ಶಿವಮೊಗ್ಗ:ಚಾಕು ಹಾಕಿದವರಿಗೆ ಹಾರ ಹಾಕಿ ಸನ್ಮಾನ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.
ಫ್ಲೆಕ್ಸ್​ ಹರಿದು ಹಾಕಿದ ಗಲಾಟೆಯಲ್ಲಿ ಚಾಕು ಇರಿತಕ್ಕೊಳ್ಳಗಾದ ಯುವಕ ಪ್ರೇಮ್​ಸಿಂಗ್​ನ ಆರೋಗ್ಯ ವಿಚಾರಿಸಲು ಮೆಗ್ಗಾನ್​ ಆಸ್ಪತ್ರೆಗೆ ಭೇಟಿ ನೀಡಿದ ವಿಜಯೇಂದ್ರ ಮತ್ತು ಎಂಎಲ್ಸಿ ಎಸ್.ರುದ್ರೇಗೌಡ ಯುವಕನ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪುಡಾರಿಗಳು ಈ ದೇಶದ ಇತಿಹಾಸ ಗೊತ್ತಿಲ್ಲದೆ ಇರುವವರು. ಸ್ವಾತಂತ್ರ್ಯಹೋರಾಟದಲ್ಲಿ ತೊಡಗಿದ್ದ ಮಹಾನ್ ವ್ಯಕ್ತಿಗಳ ಬಗ್ಗೆ ಅಪಚಾರ ಮಾಡಿದ್ದಾರೆ. ಮಂಗಳೂರು ಮತ್ತು ಶಿವಮೊಗ್ಗ ಜಿಲೆಯಲ್ಲಿ ಪುಡಾರಿಗಳ ಪಿತೂರಿಗಳು ಪುನರಾವರ್ತನೆಯಾಗುತ್ತಿದೆ‌. ಚಾಕು ಹಾಕಿದವರಿಗೆ ಹಾರ ಹಾಕಿ ಸನ್ಮಾನ ಮಾಡಲು ಸಾಧ್ಯವಿಲ್ಲ. ಪೊಲೀಸರು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನ ಕೈಗೊಂಡಿದ್ದಾರೆ‌‌. ಪಿಎಫ್ ಎಸ್​ಡಿಪಿಐ ಕೈವಾಡ ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.
ಇಂತಹ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು ಮಾಜಿ ಮುಖ್ಯಮಂತ್ರಿ ಆಗಿದ್ದವರು ಅರ್ಥಮಾಡಿಕೊಳ್ಳಬೇಕು. ಕರಾವಳಿ ಮತ್ತು ಮಲೆನಾಡಿನಲ್ಲಿ ಪದೇಪದೆ ಶಾಂತಿ ಕದಡುತ್ತಿರುವ ಹಿಂದೆ ವ್ಯವಸ್ಥಿತ ಸಂಘಟನೆ ಇದೆ. ಪಿಎಫ್ ಎಸ್​ಡಿಪಿಐ ಮೇಲ್ನೋಟಕ್ಕೆ ಕಾಣುತ್ತಿದೆ ಎಂದರು.
ಶಿವಮೊಗ್ಗದಲ್ಲಿ ಬಂದೋಬಸ್ತ್​ ಮಾಡಲಾಗಿದೆ, ಜನರು ಭಯಪಡುವ ಅವಶ್ಯಕತೆಯಿಲ್ಲ: ಎಡಿಜಿಪಿ ಅಲೋಕ್​ ಕುಮಾರ್

ಧರ್ಮಸ್ಥಳದಲ್ಲಿ ರೂಂ ಸಿಗಲಿಲ್ಲವೆಂದು ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಭಿನ್ನಕೋಮಿನ ಜೋಡಿಗೆ ಮಾರ್ಗದಲ್ಲೇ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
