| ಮೃತ್ಯುಂಜಯ ಕಪಗಲ್ ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಬಳಿಕ ರಾಜ್ಯ ಬಿಜೆಪಿಯ ಹವಾಮಾನವೇ ಬದಲಾದಂತೆ ಕಾಣುತ್ತಿದೆ. ಇದರ ಜತೆಗೆ ಅಭ್ಯರ್ಥಿಗಳ ಆಯ್ಕೆ, ಪಕ್ಷದ ಮುಖಂಡರ ಅಸಮಾಧಾನ ಶಮನ, ಗ್ರಾಮ ಚಲೋ ಅಭಿಯಾನ, ರಾಷ್ಟ್ರ-ರಾಜ್ಯ ನಾಯಕರ ಹಲವು ಸುತ್ತಿನ ಪ್ರಚಾರದ ನಂತರ ಬಿಜೆಪಿಯ ‘ರಿಪೋರ್ಟ್ ಕಾರ್ಡ್’ ಕೇಸರಿಪಡೆಗೆ ಹಿತಾನುಭವ ತಂದಿದೆ. ಬಿರು ಬಿಸಿಲಿಲ್ಲೂ ಮೋದಿ ‘ಒನ್ ಮ್ಯಾನ್’ ಶೋ ರಾಜಕೀಯ ಲೆಕ್ಕಾಚಾರವನ್ನೇ ಅಲುಗಾಡಿಸಿದೆ.
ಗ್ಯಾರಂಟಿ ಯೋಜನೆಗಳು ‘ಕೈ’ ಹಿಡಿಯಲಿವೆ ಎಂಬ ಕಾಂಗ್ರೆಸ್ ಆಶಾಭಾವನೆ ಮತ್ತು ಮೋದಿ ಅಲೆ ಗೆಲುವಿನ ದಡ ಸೇರಿಸಲಿದೆ ಎಂಬ ಬಿಜೆಪಿಯ ವಾದ ಅತಿಯಾದ ಆತ್ಮವಿಶ್ವಾಸದ ಸೂಚಕಗಳಾಗಿವೆ. ದೇಶದ ಚುನಾವಣೆಯಿದು ಎಂದು ಸಾಮಾನ್ಯ ಜನರಿಗೆ ಅರ್ಥವಾಗಿದೆ. ಹೀಗಾಗಿ ರಾಜ್ಯಕ್ಕೆ ಗ್ಯಾರಂಟಿಯಿರಲಿ, ದೇಶಕ್ಕೆ ಮೋದಿ ಬರಲಿ ಎಂಬ ಮಾತುಅಖಾಡದಲ್ಲಿ ಹಾಸುಹೊಕ್ಕಾಗಿದೆ.
ದೌರ್ಬಲ್ಯಕ್ಕೆ ಮುಲಾಮು:ಬಹಳಷ್ಟು ಕ್ಷೇತ್ರಗಳಲ್ಲಿ ಎಷ್ಟೇ ರಾಜಿ ಮಾಡಿದರೂ ಎರಡು, ಮೂರನೇ ಹಂತದ ಮುಖಂಡರ ಅಂತಃಕಲಹ, ಅಭ್ಯರ್ಥಿ ಜತೆಗೆ ಅಷ್ಟಕ್ಕಷ್ಟೇ ಬೆರೆಯುವ ನ್ಯೂನತೆಗಳನ್ನು ಪೂರ್ಣ ಹೋಗಲಾಡಿಸಲು ಸಾಧ್ಯವಾಗಿಲ್ಲ. ಎಲ್ಲ ರೀತಿಯಿಂದ ಮನವೊಲಿಸಲು ಪ್ರಯತ್ನಿಸಿದ ರಾಜ್ಯ ನಾಯಕರು, ಉಳಿದ ಕೊರಗುಗಳನ್ನು ನಿರ್ಲಕ್ಷಿಸಿ ಜನರ ಮನಗೆಲ್ಲುವುದಕ್ಕಾಗಿ ಮತಶಿಕಾರಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಈ ಸಿಟ್ಟು-ಸೆಡವುಗಳ ಬಗ್ಗೆ ಬೆಂಬಲಿಗರು, ಅನುಯಾಯಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರು ತಮ್ಮ ಕೆಲಸದಲ್ಲಿ ತೊಡಗಿದ್ದು, ಜನರೂ ಅಷ್ಟಾಗಿ ಗಮನ ಕೊಡುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಎಲ್ಲ ಕಡೆ ಸ್ಪರ್ಧಿಸುತ್ತಿಲ್ಲ, ಪಕ್ಷ ದುರ್ಬಲವಾಗಿದೆ. ನಾಯಕತ್ವದ ಅಸ್ಪಷ್ಟತೆ ಇತ್ಯಾದಿ ದೌರ್ಬಲ್ಯಗಳು ಕಮಲಪಡೆಯ ಅಂತಃಕಲಹಗಳಿಗೆ ಮುಲಾಮು ಆದಂತಿದೆ. ಮೋದಿಯವರ ಬಗ್ಗೆ ಎಲ್ಲ ಕಡೆ ಚರ್ಚೆಯಾಗುತ್ತಿದೆ, ಮೋದಿಯವರೇ ಅಭ್ಯರ್ಥಿ. ದೇಶದ ಹಿತ ಮತ್ತು ಸ್ಥಿರ ಸರ್ಕಾರವೆಂಬ ಘೋಷ ವಾಕ್ಯಗಳು ಜನರ ಮನಸ್ಸಿನಲ್ಲಿ ನಾಟಿವೆ. ಇದಿಷ್ಟಕ್ಕೆ ಖುಷಿಪಟ್ಟು ಜನರ ಸಂಪರ್ಕ, ನಿರಂತರ ಪರಿಶ್ರಮ ನಿರ್ಲಕ್ಷಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನೂ ವರದಿ ನೀಡಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಗುರಿ 20:ಕಳೆದ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ್ದ ಕಾಂಗ್ರೆಸ್ ಈ ಬಾರಿ ಫೈಟ್ ಬ್ಯಾಕ್ ಮಾಡುವ ಮನಸ್ಥಿತಿಯಲ್ಲಿದೆ. ಕನಿಷ್ಠ 20 ಸ್ಥಾನ ಗೆಲ್ಲಬೇಕೆಂಬ ಗುರಿ ಇದ್ದರೂ 14 ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಗುರುತಿಸಲಾಗಿದೆ. 10 ಕ್ಷೇತ್ರಗಳಲ್ಲಿ ಗೆಲ್ಲಬಹುದಾದ ವಾತಾವರಣವಿದೆ ಎಂದು ಆ ಪಕ್ಷದ ನಾಯಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಿಗಿಂತ ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕಡೆ ಹೆಚ್ಚಿನ ಸ್ಥಾನ ಗೆಲ್ಲುವ ಅವಕಾಶವಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳು ಪರಿಣಾಮ ಬೀರಿದರೆ ಕಷ್ಟವಾಗಬಹುದು. ಈ ಘಟನೆಗಳು ನಡೆಯುವ ಮುನ್ನ ಪಕ್ಷಕ್ಕೆ ಅನುಕೂಲಕರ ಸನ್ನಿವೇಶವಿತ್ತು ಎಂದು ಹೇಳಲಾಗ್ತಿದೆ. ಮೋದಿ ಅಲೆ ಇಲ್ಲವೇ ಇಲ್ಲ ಎಂದು ಹೇಳುವಂತಿಲ್ಲ. ಹಾಗೆಯೇ ಗ್ಯಾರಂಟಿ ಅಲೆ ಎಷ್ಟು ಪ್ರಮಾಣದಲ್ಲಿ ಕೈ ಹಿಡಿಯಬಹುದೆಂಬ ಅಂದಾಜು ಸಿಗುತ್ತಿಲ್ಲ.
