ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಅದರಿಂದಾಗುತ್ತಿರುವ ಅನಾಹುತಗಳು ಕೂಡ ಹೆಚ್ಚಾಗುತ್ತಿವೆ. ಪ್ರತಿಯೊಂದು ಕ್ಷೇತ್ರವೂ ಡಿಜಿಟಲೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಸೈಬರ್ ಅಪರಾಧದ ಉಪಟಳ ಮಿತಿಮೀರಿದೆ. ಪೊಲೀಸರು ಚಾಪೆ ಕೆಳಗೆ ತೂರಿದರೆ ಸೈಬರ್ ಖದೀಮರು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಸೈಬರ್ ಅಪರಾಧದ ಬಗ್ಗೆ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸೈಬರ್ ಅಪಾಯಕ್ಕೆ ಒಳಗಾಗದಂತೆ ಜನರನ್ನು ಎಚ್ಚರಿಸುತ್ತಿರುವ ಬೆನ್ನಲ್ಲೇ ಹೊಸಹೊಸ ರೂಪದಲ್ಲಿ ವಂಚನೆ ಮಾಡಲು ಸೈಬರ್ ಕಳ್ಳರೂ ಪ್ರತಿತಂತ್ರ ರೂಪಿಸಿ ಯಶಸ್ವಿಯಾಗುತ್ತಿರುವುದು ಕಳವಳಕಾರಿ ಸಂಗತಿ.
ಕೋವಿಡ್ ಲಾಕ್​ಡೌನ್ ಮತ್ತು ಆನಂತರ ಜನರಿಗೆ ಎದುರಾದ ಆರ್ಥಿಕ ಸಂಕಷ್ಟವನ್ನೇ ಲಾಭ ಮಾಡಿಕೊಂಡು ಕೆಲವೇ ಕ್ಷಣದಲ್ಲಿ ಸಾಲ ಕೊಡುವ ಲೋನ್ ಆಪ್​ಗಳನ್ನು ಕೆಲವರು ಪರಿಚಯಿಸಿದ್ದರು. ಮೊಬೈಲ್​ನಲ್ಲಿ ಆಪ್ ಡೌನ್​ಲೋಡ್ ಮಾಡಿಕೊಂಡು ಬರೀ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ವಿವರ ನಮೂದಿಸಿದರೆ ಸಾಕು, 10 ಸಾವಿರದಿಂದ -ಠಿ;1 ಲಕ್ಷವರೆಗೂ ಸಾಲ ಕೊಡುತ್ತಾರೆ. ಸಾಲ ತೀರಿಸಿದರೂ ಮೊಬೈಲ್​ನಲ್ಲಿರುವ ಗ್ರಾಹಕರ ವೈಯಕ್ತಿಕ ಮಾಹಿತಿ ಕದ್ದು, ದುಬಾರಿ ಬಡ್ಡಿ ಸುಲಿಗೆ ಮಾಡುತ್ತಾರೆ. ಹಣ ಕೊಡದಿದ್ದರೆ ವೈಯಕ್ತಿಕ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಸ್ನೇಹಿತರು, ಪರಿಚಯಸ್ಥರು, ಸಂಬಂಧಿಕರ ಮೊಬೈಲ್​ಗೆ ಕಳುಹಿಸಿ ಮಾನ ತೆಗೆಯುತ್ತಾರೆ. ಲೋನ್ ಆಪ್​ಗಳ ಕಿರುಕುಳಕ್ಕೆ ಒಳಗಾದ ಅದೆಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದೂ ಉಂಟು. ಸರ್ಕಾರ, ಪೊಲಿಸ್ ಇಲಾಖೆ, ಆರ್​ಬಿಐ, ಇತರ ಬ್ಯಾಂಕ್​ಗಳು ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಈ ವಂಚನೆ ನಿಲ್ಲದಿರುವುದು ದುರದೃಷ್ಟಕರ.
