ಬೆಂಗಳೂರು:ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾರೆ. ಸೌಂದರ್ಯರನ್ನು ಉಳಿಸಿಕೊಳ್ಳಲು ಕೊನೇ ಕ್ಷಣದಲ್ಲಿ ಕುಟುಂಬಸ್ಥರು ಮತ್ತು ವೈದ್ಯರು ಯತ್ನಿಸಿದ್ದರಾದರೂ ಫಲಿಸಲಿಲ್ಲ ಎಂಬ ವಿಚಾರ ತಿಳಿದುಬಂದಿದೆ.
ಬಿಎಸ್​ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ವೈದ್ಯೆಯಾಗಿದ್ದರು. 3 ವರ್ಷದ ಹಿಂದಷ್ಟೇ ಅಂದ್ರೆ 2018ರಲ್ಲಿ ಅಬ್ಬಿಗೆರೆಯ ಪದ್ಮ ಮತ್ತು ಶಿವಕುಮಾರ್​ ದಂಪತಿ ಪುತ್ರ ಡಾ.ನೀರಜ್​ ಎಂಬುವರ ಜತೆ ಸೌಂದರ್ಯ ಮದ್ವೆ ಅದ್ದೂರಿಯಾಗಿ ನೆರವೇರಿತ್ತು. ಡಾ.ನೀರಜ್​ 7 ವರ್ಷದಿಂದ ರೇಡಿಯಾಲಜಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಒಂದು ವರ್ಷದ ಮುದ್ದಾದ ಮಗು ಕೂಡ ಇದೆ. ದಂಪತಿ ಇಬ್ಬರೂ ಕ್ರೆಸೆಂಟ್ ರಸ್ತೆಯ ಅಪಾರ್ಟ್‌ಮೆಂಟ್​ನಲ್ಲಿ ನೆಲೆಸಿದ್ದರು. ದಂಪತಿ ಇಬ್ಬರೂ ಅನ್ಯೂನ್ಯವಾಗಿದ್ದರು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಪತಿ ಡಾ.ನೀರಜ್​ ಕೆಲಸಕ್ಕೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಹೋಗಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಗೆ ಕೆಲಸದವರು ಮನೆಗೆ ಬಂದರೂ ಸೌಂದರ್ಯ ಬಾಗಿಲು ತೆರೆದಿರಲಿಲ್ಲ. ಆಗ ಡಾ.ನೀರಜ್​ ಅವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಬಳಿಕ ಪತಿ ಬಂದು ಬಾಗಿಲು ಹೊಡೆದು ನೋಡಿದಾಗ ಸೌಂದರ್ಯ ರೂಮಿನ ಫ್ಯಾನಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದರು. ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು.
ವೆಂಟಿಲೇಟರ್​ ಅಳವಡಿಸಿ ಸೌಂದರ್ಯ ಅವರನ್ನ ಬದುಕಿಸಲು ಮಲ್ಲಿಗೆ ವೈದ್ಯರು ಯತ್ನಿಸಿದ್ದರಾದರೂ ಫಲಿಸಲಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೌರಿಂಗ್​ ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬಿಎಸ್​ವೈ ಕುಟುಂಬಸ್ಥರು ಮತ್ತು ಡಾ.ನೀರಜ್​ ಕುಟುಂಬಸ್ಥರು ಆಸ್ಪತ್ರೆ ಬಳಿ ದೌಡಾಯಿಸಿದ್ದು, ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.
ಡಾ.ಸೌಂದರ್ಯರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೌರಿಂಗ್​ ಆಸ್ಪತ್ರೆಗೆ ಬಿ.ಎಸ್​. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ ಸೇರಿದಂತೆ ಹಲವರು ಬೌರಿಂಗ್​ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇನ್ನು ಕೆಲವೇ ಕ್ಷಣದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿರುವ ಡಾ.ನೀರಜ್​ ನಿವಾಸಕ್ಕೆ ಮೃತದೇಹ ತೆಗೆದುಕೊಂಡು ಬರುವ ಹಿನ್ನೆಲೆ ಮನೆ ಬಳಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.(ಇದಿಷ್ಟು ಪ್ರಾಥಮಿಕ ಮಾಹಿತಿ)
ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ

ತರಬೇತಿ ನಿರತ ವೈದ್ಯೆಗೆ ಲಿಫ್ಟ್​ನಲ್ಲೇ ಮುತ್ತು ಕೊಟ್ಟ ಪ್ರಕರಣ: ಹಿಮ್ಸ್​ ಆಸ್ಪತ್ರೆ ವೈದ್ಯ ಡಾ.ಲೋಕೇಶ್​ ಅಮಾನತು

ಬೇಡ ಬೇಡ ಅಂದ್ರೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಹೊಗೆನಕಲ್ ಜಲಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + two =
Remember me