ಅಲ್ಪ ಮುನ್ನಡೆ ಕ್ಷೇತ್ರಗಳು: 1.ಬೀದರ್ 2. ಕೊಪ್ಪಳ 3.ಚಿಕ್ಕಬಳ್ಳಾಪುರ
ಸುಧಾರಣೆ ಅಗತ್ಯತೆ:ಕೇಂದ್ರ ಸರ್ಕಾರದ ಸಾಧನೆಗಳ ಮನವರಿಕೆ, ರಾಜ್ಯದಲ್ಲಿ ಬಿಜೆಪಿ ಆಡಳಿತದ ಕೊಡುಗೆಗಳ ಅರಿವು, ರೈತರು-ಶೋಷಿತ ಸಮುದಾಯಗಳ ವಿಶ್ವಾಸ ಗಳಿಕೆ, ಜಾತಿ ಸಮೀಕರಣದ ಲೆಕ್ಕಾಚಾರ ಇನ್ನಷ್ಟು ಬಿಗಿ, ಅಭ್ಯರ್ಥಿಯೊಂದಿಗೆ ಅತೃಪ್ತ ಮುಖಂಡರ ಜೋಡಣೆ, ತಳಮಟ್ಟಕ್ಕೂ ಬಿಜೆಪಿ-ಜೆಡಿಎಸ್ ಸಮನ್ವಯ ವಿಸ್ತರಣೆ, ಒಳೇಟಿನ ಭೀತಿ ನಿವಾರಣೆ.
ದಳಕ್ಕೆ ಮೂರರ ವಿಶ್ವಾಸ:ಜೆಡಿಎಸ್ ಮೂರೂ ಸ್ಥಾನದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರಭಾವ ಮತ್ತು ಬಿಜೆಪಿ ಬಲ ಗೆಲುವಿನ ದಡ ತಲುಪಿಸಿದರೆ, ಕೋಲಾರದಲ್ಲಿ ಎದುರಾಳಿ ಅಭ್ಯರ್ಥಿಗೆ ಅವರದೇ ಪಕ್ಷದಿಂದ ಸಿಗದ ಸಹಕಾರ ಜೆಡಿಎಸ್​ಗೆ ವರದಾನವಾಗಬಹುದು, ಹಾಸನದಲ್ಲಿ ಈ ಹಂತದಲ್ಲಿ ನಕಾರಾತ್ಮಕ ಚರ್ಚೆ ನಡೆದರೂ ಪಕ್ಷದ ಬೇರು ಬಲವಾಗಿದೆ ಮತ್ತು ಬಿಜೆಪಿ ಮತಗಳು ಕೈತಪ್ಪದ ಕಾರಣ ಲಾಭವಾಗಲಿದೆ ಎಂದೇ ಜೆಡಿಎಸ್ ಭಾವಿಸಿದೆ.
1. ಚಾಮರಾಜನಗರ 2. ಚಿತ್ರದುರ್ಗ
ಕಾರಣಗಳು:ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಸಿ. ಮಹದೇವಪ್ಪ ಆಕ್ರಮಣಕಾರಿ ತಂತ್ರಗಾರಿಕೆ, ಗ್ಯಾರಂಟಿ ಯೋಜನೆಗಳ ಪ್ರಭಾವ, ಪಕ್ಷದ ನಾಯಕರ ನಿರಂತರ ಭೇಟಿ ಕೊರತೆ, ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ತಟಸ್ಥ ನಿಲುವು, ಕ್ಷೇತ್ರಕ್ಕೆ ‘ಹೊರಗಿನವರು’ ಎಂಬ ಅಪಸ್ವರ ನಿವಾರಣೆಯಾಗಿಲ್ಲ. ಹಾಲಿ ಸಂಸದರ ಕಾರ್ಯವೈಖರಿಗೆ ಜನರಲ್ಲಿ ಬೇಸರ.

