ಚಿತ್ರದುರ್ಗ:ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಬುಧವಾರ ತಡರಾತ್ರಿ ಖಾಸಗಿ ಬಸ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರಂತ ಅಂತ್ಯಕಂಡಿದ್ದಾರೆ. ರಸ್ತೆಮಧ್ಯೆ ಶವಗಳು ರಕ್ತಿಕ್ತವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಹೊಳಲ್ಕೆರೆ ತಾಲೂಕಿನ ಬಿ.ದುರ್ಗಾ ಗ್ರಾಮದ ನಾಗರಾಜ್​ ಮತ್ತು ಶೈಲಜಾ(38) ದಂಪತಿ ಹಾಗೂ ಇವರ ಮಕ್ಕಳಾದ ವೀರೇಶ್(15), ಸಂತೋಷ(13) ಮೃತ ದುರ್ದೈವಿಗಳು. ನಾಗರಾಜ್​ ಅವರು ಕುಟುಂಬ ಸಮೇತ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಜಾತ್ರೆಗೆ ತೆರಳಿದ್ದರು. ವಾಪಸ್​ ಬುಧವಾರ ರಾತ್ರಿ ಒಂ​ದೇ ಬೈಕ್​ನಲ್ಲಿ ನಾಲ್ವರೂ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು.
ಮಾರ್ಗಮಧ್ಯೆ ಖಾಸಗಿ ಬಸ್​ ರೂಪದಲ್ಲಿ ಬಂದ ಜವರಾಯ ನಾಲ್ವರ ಪ್ರಾಣ ಹೊತ್ತೊಯ್ದಿದ್ದಾನೆ. ವೇಗವಾಗಿ ಬಂದ ಖಾಸಗಿ ಬಸ್​, ದಾಮ್ಮಿ ಗ್ರಾಮದ ಬಳಿ ಏಕಾಏಕಿ ಬಲಬದಿಗೆ ನುಗ್ಗಿ ಬೈಕ್​ಗೆ ಡಿಕ್ಕಿ ಹೊಡೆದಿದ್ದು, ಬೈಕ್​ನಲ್ಲಿದ್ದವರ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಇಬ್ಬರು ಮಕ್ಕಳು ಮತ್ತು ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಹೊಳಲ್ಕೆರೆ ಗ್ರಾಮಾಂತರ ಪೊಲೀಸರು ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ತಂದೆ-ತಾಯಿ-ಮಕ್ಕಳ ಸಾವಿನ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಗ್ರಾಮದಲ್ಲಿ ನೀರವ ಮವನ ಆವರಿಸಿದೆ.
ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

ಆನೇಕಲ್​ನಲ್ಲಿ ವೇಶ್ಯಾವಾಟಿಕೆ ದೋಖಾ: ರೇಟ್​ ಫಿಕ್ಸ್​ ಮಾಡಿ ಸ್ವರ್ಗ ತೋರಿಸ್ತೀವಿ ಅಂತಾರೆ… ಆಮೇಲೆ ಆಗೋದೇ ಬೇರೆ

ಕೆಎಸ್ಸಾರ್ಟಿಸಿ-ಕಾರಿನ​ ನಡುವೆ ಭೀಕರ ಅಪಘಾತ: 5 ವಿದ್ಯಾರ್ಥಿಗಳು ದುರ್ಮರಣ, ಸಾವಲ್ಲೂ ಒಂದಾದ ಸ್ನೇಹಿತರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 1 =
Remember me
