ಬೆಂಗಳೂರು:ಇತ್ತೀಚೆಗೆ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು ಮುಖ್ಯಮಂತ್ರಿ ಬದಲಾವಣೆ ವಿಚಾರ. ಸಿಎಂ ಬದಲಾಗ್ತಾರೆ, ಯಡಿಯೂರಪ್ಪ ಅವರನ್ನ ಸಿಎಂ ಖುರ್ಚಿಯಿಂದ ಕೆಳಗಿಳಿಸಿ ಬೇರೊಬ್ಬರನ್ನು ಕೂರಿಸಲಾಗುತ್ತೆ.. ಯಾವುದೇ ಕಾರಣಕ್ಕೂ ಸಿಎಂ ಬದಲಾಗಲ್ಲ, ಬಿಎಸ್​ವೈ ಅವರೇ ನಮ್ಮ ನಾಯಕ… ಹೀಗೆ ಪರ-ವಿರೋಧ ಚರ್ಚೆಗಳು ಗರಿಗೆದರಿದ್ದವು. ಇದೀಗ ಈ ಎಲ್ಲ ಗೊಂದಲಕ್ಕೂ ಇಂದು ತೆರೆ ಎಳೆದಿದ್ದಾರೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌.
ಸಿಎಂ ಯಡಿಯೂರಪ್ಪ ಅವರನ್ನು ಸದ್ಯಕ್ಕೆ ಬದಲಾಯಿಸುವ ಯಾವುದೇ ಯೋಚನೆ ಬಿಜೆಪಿ ವರಿಷ್ಟ ಮಂಡಳಿಗಿಲ್ಲ. ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಯಾರೊಬ್ಬರೂ ಬಹಿರಂಗ ಹೇಳಿಕೆಯನ್ನು ನೀಡಬಾರದು ಎಂದಿರುವ ಅರುಣ್​ ಸಿಂಗ್​, ಶೀಘ್ರವೇ ಶಾಸಕರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಲಾಗುವುದು ಎಂದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಬದಲಾವಣೆ ಸಾಧ್ಯತೆ ವಿಚಾರವನ್ನೂ ತಳ್ಳಿ ಹಾಕಿದ್ದಾರೆ.ಇದನ್ನೂ ಓದಿರಿಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ
ಅರುಣ್​ ಸಿಂಗ್​ರ ಈ ಹೇಳಿಕೆ ಬೆನ್ನಲ್ಲೇ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ನಾಯಕತ್ವ ಇಲ್ಲದವರು ಯಡಿಯೂರಪ್ಪರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ, ನಾನೇ ಸಿಎಂ ಆಗ್ತೀನಿ ಅಂತ ಹಗಲು ಕನಸು ಕಾಣುತ್ತಿದ್ದರು ಎಂದು ಹೆಸರು ಹೇಳದೇ ಶಾಸಕ ಯತ್ನಾಳ್‌, ಸಚಿವ ಸಿ.ಪಿ.ಯೋಗೇಶ್ವರ್‌ಗೆ ಟಾಂಗ್‌ ನೀಡಿದರು.
ಸಿಎಂ ಯಡಿಯೂರಪ್ಪ ಅವರಿಗೂ 2 ಬಾರಿ ಕರೊನಾ ಸೋಂಕು ತಗುಲಿತ್ತು. ಆದ್ರೂ, ಅವರು ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡಿದ್ರು. ಈ ಸಂದರ್ಭದಲ್ಲಿ ಜನ ನಮ್ಮ ನಡವಳಿಕೆ ಗಮನಿಸುತ್ತಿರುತ್ತಾರೆ. ಕೆಲವರು ದೆಹಲಿ ಹೋಗಿ ರಾಷ್ಟ್ರೀಯ ನಾಯಕರ ಭೇಟಿ ನಾಟಕ ಮಾಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಆಗುತ್ತೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಇನ್ನು ಮುಂದಾದ್ರೂ ಇಂಥ ಕೆಲಸ ನಿಲ್ಲಿಸಬೇಕು. ಕೋವಿಡ್‌ ನಿಯಂತ್ರಣದ ಬಗ್ಗೆ ಗಮನ ಹರಿಸಬೇಕು. ಪ್ರಯಾಣಿಸುವ ಹಡಗಿಗೆ ತೂತು ಕೊರೆಯಬಾರದು. ಕ್ಯಾಪ್ಟನ್‌ ಮಾತ್ರವಲ್ಲ ಹಡಗಿನಲ್ಲಿರುವ ಎಲ್ಲರೂ ಮುಳುಗುತ್ತಾರೆ. 25 ಶಾಸಕರು ಚರ್ಚೆ ಮಾಡಿ 65 ಶಾಸಕರ ಸಹಿ ಮಾಡಿಸಿದ್ದೇವೆ ಎಂದರು.
ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬಾಲಕಿ ಮೇಲೆ ಎದುರು ಮನೆ ಯುವಕನಿಂದ ನಿರಂತರ ಅತ್ಯಾಚಾರ! 4 ತಿಂಗಳ ಬಳಿಕ ಪಾಲಕರಿಗೆ ಕಾದಿತ್ತು ಶಾಕ್​

ರೋಹಿಣಿ ಸಿಂಧೂರಿ ಮನೆಯ ವಿದ್ಯುತ್​ ಬಿಲ್​ ತಿಂಗಳಿಗೆ 50 ಸಾವಿರ ರೂ., ಈಜುಕೊಳಕ್ಕೆ ಕುಡಿವ ನೀರು ಬಳಕೆ…

ಭಟ್ಕಳದಲ್ಲಿ 8 ವರ್ಷದಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಬಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + fifteen =
Remember me
