ವಿಜಯಪುರ:ಬಿ.ವೈ.ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿರುವ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಗುಮ್ಮಟನಗರಿಯಲ್ಲಿ ರಾಜ್ಯ ನಾಯಕರು ಭಿನ್ನ-ಭಿನ್ನ ಹೇಳಿಕೆ ನೀಡಿದ್ದಾರೆ.
ಸಂತ ಶ್ರೇಷ್ಠ ಕನಕದಾಸ ವೃತ್ತ ಉದ್ಘಾಟನೆ ಹಿನ್ನೆಲೆ ಗುರುವಾರ ನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ಯಾರೂ ನಿರಾಸೆ ಆಗುವ ಅವಶ್ಯಕತೆ ಇಲ್ಲ. ವಿಜಯೇಂದ್ರಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಯಡಿಯೂರಪ್ಪರ ಗೌರವವನ್ನು ಕಡಿಮೆ ಮಾಡಲು, ಶಕ್ತಿ ಕುಗ್ಗಿಸಲು ಯಾರಿಂದಲೂ ಆಗಲ್ಲ. ಅವರ ಸಾಮರ್ಥ್ಯ ಏನೆಂಬುದು ರಾಜ್ಯಕ್ಕೆ ಗೊತ್ತಿದೆ. ಬಿಎಸ್​ವೈ ಅವರು ನನ್ನ ತಂದೆಯ ಸಮಾನ ಎಂದು ಬಣ್ಣಿಸಿದರು.
ಸಚಿವ ಎಂಟಿಬಿ ನಾಗರಾಜು ಮಾತನಾಡಿ, ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯೇಂದ್ರ ಶಾಸಕರಾಗಲಿ. ಪಕ್ಷದ ಸಂಘಟನೆ ಮಾಡಲಿ ಎಂದು ಟಿಕೆಟ್ ನೀಡಿರಲಿಕ್ಕಿಲ್ಲ ಎಂಬುದು ನನ್ನ ಊಹೆ. ವಿಜಯೇಂದ್ರಗೆ ಇನ್ನೂ ವಯಸ್ಸಿದೆ, ಯುವಕರಿದ್ದಾರೆ. ಅವರ ತಂದೆಯವರ ಹೆಸರಿದೆ. ಅವರ ತಂದೆ ಮೂರು ಬಾರಿ ಮುಖ್ಯಮಂತ್ರಿ ಆದವರು. ಮುಂದಿನ ದಿನಗಳಲ್ಲಿ ಯುವ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶವೂ ವಿಜಯೇಂದ್ರಗೆ ಇದೆ. ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಕಟ್ಟುತ್ತಾರೆ. ತಂದೆ ಪಕ್ಷ ಕಟ್ಟಿದಂಗೆ, ಮಗ ಕೂಡ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಕಟ್ತಾರೆ ಎಂದರು.
ಇನ್ನು ಸಾಂಪ್ರದಾಯಿಕ ಎದುರಾಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಎಂದಿನಂತೆ ಕಿಡಿಕಾರಿದ್ದು, ವಿಜಯೇಂದ್ರನನ್ನು ಮಾಧ್ಯಮಗಳು ಹೀರೋ ಮಾಡುತ್ತಿವೆ ಎಂದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್​, ಟಿವಿ ಮಾಧ್ಯಮಗಳು ವಿಜಯೇಂದ್ರನನ್ನು ಹೀರೋ ಮಾಡಲು ಯತ್ನಾಳ್​ನನ್ನು ತುಳಿಯುತ್ತಿದ್ದೀರಿ ಎಂದು ಚುಟುಕಾಗಿ ಉತ್ತರಿಸಿ ನಿರ್ಗಮಿಸಿದರು.
ಊಟ ಇಲ್ಲ ಎಂದಿದ್ದಕ್ಕೆ ಸಿಬ್ಬಂದಿಯನ್ನು ಕೂಡಿಹಾಕಿ ಡಾಬಾಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು! ಕೊಪ್ಪಳದಲ್ಲಿ ಅಮಾನವೀಯ ಕೃತ್ಯ

ಡಿಕೆಶಿಗೆ ಮತ್ತೆ ಎದುರಾಯ್ತು ಸಂಕಷ್ಟ! ಚಾರ್ಜ್​ಶೀಟ್​ ಸಲ್ಲಿಸಿದ ಇಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 3 =
Remember me
