ಧಾರವಾಡ:ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಉತ್ತರಕನ್ನಡ ಜಿಲ್ಲೆಯ ಯುವತಿ ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಗಳು ಇನ್ನು ಬದುಕುವುದಿಲ್ಲ ಎಂಬ ಆಘಾತಕಾರಿ ವಿಷಯ ಕೇಳಿದ ಪಾಲಕರು, ನೋವಲ್ಲೂ ಮಗಳ ಅಂಗಾಂಗ ದಾನ ಮಾಡಿದ್ದಾರೆ. ಉತ್ತರಕನ್ನಡ ಯುವತಿಯ ಹೃದಯವನ್ನ ಬೆಳಗಾವಿ ಯುವಕನಿಗೆ ಕಸಿ ಮಾಡಲು ಧಾರವಾಡದಿಂದ ಆಂಬುಲೆನ್ಸ್​ ಮೂಲಕ ಝೀರೋ ಟ್ರಾಫಿಕ್​ನಲ್ಲಿ ಕೊಂಡೊಯ್ಯಲಾಗಿದೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವತಿಯನ್ನು ಧಾರವಾಡ ನಗರದ ಸತ್ತೂರಿನ ಎಸ್‌ಡಿಎಂ ಆಸ್ಪತ್ರೆಗೆ ಸೋಮವಾರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಿಯ ಆಗಿದೆ ಎಂದು ವೈದ್ಯರು ಖಚಿತಪಡಿಸಿದರು. ನಂತರ ವೈದ್ಯಕೀಯ ಕಾನೂನುಗಳ ಅನ್ವಯ ಯುವತಿಯ ಪಾಲಕರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.
ಅದರಂತೆ ಯುವತಿಯ ಹೃದಯವನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಸಾಗಿಸಲು ವೈದ್ಯರು ನಿರ್ಧರಿಸಿದರು. ಸತ್ತೂರಿನಲ್ಲಿರುವ ಎಸ್‌ಡಿಎಂ ಆಸ್ಪತ್ರೆಯಿಂದ ಧಾರವಾಡದ ಮೂಲಕ ಬೆಳಗಾವಿಗೆ ಝೀರೋ ಟ್ರಾಫಿಕ್ ಮೂಲಕ ಆಂಬುಲೆನ್ಸ್​ನಲ್ಲಿ ಸಾಗಿಸಲಾಯಿತು. ಆಂಬುಲೆನ್ಸ್ ಸಾಗಲು ಬಿಆರ್‌ಟಿಎಸ್ ಪಥದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.
ಅದೇರೀತಿ ವಿಮಾನದ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಯುವತಿಯ ಲಿವರ್ ಸಾಗಿಸಲಾಯಿತು. ಒಂದು ಕಿಡ್ನಿಯನ್ನು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ಹಾಗೂ ಮತ್ತೊಂದನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ನೀಡಲಾಯಿತು.
33 ವರ್ಷದ ಪುರುಷನಿಗೂ ಪಿರಿಯಡ್ಸ್​! ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಆಘಾತ…

ತವರು ಜಿಲ್ಲೆ ತುಮಕೂರಿಗೆ ಆಗಮಿಸಿದ ಕೆನಡಾ ಸಂಸದ ಚಂದ್ರ ಆರ್ಯ: ಹುಟ್ಟೂರಲ್ಲಿ ಗ್ರಾಮಸ್ಥರ ಜತೆ ಮಾತುಕತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + 18 =
Remember me