1.ಬಡ, ಶೋಷಿತರಿಗೆ ಗ್ಯಾರಂಟಿಗಳ ಲಾಭ
2. ಈ ವರ್ಗದ ಮನೆ ಮನೆಗೆ ಬಿಜೆಪಿ ಭೇಟಿ
3. ಜನರಿಗೆ ವಸ್ತುಸ್ಥಿತಿ ತಿಳಿಸುತ್ತಿರುವ ಬಿಜೆಪಿ
4. ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂಬ ವಾದ
5. ಕಂದಾಯ, ಸ್ಟಾ್ಯಂಪ್ ಶುಲ್ಕ ಹೆಚ್ಚಳ ಅಸ್ತ್ರ
6. ಮದ್ಯ ಬೆಲೆ ಏರಿಕೆ, ಕಿಸಾನ್ ಸಮ್ಮಾನ್​ಗೆ ಕೊಕ್
7. ಗ್ಯಾರಂಟಿಗೆ ಸ್ತ್ರೀಯರ ಬಲ, ಪುರುಷರ ಹೊಡೆತ
2 ಏರಿಳಿತಗಳಿಂದ ಲೆಕ್ಕಾ ಚುಕ್ತಾ ಎಂದ ಬಿಜೆಪಿ
1. ದೆಹಲಿ ತಲುಪಿದ ರಿಪೋರ್ಟ್ ಕಾರ್ಡ್
2. 25ರ ಪೈಕಿ 14 ಕ್ಷೇತ್ರಗಳಲ್ಲಿ ಮುನ್ನಡೆ
3. ಮೂರು ಕ್ಷೇತ್ರಗಳಲ್ಲಿ ಅಲ್ಪ ಮುನ್ನಡೆ
4. ಆರು ಕ್ಷೇತ್ರಗಳಲ್ಲಿ ನೇರ ಹಣಾಹಣಿ
5. ಉಳಿದ 2 ಕ್ಷೇತ್ರದಲ್ಲಿ ಕಠಿಣ ಸವಾಲು
6. ಅಭಿವೃದ್ಧಿಶೀಲ ಭಾರತಕ್ಕೆ ಬೆಂಬಲ
7. ಆರ್ಥಿಕ ಶಕ್ತಿಯಿಂದ ಅವಕಾಶ ಹೆಚ್ಚಳ
8. ದುಡಿಮೆಯಿಂದ ಉತ್ತಮ ಬದುಕು

1. ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆ
2. ಕುಡಿಯುವ ನೀರು ಸಮಸ್ಯೆ ಹೆಚ್ಚಳ
3. ಮೇವಿನ ಸಮಸ್ಯೆಗೆ ಸಿಗದ ಪರಿಹಾರ
4. ಬೆಳೆ ಪರಿಹಾರ ಸಿಗದಿದ್ದಕ್ಕೆ ಆಕ್ರೋಶ
5. ವಲಸೆ, ಬಿಸಿಲ ತಾಪದ ಪರಿಣಾಮ
6. ಕೇಂದ್ರಕ್ಕಿಂತ ರಾಜ್ಯದ ಮೇಲೆ ಸಿಟ್ಟು

ಎಲ್ಲೆಲ್ಲಿ ನೇರ ಹಣಾಹಣಿ?
1. ಬೆಂ. ಗ್ರಾಮಾಂತರ 2. ಚಿಕ್ಕೋಡಿ 3. ಬಳ್ಳಾರಿ 4. ದಾವಣಗೆರೆ 5. ರಾಯಚೂರು 6. ಕಲಬುರಗಿ
ಕಾರಣಗಳು:ಮುಖಂಡರು ಹಾಗೂ ಅಭ್ಯರ್ಥಿ ಮಧ್ಯೆ ಹೊಂದಾಣಿಕೆ ಕೊರತೆ, ವ್ಯತಿರಿಕ್ತ ಅಭ್ಯರ್ಥಿ ಆಯ್ಕೆ ಆಕ್ಷೇಪಿಸಲಾಗದೆ ಅಂತರ ಕಾಯ್ದುಕೊಳ್ಳುತ್ತಿರುವ ಕಾರ್ಯಕರ್ತರು, ಹಾಲಿ ಸಂಸದರ ಬಗ್ಗೆ ‘ವಿರೋಧಿ ಅಲೆ’, ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ಸಮನ್ವಯದ ಸಮಸ್ಯೆ, ಗ್ಯಾರಂಟಿಗಳತ್ತ ಬಡ ಮಹಿಳೆಯರ ಒಲವು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
