ಬೆಂಗಳೂರು:2 ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾನು ತೀರ್ಮಾನಿಸಿದ್ದೆ. ಹೀಗಾಗಿ ಸರ್ಕಾರಕ್ಕೆ 2 ವರ್ಷವಾದ ಬಳಿಕ ನಾನು ರಾಜೀನಾಮೆ ಕೊಟ್ಟಿರುವೆ. ನನ್ನ ಮನವಿ ಸ್ವೀಕರಿಸಿದ ರಾಜ್ಯಪಾಲರಿಗೆ ಧನ್ಯವಾದ. ನನಗೆ ಯಾವುದೇ ಒತ್ತಡ ಇರಲಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದು ಬಿ.ಎಸ್​.ಯಡಿಯೂರಪ್ಪ ಹೇಳಿದರು.
ರಾಜೀನಾಮೆ ಪತ್ರ ಸಲ್ಲಿಸಿ ರಾಜಭವನದಿಂದ ಹೊರ ಬರುತ್ತಿದ್ದಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮುಂದಿನ ಸಿಎಂ ಯಾರು ಎಂದು ನಾನು ಹೇಳೋದಿಲ್ಲ. ಸಿಎಂ ಸ್ಥಾನಕ್ಕೆ ಯಾರ ಹೆಸರನ್ನೂ ನಾನು ಸೂಚಿಸಿಲ್ಲ. ಹೈಕಮಾಂಡ್​ ನಿರ್ಧರಿಸಲಿದೆ. ಯಾರೇ ಸಿಎಂ ಆದರೂ ನಾನು ಅವರಿಗೆ ಸಂಪೂರ್ಣವಾದ ಬೆಂಬಲ ಕೊಡುತ್ತೇನೆ. ಮಠಾಧೀಶರಿಗೆ ಹೃದಯ ಪೂರಕವಾಗಿ ಅಭಿನಂದನೆ ಸಲ್ಲಿಸುವೆ. ಮುಂದೆ ಬರುವ ಮುಖ್ಯಮಂತ್ರಿಗೂ ಶ್ರೀಗಳ ಸಹಕಾರ ಇರಲಿ ಎಂದರು.
ವಲಸಿಗ ಮಂತ್ರಿಗಳು ಮುಂದುವರಿಯುತ್ತಾರೆ. ಅವರೆಲ್ಲರೂ ನಮ್ಮ ಪಕ್ಷದಲ್ಲೇ ಇರುತ್ತಾರೆ. ಅವರೆಲ್ಲರೂ ನಮ್ಮವರೇ. ನಮ್ಮ ಸರ್ಕಾರ ಬರಲು ಯಾರು ಕಾರಣಕರ್ತರೋ ಅವರೆಲ್ಲರಿಗೂ ನೂತನ ಸಿಎಂ ಕೂಡ ಸಹಕಾರ ಕೊಡ್ತಾರೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಸಂಕಲ್ಪ ತೊಟ್ಟಿದ್ದೇನೆ. 75 ವರ್ಷ ದಾಟಿದ ನನಗೆ 2 ವರ್ಷ ಸಿಎಂ ಸ್ಥಾನ ಕೊಟ್ಟಿದ್ದಾರೆ. ನನ್ನ ಬಗ್ಗೆ ಹೈಕಮಾಂಡ್​ ವಿಶೇಷ ಕಾಳಜಿ ತೋರಿದೆ. ಈ ಹಿಂದೇನೆ ರಾಜೀನಾಮೆ ನೀಡ್ತೀನಿ ಅಂತ ಹೇಳಿದ್ದೆ. ರಾಜ್ಯದ ಜನತೆ ಇಷ್ಟು ವರ್ಷ ನನ್ನ ಜತೆಗಿದ್ದರು. ಅವರಿಗೆ ನಾನು ಧನ್ಯವಾದ ಸಲ್ಲಿಸಿದ್ದೇನೆ. 7 ಬಾರಿ ಶಾಸಕರಾಗಿ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುವೆ ಎಂದರು.
ದುಂಡಗೆ, ದಪ್ಪಗಿದ್ದ ಕಮಲಾಗೆ ಸಹಪಾಠಿಗಳು ಕೊಟ್ಟ ಕೀಟಲೆ ಅಷ್ಟಿಷ್ಟಲ್ಲ! ಅದೇ ಬಾಲೆ ಜಯಂತಿ ಆದ ಇಂಟ್ರೆಸ್ಟಿಂಗ್​ ಸ್ಟೋರಿ ಇದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
