ತುಮಕೂರು:ಕೆನಡಾ ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡ ಕಹಳೆ ಮೊಳಗಿಸಿ ಒಂದೇ ದಿನದಲ್ಲಿ ಜಗದ್ವಿಖ್ಯಾತಿ ಪಡೆದ ಅಲ್ಲಿನ ಸಂಸತ್ ಸದಸ್ಯ, ಕನ್ನಡಿಗ ಚಂದ್ರ ಆರ್ಯ ಅವರು ಹುಟ್ಟೂರು ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದರು.
ಕಳೆದ ಮೇ ತಿಂಗಳಲ್ಲಿ ಕೆನಡಾದ ಸಂಸತ್​ ಸದಸ್ಯರಾಗಿ ಆಯ್ಕೆಯಾದ ಕರ್ನಾಟಕದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್​ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಎಲ್ಲರ ಗಮನ ಸೆಳೆಯುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಇಂದು ಬೆಳಗ್ಗೆ ಹುಟ್ಟೂರಿಗೆ ಆಗಮಿಸಿದ ಚಂದ್ರ ಆರ್ಯ ಅವರು ಗಜ್ಜಿಗರಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೆ ಪತ್ನಿ ಜತೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಗ್ರಾಮದ ಹಳೇ ಸ್ನೇಹಿತರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಗ್ರಾಮಸ್ಥರು ಚಂದ್ರ ಆರ್ಯ ಅವರಿಗೆ ಪೇಟ ತೊಡಿಸಿ ಸನ್ಮಾನ ಮಾಡಿದರು.
ವಿದೇಶಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಮೊಳಗಿದ ಕನ್ನಡ: ಕೆನಡಾ ಸಂಸದ ಚಂದ್ರ ಆರ್ಯರಿಂದ ಕನ್ನಡದಲ್ಲೇ ಭಾಷಣ

33 ವರ್ಷದ ಪುರುಷನಿಗೂ ಪಿರಿಯಡ್ಸ್​! ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಆಘಾತ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 1 =
Remember me
