ಹಾಸನ:ಹೊಳೆನರಸೀಪುರದ ಒಗ್ಗರಣೆ ಬೀದಿಯಲ್ಲಿ ವ್ಯಕ್ತಿಯೊಬ್ಬ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಈತನ ಸಾವಿಗೂ ಪಿಎಸ್​ಐ ಹುದ್ದೆಯಲ್ಲಿನ ಅಕ್ರಮ ಪ್ರಕರಣಕ್ಕೂ ಲಿಂಕ್​ ಇರುವ ಶಂಕೆ ವ್ಯಕ್ತವಾಗಿದೆ.
ವಾಸು(36) ಮೃತ ದುರ್ದೈವಿ. ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್‌ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸುನನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ವಾಸು ಸಹೋದರ ಮನುಕುಮಾರ್​ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ. ಪಿಎಸ್​ಐ ಹುದ್ದೆ ಹಗರಣ ಬಯಲಾಗುತ್ತಿದ್ದಂತೆ ಮನುಕುಮಾರ್​ನನ್ನು ಇತ್ತೀಚಿಗೆ ಸಿಐಡಿ ಪೊಲೀಸರು ಬಂಧಿಸಿದ್ದರು. ಇದೀಗ ಮಂಗಳವಾರ ರಾತ್ರಿ ಮನುಕುಮಾರ್​ನ ಅಣ್ಣ ವಾಸು ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಮಗನ ಸಾವಿನ ನೋವಿನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ತಾಯಿ ತಾಯಿ ಶಿವಮ್ಮ, ನನ್ನ ಮಗ ವಾಸು ಆತ್ಮಹತ್ಯೆಗೂ ಮನುಕುಮಾರ್ ಪಿಎಸ್‌ಐ ಆಯ್ಕೆಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗ ಮನುಕುಮಾರ್ ತುಂಬಾ ಚೆನ್ನಾಗಿ ಓದುತ್ತಿದ್ದ. ಅವನು ಓದಿದ ಕಡೆಯೆಲ್ಲ ಹಲವು ಬಹುಮಾನ ತೆಗೆದುಕೊಂಡಿದ್ದ. ವಾಸು ಆತ್ಮಹತ್ಯೆಗೂ ಮನುಕುಮಾರ್‌ಗೂ ಸಂಬಂಧವಿಲ್ಲ. ನಾನು ಬಡವರು. ಒಂದು ಎಕರೆ ಜಮೀನಿದೆ. ಹೀಗಿರುವಾಗ ಹಣ ಕೊಟ್ಟು ಪಿಎಸ್​ಐ ಕೆಸಲ ಪಡೆಯಲು ಹೇಗೆ ಸಾಧ್ಯ? ಪಿಎಸ್‌ಐ ಆಗಿ ಆಯ್ಕೆಯಾದ ಬಗ್ಗೆ ತಮ್ಮನನ್ನು ವಾಸು ಸರಿಯಾಗಿ ವಿಚಾರಿಸಿಯೂ ಇರಲಿಲ್ಲ. ಹೀಗಿರುವಾಗ ವಾಸು ಸಾವಿಗೂ, ಮನುಕುಮಾರ್ ಆಯ್ಕೆಗೂ ಸಂಬಂಧವೇನು? ನನ್ನ ಮಗ ಹಣ ಕೊಟ್ಟು ಖಂಡಿತ ಕೆಲಸ ಪಡೆದಿಲ್ಲ. ಆ ಶಕ್ತಿಯೂ ನಮಗಿಲ್ಲ ಎಂದು ಕಣ್ಣೀರಿಟ್ಟರು. ಮಗ ವಾಸು ಮತ್ತು ಸೊಸೆ ನಡುವೆ ಸಣ್ಣಪುಟ್ಟ ಜಗಳಗವಾಗಿತ್ತು. ಆದರೆ ಆತನ ಸಾವಿಗೆ ಕಾರಣ ಏನೆಂದು ತಿಳಿದಿಲ್ಲ ಎಂದರು.(ದಿಗ್ವಿಜಯ ನ್ಯೂಸ್​, ಹಾಸನ)
ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ತಂದೆಯ ಮೇಣದ ಪ್ರತಿಮೆ ಮುಂದೆ ಮದ್ವೆ ಶಾಸ್ತ್ರಕ್ಕೆ ಕುಳಿತ ವರ! ಕರೊನಾದಿಂದ ಮೃತಪಟ್ಟಿದ್ದ ತಂದೆ, ಭಾವುಕ ಕ್ಷಣದ ಫೋಟೋ ವೈರಲ್​

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ತಾಯಿ ಕಣ್ಣೆದುರೇ ಪ್ರಿಯಕರನೊಂದಿಗೆ ಪರಾರಿ​! ಕೊಳ್ಳೇಗಾಲದಲ್ಲಿ ಘಟನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + seventeen =
Remember me
