ಕೊಪ್ಪಳ:ನಾನು ಅಲ್ಲಿ-ಇಲ್ಲಿ ಸ್ಪರ್ಧಿಸಬೇಕೆಂದಿಲ್ಲ. ಇಡೀ ರಾಜ್ಯವಿದೆ. ಪಕ್ಷ ಸೂಚಿಸಿದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ. ಶಿಕಾರಿಪುರದಿಂದಲೇ ಸ್ಪರ್ಧಿಸಬೇಕೆಂದಿಲ್ಲ. ಇಡೀ ರಾಜ್ಯವೇ ನನ್ನ ಕ್ಷೇತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಗವಿಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಭೇಟಿ ನೀಡಿ ಗವಿಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಇಳಕಲ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ಅಭಿನವ ಬಸವಣ್ಣ ಎಂದು ಖ್ಯಾತರಾದ ಗವಿಶ್ರೀಗಳ ದರ್ಶನ ಪಡೆಯಲು ಕೊಪ್ಪಳಕ್ಕೆ ಬಂದಿರುವೆ. ಇಲ್ಲಿ ಬಂದರೆ ಒಂದು ಸ್ಫೂರ್ತಿ ಸಿಗಲಿದೆ. ಹಾಗಾಗಿ ಬಂದು ಆಶೀರ್ವಾದ ಪಡೆದೆ ಎಂದರು.
ಶಿಕಾರಿಪುರದೊಂದಿಗೆ ನಮ್ಮ ತಂದೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಪಕ್ಷವು ಸೂಕ್ತ ಸಮಯದಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ಯಡಿಯೂರಪ್ಪ ನಲವತ್ತು ವರ್ಷ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷವೂ ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಶಿಕಾರಿಪುರ ಕ್ಷೇತ್ರದ ಜನರ ಅಭಿಪ್ರಾಯದಂತೆ ನನಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾಗಿ ಹೇಳಿದ್ದಾರೆ. ಹೈಕಮಾಂಡ್ ಮುಂದಿನ ತೀರ್ಮಾನ ಕೈಗೊಳ್ಳಲಿದೆ. ಜನರು ಬಯಸಿದಲ್ಲಿ ಹಾಗೂ ಪಕ್ಷ ಟಿಕೆಟ್ ನೀಡಿದಲ್ಲಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ‌. ಶಿಕಾರಿಪುರದಿಂದಲೇ ಸ್ಪರ್ಧಿಸಬೇಕೆಂದಿಲ್ಲ. ಇಡೀ ರಾಜ್ಯವೇ ನನ್ನ ಕ್ಷೇತ್ರ ಎಂದರು.
ಚುನಾವಣೆಗೆ ಇನ್ನೂ 8 ತಿಂಗಳಿದೆ. ಈಗಲೇ ಕೈ ನಾಯಕರು ಸಿಎಂ ಗಾದಿಗಾಗಿ ಕಿತ್ತಾಡುತ್ತಿರುವುದು ಹಾಸ್ಯಾಸ್ಪದ. ಅವರು ಕಿತ್ತಾಡಿಕೊಳ್ಳಲಿ. ನಮ್ಮ ಸಂಘಟನೆ ನಿರಂತರವಾಗಿದೆ ಎಂದರು.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಬೆಂಗಳೂರಲ್ಲಿ ಬೈಕ್​ ಮೇಲೆ ಮರದ ದಿಮ್ಮಿ ಬಿದ್ದು ನವವಿವಾಹಿತ ಸಾವು! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ

ಆಲಮಟ್ಟಿ ಡ್ಯಾಂಗೆ ನುಗ್ಗಲು ಯತ್ನಿಸಿದ ಬುರ್ಕಾಧಾರಿ: ಅನುಮಾನ ಬೆನ್ನೆಟ್ಟಿದಾಗ ಬಯಲಾಯ್ತು ಆ ವ್ಯಕ್ತಿ ಮಹಿಳೆಯಲ್ಲ, ಮಂಗಳಮುಖಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
