ದಾವಣಗೆರೆ:ಎಮ್ಮೆಗಳು ಪರಸ್ಪರ ಗುದ್ದಾಡಿಕೊಂಡಿದ್ದು, ಆ ವೇಳೆ ಗರ್ಭಿಣಿ ಎಮ್ಮೆಯೊಂದು 80 ಅಡಿ ಆಳದ ಬಾವಿಗೆ ಬಿದ್ದ ಘಟನೆ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
ಹರಪನಹಳ್ಳಿ ತಾಲೂಕು ಲಕ್ಷ್ಮೀಪುರ ಗ್ರಾಮದಲ್ಲಿ ಎಮ್ಮೆಗಳ ನಡುವೆ ಜಗಳವಾಗಿದೆ. ಆ ವೇಳೆ ಒಂದು ಎಮ್ಮೆಯು ಆಕಸ್ಮಿಕವಾಗಿ ಬಾವಿಯ ಮೇಲ್ಭಾಗಕ್ಕೆ ಜಿಗಿದಿದ್ದು, ಜಾಲರಿಯೂ ಹರಿದು ಎಮ್ಮೆ ಬಾವಿಯೊಳಗೆ ಬಿದ್ದಿದೆ. ಬಾವಿಗೆ ಬಿದ್ದ ಲಕ್ಷ್ಮೀಪುರ ಗ್ರಾಮದ ಕೊಟ್ರೇಶ್​ ನಾಯ್ಕ ಎಂಬುವರ ಎಮ್ಮೆಯನ್ನು ಮೇಲಕ್ಕೆತ್ತಲು ಅಗ್ನಿಶಾಮಕ ದಳದ 10 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಳಗ್ಗೆ 5.30 ರಿಂದ ಸತತ 4 ಗಂಟೆ ಕಾರ್ಯಾಚರಣೆ ನಡೆಸಿದರು. 80 ಅಡಿ ಆಳದ ಬಾವಿಯಲ್ಲಿ 7 ಅಡಿ ನೀರಿತ್ತು. ಸುಭಾನ್​ ಮತ್ತು ಆನಂದ್​ ಎಂಬ ಸಿಬ್ಬಂದಿ ಬಾವಿಯೊಳಗೆ ಇಳಿದರು.
ಇದನ್ನೂ ಓದಿರಿರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್
ಮೊದಲು ಏಣಿಯನ್ನು ಬಳಸಲು ಪ್ರಯತ್ನಿಸಿ ನಂತರ ಹಗ್ಗದ ಸಹಾಯದಿಂದ ಕೆಳಗಿಳಿದರು. ಇತರ ಸಿಬ್ಬಂದಿ ಮೇಲಿನಿಂದ ಎಳೆದುಕೊಂಡು ಎಮ್ಮೆಯನ್ನು ಸುರಕ್ಷಿತವಾಗಿ ಪಾರು ಮಾಡಿದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ತಿಳಿಸಿದರು. ಮೂರು ವರ್ಷದ ಆ ಎಮ್ಮೆಯು ಗರ್ಭ ಧರಿಸಿತ್ತು. ಅದು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ಚಿತ್ರ: ಡಿವಿಜಿ ಎಮ್ಮೆ ಜುಲೈ 28 ಹರಪನಹಳ್ಳಿ ತಾಲೂಕು ಲಕ್ಷಿ$್ಮಪುರ ಗ್ರಾಮದಲ್ಲಿ ಮಂಗಳವಾರ ಬಾವಿಗೆ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.
ಸುದ್ದಿಗಾಗಿ ಮೃತ ಪ್ರೇಯಸಿ ಮನೆಗೆ ಬೆಂಕಿ ಹಚ್ಚಿಸಿದ್ದ ವರದಿಗಾರ ಅರೆಸ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + ten =
Remember me
