಯವರಿಗೆ ಬೇನಾಮಿ ಸಂದೇಶ ಕಳುಹಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬುದು ಸೈಬರ್​ ತಜ್ಞರ ಸಲಹೆ.
ಮೊಬೈಲ್​ನಲ್ಲಿ ಸಂಗೀತ ಕೇಳಲು ಗಂಟುಕಟ್ಟಿರುವ ವೈಯರ್​ಗಳನ್ನು ಬಿಡಿಸಿ ಇಯರ್​ಫೋನ್​ ಮತ್ತು ಹೆಡ್​ಫೋನ್​ಗಳನ್ನು ಮೊಬೈಲ್​ಗೆ ಚುಚ್ಚಿ ಕಿವಿಗೆ ಸಿಕ್ಕಿಸಿಕೊಳ್ಳುವುದು ದೊಡ್ಡ ಸಹಾಸವೇ ಆಗುತ್ತಿತ್ತು. ಅದೇ ರೀತಿ ಲ್ಯಾಪ್​ಟಾಪ್​ ಮತ್ತು ಫೋನ್​ ನಡುವೆ ಫೈಲ್​​ ವರ್ಗಾವಣೆ ಮಾಡಲು ಹಾಗೂ ಕಾರಿನಲ್ಲಿ ಮೊಬೈಲ್​ ಸ್ವೀಕರ್​ ಕನೆಕ್ಟ್​ ಮಾಡಲು ಕೇಬಲ್​ ಅಗತ್ಯವಾಗಿತ್ತು. ತಂತ್ರಜ್ಞಾನ ಬೆಳೆದಂತೆ ಬ್ಲೂಟೂತ್​ ಡಿವೈಸ್​ ಹೆಚ್ಚು ಬಳಕೆಗೆ ಬಂದಿದೆ. ಬ್ಲೂಟೂತ್​ ಸುಲಭ ಮಾರ್ಗವಾಗಿದ್ದು, ಎಚ್ಚರಿಕೆ ವಹಿಸದಿದ್ರೆ ಅಷ್ಟೇ ಅಪಾಯಕಾರಿ.
ಸಾರ್ವಜನಿಕರು ತಮ್ಮ ಮೊಬೈಲ್​, ಲ್ಯಾಪ್​ಟಾಪ್​, ಸ್ಮಾರ್ಟ್​ ವಾಚ್​ನಲ್ಲಿ ಬ್ಲೂಟೂತ್​ ಆನ್​ ಮಾಡಿದ್ದರೆ ಹ್ಯಾಕರ್ಸ್​ಗಳು ಸುಲಭವಾಗಿ ಒಳನುಗ್ಗಿ ನಮ್ಮ ಉಪಕರಣಗಳಲ್ಲಿ ಇರುವ ಡೇಟಾ ಕಳವು ಮಾಡುವ ಸಾಧ್ಯತೆ ಇರುತ್ತೆ. ಇದನ್ನು ಬ್ಲೂಸ್ನಾರ್ಫಿಂಗ್​ ಎನ್ನಲಾಗುತ್ತೆ.
ಫೋನ್​, ಟ್ಯಾಬ್​ ಮತ್ತು ಲ್ಯಾಟ್​ಟಾಪ್​ನಲ್ಲಿ ಇರುವ ಸಂದೇಶ, ಇಮೇಲ್​, ಫೋಟೋ ಮತ್ತು ಗೌಪ್ಯ ಮಾಹಿತಿ ಮಾಡಿ ಅವುಗಳನ್ನು ಬಳಸಿಕೊಂಡು ಬ್ಯಾಂಕ್​ ಖಾತೆಗೆ ಕನ್ನ ಹಾಕುವ ಎಲ್ಲ ಸಾಧ್ಯತೆಗಳಿವೆ. ಇಲ್ಲವೇ ನಮ್ಮ ಖಾಸಗಿ ಫೋಟೋ ಅಥವಾ ಇಮೇಲ್​ಗಳನ್ನು ಅಸ್ತ್ರವಾಗಿ ಮಾಡಿಕೊಂಡು ಹಣ ವಸೂಲಿಗೆ ಬ್ಲ್ಯಾಕ್​ಮೇಲ್​ ಸಹ ಮಾಡುತ್ತಾರೆ. ಇಂತಹ ಕೃತ್ಯಕ್ಕೆ ಬ್ಲೂಸ್ನಾರ್ಫಿಂಗ್​ ಎನ್ನುತ್ತಾರೆ.
ಮತ್ತೊಂದು ‘ಬ್ಲೂಜಾಕಿಂಗ್​’. ಆನ್​ ಆಗಿರುವ ಬ್ಲೂಟೂತ್​ ಡಿವೈಸ್​ಗೆ ಹ್ಯಾಕರ್ಸ್​ಗಳು ಕನೆಕ್ಷನ್​ ಮಾಡಿಕೊಂಡು ನಿಮ್ಮ ಫೋನ್​ಗೆ ಅಕ್ಸೆಸ್​ ಪಡೆದು ಸುತ್ತಮುತ್ತಲಿನ ಇತರ ಡಿವೈಸ್​ಗಳಿಗೆ ಅಶ್ಲೀಲ ಅಥವಾ ಬೆದರಿಕೆ ಸಂದೇಶ ಕಳುಹಿಸಬಹುದು. ಇದಕ್ಕೆ ಬ್ಲೂಜಾಕಿಂಗ್​ ಎಂದು ಸೈಬರ್​ ತಜ್ಞರು ಹೇಳುತ್ತಾರೆ. ಇದಲ್ಲದೆ, ಸಾರ್ವಜನಿಕರ ಡಿವೈಸ್​ ಬಳಸಿಕೊಂಡು ಮತ್ತೊಬ್ಬರಿಗೆ ಡೇಟಾ ವರ್ಗಾವಣೆ ಮಾಡುವ ಸಾಧ್ಯತೆಗಳು ಸಹ ಹೆಚ್ಚಾಗಿರುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿ ಪೊಲೀಸ್​ ಕೇಸ್​ ದಾಖಲಾದರೇ ಸೈಬರ್​ ಕಳ್ಳರು ಯಾರ ಬ್ಲೂಟೂತ್​ ಬಳಸಿಕೊಂಡಿರುತ್ತಾರೋ ಅವರೇ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುವ ಸಂಕಷ್ಟ ಎದುರಾಗುತ್ತದೆ. ಅದಕ್ಕಾಗಿ ಬ್ಲೂಟೂತ್​ ಬಳಸುವ ಮೊದಲು ಕೆಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ, ಅಪಾಯ ತಪ್ಪಿದ್ದಲ್ಲ ಎಂದು ಸಿಐಡಿ ಸೈಬರ್​ ಕ್ರೈಂ ವಿಭಾಗದ ಅಧಿಕಾರಿಗಳು ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 + three =
Remember me
