ಬೆಂಗಳೂರು:ಬಿಎಸ್​ವೈ ಸರ್ಕಾರದ ವಿರುದ್ಧ ಎಂಎಲ್​ಸಿ ವಿಶ್ವನಾಥ್ ಮತ್ತೊಮ್ಮೆ ಗುಡುಗಿದ್ದು, ಕಿಕ್​ಬ್ಯಾಕ್​ ಕುರಿತು ದಾಖಲೆಗಳ ಸಮೇತ ಗಂಭಿರ ಆರೋಪ ಮಾಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್​, ಸಚಿವ ಸಿ.ಪಿ.ಯೋಗೇಶ್ವರ್​ ಹೇಳಿದ್ದು ಸತ್ಯ. ಎಲ್ಲದರಲ್ಲೂ ಸಿಎಂ ಪುತ್ರ ವಿಜಯೇಂದ್ರ ಮೂಗು ತೂರಿಸಿತ್ತಾರೆ. ಇವರ ವಿರುದ್ಧದ ಆರೋಪಗಳು ಹೈಕಮಾಂಡ್‌‌ಗೆ ಗೊತ್ತಿದೆ. ನಾನು ಹೇಳಬೇಕಾಗಿದ್ದು ಎಲ್ಲವನ್ನೂ ಹೇಳಿದ್ದೇನೆ. ದಾಖಲೆ ಬಿಡುಗಡೆ ಮಾಡುತ್ತೇನೆ. ಬಿಜೆಪಿಗೆ ಬಂದವರು ಯಾರೂ ಖುಷಿಯಾಗಿಲ್ಲ. ಈ ಬಗ್ಗೆ ಯಾರೂ ಹೇಳುತ್ತಿಲ್ಲ ಅಷ್ಟೆ ಎಂದರು.
ಜಿಂದಾಲ್​ ಬಗ್ಗೆ ಮೊದಲು ಧ್ವನಿ ಎತ್ತಿದ್ದು ನಾನೇ. ಸಿದ್ದರಾಮಯ್ಯ, ಎಚ್​ಡಿಕೆ ಮಾತನಾಡಲಿಲ್ಲ. ಜಿಂದಾಲ್ ವಿಚಾರದಲ್ಲಿ ಎಲ್ಲರೂ ಕಿಕ್ ಬ್ಯಾಕ್ ಪಡೆದಿದ್ದಾರೆ. ರಾಜ್ಯದಲ್ಲಿ ಸದ್ಯ ಮೂರು ಪಕ್ಷದವರೂ ಅಧಿಕಾರ ಮಾಡುತ್ತಿದ್ದಾರೆಂಬ ಯೋಗೇಶ್ವರ್ ಅಭಿಪ್ರಾಯ ಸರಿ ಇದೆ ಎಂದು ವಿಶ್ವನಾಥ್​ ಮತ್ತೊಂದು ಬಾಂಬ್​ ಸಿಡಿಸಿದರು.
ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದವರಲ್ಲಿ ಶೇ.80 ಮಂದಿ ನಾಯಕತ್ವ ಬದಲಾವಣೆ ಆಗಬೇಕೆಂದು ಒತ್ತಾಯಿಸಿದ್ದಾರೆ ಎಂದ ವಿಶ್ವನಾಥ್​, ಭದ್ರಾ ಹಾಗೂ ಕಾವೇರಿ ನೀರಾವರಿ ಯೋಜನೆಗೆ ಇಪ್ಪತ್ತು ಸಾವಿರ ಕೋಟಿಗಿಂತ ಹೆಚ್ಚಿನ‌ ಮೊತ್ತದ ಟೆಂಡರ್ ಕರೆಯಲಾಗಿದ್ದು. ಶೇ. ಹತ್ತು ಕಿಕ್ ಬ್ಯಾಕ್ ಪಡೆದಿದ್ದು, ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕು. ನನ್ನ ಬೇಡಿಕೆ ಏನೆಂದರೆ ಟೆಂಡರ್ ರದ್ದಾಗಬೇಕು. ಹೈಕಮಾಂಡ್ ಕೂಡಲೇ ನಾಯಕತ್ವ ಬದಲಿಸಬೇಕು. ನಾನು ಶಬ್ಬಾಸ್​ಗಿರಿ ಹೇಳುವ, ಚಮಚಾ ಗಿರಿ ಮಾಡುವವನಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಕಿಕ್ ಬ್ಯಾಕ್ ಹಣವನ್ನ ಹೈಕಮಾಂಡ್‌ಗೆ ಕೊಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ವಿಜಯೇಂದ್ರ ಹೆಸರೇಳದೆ ವಿಶ್ವನಾಥ್​ ಕಿಡಿಕಾರಿದರು. ಇದೊಂದು ಗುತ್ತಿಗೆ ಆಧಾರಿತ ಸರ್ಕಾರ ಎಂದು ಜರಿದರು.
ಈ ಹಿಂದೆ ಕುಟುಂಬದಿಂದಾಗಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಈಗ ಮತ್ತೊಮ್ಮೆ ಜೈಲಿಗೆ ಹೋಗಬಾರದು. ಈ ಕಳಕಳಿಯ ಮೇಲೆ ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ವಿಶ್ವನಾಥ್ ಸ್ಪಷ್ಟನೆ ನೀಡಿದರು.
ನನ್ನನ್ನು ನೀನು ಅರೆಹುಚ್ಚ ಎನ್ನುತ್ತೀಯಾ? ನನ್ನಂತಹ ಅರೆಹುಚ್ಚನಿಂದ ನೀನು ಬಿಡಿಎ ಅಧ್ಯಕ್ಷನಾಗಿದ್ದೀಯಾ ಎಂದು ಎಚ್​.ಆರ್​.ವಿಶ್ವನಾಥ್​ ವಿರುದ್ಧ ಹಳ್ಳಿಹಕ್ಕಿ ಆಕ್ರೋಶ ಹೊರಹಾಕಿದರು. ಜಯಲಕ್ಷ್ಮೀ ಗಂಡ, ಎಸ್.ಆರ್ ವಿಶ್ವನಾಥ್ ಯಾರ್ರೀ? ಅವರಿಗೆ ಎಲ್ಲಿದೆ ಸಂಸ್ಕೃತಿ? ಅವರಿಗೆ ಏನಿದೆ ತೂಕ? ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎನ್ನುವ ಮೂಲಕ ವೈಯಕ್ತಿಕವಾಗಿ ಟೀಕಿಸಿದರು.
ಕಲಬುರಗಿಯಲ್ಲಿ ಪ್ರೇಯಸಿ ಹಂತಕ ರವಿ ಪೂಜಾರಿ ಭೀಕರ ಹತ್ಯೆ!

ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

ಹಿರಿಯ ನಟಿ ಕವಿತಾರ ಮಗ ಕರೊನಾಗೆ ಬಲಿ, ಪತಿಯ ಸ್ಥಿತಿ ಗಂಭೀರ

ಕೆಲಸಕ್ಕಾಗಿ ಮನೆಗೆ ಬಂದ ಯುವತಿಗೆ ಗ್ರಾಪಂ ಸದಸ್ಯ ಹೀಗಾ ಮಾಡ್ಹೋದು? ಈ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ರಾತ್ರೋರಾತ್ರಿ ಮಲಗಿದ್ದಲ್ಲೇ ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
