ಬೆಂಗಳೂರು:ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆನಂದ್​ ಸಿಂಗ್​ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು. ಇದೀಗ ಎಂಟಿಬಿ ನಾಗರಾಜ್​ ಕೂಡ ಇದೇ ಹಾದಿ ತುಣಿದಿದ್ದು, ಇನ್ನೆರಡು ದಿನದಲ್ಲಿ ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ಟ್ವೀಟ್​ ಮೂಲಕ ಎಚ್ಚರಿಸಿದ್ದಾರೆ.
ನಾನು ಕೇಳಿರೋದೇ ಒಂದು, ಕೊಟ್ಟಿರೋದೇ ಮತ್ತೊಂದು. ನನಗೆ ಕೊಟ್ಟಿರುವ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳುವೆ. ನನ್ನಿಷ್ಟದ ಖಾತೆ ಕೊಡದಿದ್ದರೆ ನನ್ನ ದಾರಿಯನ್ನ ನಾನೇ ನೋಡಿಕೊಳ್ಳುವೆ ಎಂದು ಪ್ರವಾಸೋದ್ಯಮ ಸಚಿವ ಆನಂದ್​ ಸಿಂಗ್​ ಆಕ್ರೋಶ ಹೊರ ಹಾಕಿದ್ದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಸತಿ ಖಾತೆ ನಿರ್ವಹಿಸುತ್ತಿದ್ದೆ. ನಿರೀಕ್ಷಿತ ಅನುದಾನ ಸಿಗಲಿಲ್ಲ ಹಾಗೂ ಅಧಿಕಾರವಿದ್ದರೂ ಜನಸೇವೆಗೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಬೇಸತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಚನೆಯಲ್ಲಿ ನಾನೂ ಕಾರಣನಾದೆ. ಆದರೆ, ನಿರೀಕ್ಷಿತ ಖಾತೆ ಸಿಗಲಿಲ್ಲ. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ನೂತನ ಸಿಎಂ ಬಸವರಾಜ ಬೊಮ್ಮಾಯಿ ನನಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ದಾರಿ ನಾನೇ ನೋಡಿಕೊಳ್ಳುವೆ… ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ ಆನಂದ್​ ಸಿಂಗ್​!

ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಪೊಲೀಸರ ಮುಂದೆ ಬಯಲಾಯ್ತು ಚೆಂದುಳ್ಳಿ ಚೆಲುವೆಯ ಅಸಲಿ ಮುಖ

ಮೈಸೂರು ವಿವಿ ಪ್ರಾಧ್ಯಾಪಕ ಕಾಮಪುರಾಣ ಕೇಸ್​ಗೆ ಸ್ಫೋಟಕ ತಿರುವು! ಮರುದಿನವೇ ಉಲ್ಟಾ ಹೊಡೆದ ಸಂತ್ರಸ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 3 =
Remember me
