ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಒಡೆತನದ ‘ನ್ಯಾಷನಲ್ ಹಿಲ್​ ವ್ಯೂ ಪಬ್ಲಿಕ್ ಸ್ಕೂಲ್’ಗೆ ಬಾಂಬ್​ ಇಡೋದಾಗಿ ‘ಹುಚ್ಚ ಸ್ವಾಮಿ ವೆಂಕಟ್’​ ಹೆಸರಿನಲ್ಲಿ ಬೆದರಿಕೆ ಮೇಲ್​ ಕಳಿಸಿ ಸೋಮವಾರ ಇಡೀ ದಿನ ಆತಂಕ ಹುಟ್ಟಿಸಿದ್ದು ಯಾರೆಂದು ಬಯಲಾಗಿದೆ.
ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಸ್ಕೂಲ್​ಗೆ ಬಾಂಬ್​ ಇಡುವುದಾಗಿ ಬೆದರಿಕೆ ಮೇಲ್​ ಕಳುಹಿಸಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ!
ಜು.21ರಂದು 10ನೇ ತರಗತಿಗೆ ಮೊದಲ ಸೆಮಿಸ್ಟರ್ ಪರೀಕ್ಷೆ ಇತ್ತು. ಪರೀಕ್ಷೆ ಮುಂದೂಡಿಸಲೆಂದು ಪ್ಲ್ಯಾನ್ ಮಾಡಿದ ವಿದ್ಯಾರ್ಥಿಯೊಬ್ಬ,[email protected]ಅನ್ನೋ ಮೇಲ್ ಐಡಿಯಿಂದ, ಭಾನುವಾರ ಸಂಜೆ 6.30ಕ್ಕೆ ಸ್ಕೂಲ್​ನ 3ನೇ ಯೂನಿಟ್​ಗೆ ಬೆದರಿಕೆ ಮೇಲ್​ ಕಳುಹಿಸಿದ್ದ.
‘ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ನಾಳೆ(ಸೋಮವಾರ) ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೇ ಫಿಕ್ಸ್ ಮಾಡಲಾಗಿದೆ. ಶಾಲೆ ಆವರಣದ 200 ಮೀಟರ್ ಅದರ ಎಫೆಕ್ಟ್ ಆಗುತ್ತೆ. ಥ್ಯಾಂಕ್ಸ್​, ಬಾಂಬ್ ಟೆರರಿಸ್ಟ್’ ಎಂದು ಮೇಲ್​ ಕಳುಹಿಸಿದ್ದ.
ಸೋಮವಾರ ಬೆಳಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಮೇಲ್​ ನೋಡಿ ಸಿಬ್ಬಂದಿ ಗಾಬರಿಯಾಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಆರ್​ಆರ್​ ನಗರ ಠಾಣೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡು ಬಂದಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಆರ್​ಆರ್ ನಗರ ಪೊಲೀಸರು, ವಿದ್ಯಾರ್ಥಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಿ ಸತ್ಯಾಂಶ ಬಯಲಾಗಿದೆ. ವಿದ್ಯಾರ್ಥಿಯನ್ನ ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ: ನನ್ ಹೆಸ್ರನ್ನ ಮಿಸ್​ಯೂಸ್ ಮಾಡ್ಬೇಡಿ… ಹುಚ್ಚ ವೆಂಕಟ್ ಆಕ್ರೋಶ

ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ

ಬೈಕ್​ ಸ್ಕಿಡ್​ ಆಗಿ ವಿದ್ಯಾರ್ಥಿಗಳಿಬ್ಬರ ಸಾವು: ರಜೆ ಹಿನ್ನೆಲೆ ಮುರುಡೇಶ್ವರಕ್ಕೆ ತೆರಳುವಾಗ ಅವಘಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + three =
Remember me
