ಬೆಂಗಳೂರು:ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವನ್ನು ಅವರ ಗಂಡನ ಮನೆ ಅಬ್ಬಿಗೆರೆಗೆ ತೆಗೆದುಕೊಂಡು ಹೋಗಲಾಗಿದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಎಸ್​ವೈ ಮತ್ತು ಡಾ.ನೀರಜ್​ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸೌಂದರ್ಯ ನಿನಗೆ ಏನಾಯ್ತಮ್ಮ? ಆತ್ಮಹತ್ಯೆ ಹಾದಿ ಹಿಡಿದ್ದೇಕವ್ವಾ? ಎಂಬ ನೋವುಭರಿತ ಪ್ರಶ್ನೆಗಳು ಮನಕಲಕುತ್ತವೆ.
ವೈದ್ಯೆಯಾಗಿದ್ದ ಡಾ.ಸೌಂದರ್ಯ ಅವರಿಗೆ ವೈದ್ಯ ಡಾ.ನೀರಜ್​ ಜತೆ 3 ವರ್ಷದ ಹಿಂದೆ ಮದುವೆ ಆಗಿತ್ತು. ಒಂದು ವರ್ಷದ ಗಂಡು ಮಗು ಕೂಡ ಇವರಿಗಿದೆ. ಎರಡೂ ಕುಟುಂಬಸ್ಥರು ಅನುಕೂಲವಾಗಿದ್ದರು. ದಂಪತಿ ಇಬ್ಬರೂ ವೈದ್ಯರಾಗಿದ್ದರು, ಮುದ್ದಾದ ಮಗು ಕೂಡ ಇತ್ತು. ಆಳು-ಕಾಳು ಯಾವುದಕ್ಕೂ ಕೊರತೆ ಇರಲಿಲ್ಲ. ಪತಿ-ಪತ್ನಿ ಇಬ್ಬರೂ ಅನ್ಯೂನ್ಯವಾಗಿದ್ದರು. ಹಾಗಿದ್ದರೂ ಸೌಂದರ್ಯ ಇಂದು ಬೆಳಗ್ಗೆ ಮನೆಯಲ್ಲೇ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ. ಬೌರಿಂಗ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಶವವನ್ನು ಅಬ್ಬಿಗೆರೆಯಲ್ಲಿರುವ ನೀರಜ್​ ಮನೆಗೆ ರವಾನಿಸಲಾಗಿದೆ.

ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರೂ ಸೌಂದರ್ಯ ಸಾವಿಗೆ ನಿಖರ ಕಾರಣ ಮಾತ್ರ ಗೊತ್ತಾಗಿಲ್ಲ. ಈವರೆಗಿನ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಪತಿ-ಪತ್ನಿ ನಡುವೆ ಯಾವುದೇ ಕಲಹ ಇರಲಿಲ್ಲವಂತೆ. ಈ ಬಗ್ಗೆ ಸ್ಥಳೀಯರು ಹಾಗೂ ಕೆಲಸಗಾರರನ್ನು ಪೊಲೀಸರು ವಿಚಾರಣೆ ಮಾಡಿದಾಗ ತಿಳಿದುಬಂದಿದೆ. ಆದರೆ, ಮಗು ಆದ ಬಳಿಕ ಸೌಂದರ್ಯ ಅವರು ಡಿಪ್ರೆಷನ್‌ಗೆ ಒಳಗಾಗಿದ್ದರು ಎನ್ನಲಾಗಿದೆ. ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡ ವೇಳೆ ಮಗು ಮನೆಯಲ್ಲಿತ್ತು. ಇನ್ನು ತನಿಖೆ ಬಳಿಕ ಸೌಂದರ್ಯ ಸಾವಿನ ರಹಸ್ಯ ಹೊರಬರಬೇಕಿದೆ.
ಬಿಎಸ್​ವೈ ಮೊಮ್ಮಗಳು ಆತ್ಮಹತ್ಯೆ: ಡಾ.ಸೌಂದರ್ಯ ಸಾವಿನ ಮನೆಯ ಕದ ತಟ್ಟಿದ ಆ ಕ್ಷಣ…
ಬೇಡ ಬೇಡ ಅಂದ್ರೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಹೊಗೆನಕಲ್ ಜಲಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು!
ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ… ಎಂದು ಪುನರುಚ್ಚರಿಸುತ್ತಲೇ ಬುರ್ಖಾ ನಿಷೇಧಕ್ಕೂ ಆಗ್ರಹಿಸಿದ ಕಾಳಿ ಮಠ ಸ್ವಾಮಿ

Sign in to your account
Please enter an answer in digits:14 − three =
Remember me
