ಉಡುಪಿ:ಸ್ಕೂಟರ್​ ಮತ್ತು ಕೇರಳ ಕೆಎಸ್​ಆರ್​ಟಿಸಿ ಬಸ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ಭಿಣಿ ಪುತ್ರಿ ಜತೆ ಎಎಸ್​ಐ ಸಾವು ಮೃತಪಟ್ಟ ಘಟನೆ ಸಂತೆಕಟ್ಟೆ ಜಂಕ್ಷನ್​ನಲ್ಲಿ ಸಂಭವಿಸಿದೆ.
ಗರಡಿಮಜಲು ನಿವಾಸಿ ಕರಾವಳಿ ಕಾವಲು ಪಡೆಯ ಎಎಸ್​ಐ ಗಣೇಶ್​ ಪೈ (58) ಹಾಗೂ ಇವರ ಹಿರಿಯ ಮಗಳು ಗಾಯತ್ರಿ (27) ಮೃತರು. ಗಾಯತ್ರಿಗೆ ಮೂರು ವರ್ಷದ ಹಿಂದೆ ವಿವಾಹವಾಗಿದ್ದು, ಗಂಡ ಬ್ಯಾಂಕ್​ ಉದ್ಯೋಗಿಯಾಗಿದ್ದಾರೆ. ಸದ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದ ಅವರು ತವರು ಮನೆಯಲ್ಲಿ ಮಾ.4ರಂದು ನಿಗದಿಯಾಗಿದ್ದ ಸಮಾರಂಭಕ್ಕೆ 2 ದಿನ ಮುಂಚಿತವಾಗಿ ಆಗಮಿಸುತ್ತಿದ್ದರು.
ಬುಧವಾರ ಬೆಳಗ್ಗೆ 5.30ಕ್ಕೆ ಗದಗದಿಂದ ಆಗಮಿಸಿದ್ದ ತಮ್ಮ ಮಗಳನ್ನು ಬಸ್​ ತಂಗುದಾಣದಿಂದ ಮನೆಗೆ ಕರೆದುಕೊಂಡು ಸ್ಕೂಟರ್​ನಲ್ಲಿ ತಂದೆ ಹೋಗುತ್ತಿದ್ದರು. ಈ ವೇಳೆ ಕೇರಳದಿಂದ ಕೊಲ್ಲೂರಿಗೆ ಹೋಗುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್​ ಸ್ಕೂಟರ್​ಗೆ ಡಿಕ್ಕಿ ಹೊಡಿದ್ದಿದ್ದು, ತಂದೆ-ಮಗಳು ದುರ್ಮರಣ ಹೊಂದಿದ್ದಾರೆ.
ಘಟನೆಗೆ ಬಸ್​ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ತೀರಾ ಎಡಬದಿಗೆ ಚಲಿಸಿದ ಬಸ್​ ಗಣೇಶ್​ ಪೈ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ತಂದೆ ಮತ್ತು ಮಗಳು ರಸ್ತೆ ಮೇಲೆ ಬಿದ್ದು, ಇಬ್ಬರ ತಲೆಗೂ ಗಂಭೀರ ಗಾಯವಾಗಿತ್ತು. ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶ್​ ಪೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಷನ ಅಕ್ಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿ, ನಾವು ಕಾಂಗ್ರೆಸ್​ನಿಂದ ಅಭ್ಯರ್ಥಿಯನ್ನೇ ಹಾಕಲ್ಲ!

ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ನೆರವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
