ಬೆಂಗಳೂರು:ನಾವು ಯಡಿಯೂರಪ್ಪರ ರಾಜೀನಾಮೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇವರ ನಾಯಕತ್ವ ಒಪ್ಪಿಕೊಂಡು ಬಿಜೆಪಿಗೆ ಬಂದಿದ್ದೇವೆ. ಈಗ ಯಾರೇ ಸಿಎಂ ಆದರೂ ತೊಂದರೆ ಇಲ್ಲ. ಪಕ್ಷ ಮತ್ತು ನಾಡಿಗೆ ಕೆಲಸ ಮಾಡುವ ವ್ಯಕ್ತಿ ಬೇಕು. ಯಾರನ್ನ ಕೈ ಬಿಡ್ತಾರೆ, ಯಾರನ್ನ ಮುನ್ನಡೆಸ್ತಾರೆ ಅನ್ನೋದು ತೀರ್ಮಾನ ಮಾಡಿಲ್ಲ ಎಂದು ಎಂಟಿಬಿ ನಾಗರಾಜ್​ ಹೇಳಿದರು.
ಮೋದಿ ಆಡಳಿತ ವೈಖರಿ, ಅಭಿವೃದ್ಧಿ ಮೆಚ್ಚಿ ಪಕ್ಷಕ್ಕೆ ಬಂದಿದ್ದೇವೆ. ಆಗ ಸಿಎಂ ಬದಲಾವಣೆ ನಿರೀಕ್ಷೆ ಇರಲಿಲ್ಲ. ಈಗ ಮಧ್ಯದಲ್ಲಿ ಬದಲಾವಣೆ ಆಗಿದೆ. ಯಡಿಯೂರಪ್ಪ ಅನೇಕ ಏಳು ಬೀಳುಗಳನ್ನ ಕಂಡವರು. ನನಗೆ ಯಾವುದೇ ಆತಂಕ ಇಲ್ಲ. ಸಚಿವರಾಗಿ ಮಾಡಿದ್ರೂ ಓಕೆ, ಮಾಡದಿದ್ರೂ ಯಾವುದೇ ಬೇಸರ ಇಲ್ಲ. ವಲಸೆ ಶಾಸಕರು ಯಾವುದೇ ಸಭೆ ಮಾಡಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಹೈಕಮಾಂಡ್, ದೇಶದಲ್ಲಿ ಮೋದಿ ಹೈಕಮಾಂಡ್ ಎಂದರು.
ಎಚ್‌. ವಿಶ್ವನಾಥ್ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಅನೇಕ ಆಗು-ಹೋಗುಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಯಡಿಯೂರಪ್ಪ ನಮಗೆ ಹೆದರಬೇಡಿ. ಎಲ್ಲವೂ ಒಳ್ಳೆಯದಾಗಲಿದೆ ಎಂದು ಹೇಳಿದ್ದಾರೆ. ಸಿಎಂ ರೇಸ್‌ನಲ್ಲಿ ಕೇಳಿ ಮಾಧ್ಯಮದಲ್ಲಿ ಹತ್ತಾರು ಹೆಸರು ಬರ್ತಿದೆ. ಬೆಲ್ಲದ್, ನಿರಾಣಿ, ಜೋಶಿ ಸೇರಿದಂತೆ ಅನೇಕ ಹೆಸರು ಹೇಳಿದ್ದಾರೆ. ವರಿಷ್ಠರು ಯಾರನ್ನಾದ್ರೂ ಸಿಎಂ ಮಾಡಲಿ ಎಂದರು.
ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ವೇಳೆ ಬಿಎಸ್​ವೈ ಕಣ್ಣೀರಿಟ್ಟಿದ್ದನ್ನು ಸಹಿಸದೆ ಅಭಿಮಾನಿ ನೇಣಿಗೆ ಶರಣು!

ತುಮಕೂರಲ್ಲಿ ಮುಂಡ, ಬಾಗಲಕೋಟೇಲಿ ರುಂಡ ಪತ್ತೆ! ಬಯಲಾಯ್ತು ಸೊಸೆ-ಬಿಎಂಟಿಸಿ ಬಸ್​ ಕಂಡಕ್ಟರ್​ ಅಸಲಿ ಮುಖವಾಡ

VIDEO| ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡ ಗ್ರಾಮಗಳಲ್ಲಿ ಬೆಳಕು ಹರಿಸಿದ ಪವರ್​ಮನ್​!

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