ಇದರ ನಡುವೆ ಕೋವಿಡ್ ಲಾಕ್​ಡೌನ್​ನಲ್ಲಿ ಹುಟ್ಟಿಕೊಂಡ ವರ್ಚುವಲ್ ಮೀಟಿಂಗ್ ವ್ಯವಸ್ಥೆಯೂ ದುರ್ಬಳಕೆಯಾಗುತ್ತಿದೆ. ಫೆಡೆಕ್ಸ್ ಕೋರಿಯರ್ ಸಿಬ್ಬಂದಿ, ಮುಂಬೈ ಪೊಲೀಸರು ಮತ್ತು ಸೈಬರ್ ಪೊಲೀಸರ ಸೋಗಿನಲ್ಲಿ ಅಮಾಯಕ ಜನರಿಗೆ ಕರೆ ಮಾಡಿ ವಿಚಾರಣೆ ನೆಪದಲ್ಲಿ ಡಿಜಿಟಲ್ ಆರೆಸ್ಟ್ ಮಾಡಿ, ಹಣ ಲೂಟಿ ಮಾಡುತ್ತಿದ್ದಾರೆ. ತಾವು ಹೇಳುವವರೆಗೆ ಲೈವ್​ನಲ್ಲೇ ಇರಬೇಕೆಂದು ಬೆದರಿಸುತ್ತಾರೆ. ಒಂದು ವೇಳೆ ಅವರ ಮಾತು ಕೇಳದಿದ್ದರೆ ಬಂಧಿಸುವುದಾಗಿ ಬೆದರಿಸಿ ವರ್ಚುವಲ್ ವಿಚಾರಣೆ ಎಂದು ಹೇಳಿ ಬ್ಯಾಂಕ್ ಖಾತೆ ವಿವರ ಪಡೆದು ಹಣ ತೆಗೆದುಕೊಳ್ಳುತ್ತಿದ್ದಾರೆ. ನಿವೃತ್ತ ಅಧಿಕಾರಿಗಳು, ವಿಜ್ಞಾನಿಗಳು, ಸಾಫ್ಟ್​ವೇರ್ ಇಂಜಿನಿಯರ್​ಗಳು ಸೇರಿ ವಿದ್ಯಾವಂತರೇ ಮರ್ಯಾದೆಗೆ ಅಂಜಿ ಮೋಸ ಹೋಗಿದ್ದಾರೆ.
ಪೊಲೀಸ್ ಇಲಾಖೆ, ಆರ್​ಬಿಐ ಕಾಲಕಾಲಕ್ಕೆ ಜಾಗೃತಿ ಮೂಡಿಸುತ್ತಿದ್ದರೂ ಸೈಬರ್ ಅಪರಾಧಗಳ ಹಾವಳಿ ನಿಂತಿಲ್ಲ. ವೈಯಕ್ತಿಕ ವಿವರ ಹಂಚಿಕೊಳ್ಳುವಾಗ ಸಾರ್ವಜನಿಕರು ಎಚ್ಚರ ವಹಿಸಬೇಕು. ಎಲ್ಲೆಂದರಲ್ಲಿ, ಯಾರೆಂದರೆ ಅವರಿಗೆ ಆಧಾರ್, ಪಾನ್ ನಂಬರ್ ಕೊಡಬಾರದು. ಅಪರಿಚಿತ ವ್ಯಕ್ತಿಗಳು ಕರೆ ಮಾಡಿದರೆ ಸ್ವೀಕರಿಸಬಾರದು. ವಂಚನೆಯ ‘ವಾಸನೆ’ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಸೈಬರ್ ಅಪರಾಧದ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಲಭ್ಯವಿರುವ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸೈಬರ್ ಖದೀಮರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
ರಕ್ತ ಪರೀಕ್ಷೆ ವೇಳೆ ಮದ್ಯಪಾನದ ಜತೆಗೆ ಡ್ರಗ್ಸ್ ಸೇವನೆ ಬಗ್ಗೆಯೂ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
