ಬೆಂಗಳೂರು:ನಗರದಲ್ಲಿ ಒಂಟಿಯಾಗಿದ್ದ ಯುವತಿ ಮನೆಗೆ ಬೆಳಗಿನಜಾವ ನುಗ್ಗಿದ ಕಾಮುಕನೊಬ್ಬ, ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಯುವತಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ತೃತೀಯ ಲಿಂಗಿಗಳಿಬ್ಬರು ಕಾಮುಕನಿಂದ ಯುವತಿಯನ್ನ ರಕ್ಷಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಈಜಿಪುರದಲ್ಲಿ ಜು.2ರಂದು ಬೆಳಗಿನಜಾವ 4 ಗಂಟೆಯಲ್ಲಿ ಸಂಭವಿಸಿದ್ದು, ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿ ಮಸುರಲ್ ಶೇಕ್ ಎಂಬಾತನನ್ನು ಬಂಧಿಸಿದ್ದಾರೆ. ಸಂತ್ರಸ್ತೆಯು ಮಿಜೊರಾಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನರ್ಸಿಂಗ್​ ವಿದ್ಯಾಭಾಸ ಮಾಡುತ್ತಿದ್ದಾರೆ. ಈಜಿಪುರದಲ್ಲಿ ಬಾಡಿಗೆ ಮನೆಯಲ್ಲಿ ಈಕೆ ವಾಸವಿದ್ದು, ಜು.2ರ ಬೆಳಗಿನಜಾವ ಅಲ್ಲಿಗೆ ಬಂದ ಆರೋಪಿ, ನಿರಂತರವಾಗಿ ಕಾಲಿಂಗ್ ಬೆಲ್ ಹೊಡೆದಿದ್ದಾನೆ. ಯಾರೋ ಬಂದಿದ್ದಾರೆಂದು ನಿದ್ರೆ ಮಂಪರಿನಲ್ಲಿ ಎದ್ದು ಬಂದ ಯುವತಿ, ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಒಳಗೆ ನುಗ್ಗಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಹಣ ನೀಡ್ತೀನಿ ಪ್ಲೀಸ್​ ನನ್ನನ್ನು ಬಿಟ್ಟುಬಿಡು ಎಂದು ಗೋಗರೆದರೂ ಆತ ಬಿಟ್ಟಿಲ್ಲ.
ಆಕೆಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ತೃತೀಯ ಲಿಂಗಿಗಳಾದ ಮಾಹಿರಾ ಸಿಂಗ್ ಮತ್ತು ಇವರ ಸ್ನೇಹಿತೆ ಇಬ್ಬರೂ ವಿದ್ಯಾರ್ಥಿನಿಯನ್ನು ಕಾಪಾಡಿದ್ದಾರೆ. ಆರೋಪಿ ಮಸುರಲ್ ಶೇಕ್​ನನ್ನು ಸ್ಥಳೀಯರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ವೆಸ್ಟ್ ಬೆಂಗಾಲ್ ಮೂಲದವ. ಹೋಟೆಲ್​ನಲ್ಲಿ ಕೆಲಸ ಮಾಡಲು ನಗರಕ್ಕೆ ಬಂದು ಇಂತಹ ಹೇಯ ಕೃತ್ಯವೆಸಗಿದ್ದಾನೆ.
ಸಾಕ್ಷ್ಯಚಿತ್ರದಲ್ಲಿ ಹಿಂದು ದೇವರಿಗೆ ಅಪಮಾನ, ಕಾಳಿ ಮಾತೆ ಬಾಯಲ್ಲಿ ಸಿಗರೇಟ್​! ಕ್ಷಮೆ ಕೇಳದೆ ನಿರ್ದೇಶಕಿ ಮೊಂಡುವಾದ

ಗಂಡಸಾದ್ರೆ ಸಾಕ್ಷಿ ಸಮೇತ ಪ್ರೂವ್​ ಮಾಡು… ಸುದೀಪ್​ಗೆ ಅವಮಾನಿಸಿದ ವ್ಯಕ್ತಿಗೆ ನಂದಕಿಶೋರ್​​ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
